ಡೆಲ್ಲಿ ಮ್ಯಾರಥಾನ್: ಬೆಲಿಹು, ಗೆಮೆಚು ಚಾಂಪಿಯನ್ಸ್
Team Udayavani, Oct 20, 2019, 11:41 PM IST
ಹೊಸದಿಲ್ಲಿ: ರವಿವಾರ ಇಲ್ಲಿ ನಡೆದ ಡೆಲ್ಲಿ ಹಾಫ್ ಮ್ಯಾರಥಾನ್ನಲ್ಲಿ ಇಥಿಯೋಪಿಯಾದ ಆ್ಯತ್ಲೀಟ್ಗಳಾದ ಅಂಡಮ್ಲಾಕ್ ಬೆಲಿಹು ಮತ್ತು ತ್ಸೆಹೆ ಗೆಮೆಚು ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರಿಬ್ಬರೂ ಹಾಲಿ ಚಾಂಪಿಯನ್ಸ್ ಆಗಿದ್ದರು.
ಬೆಲಿಹು 59 ನಿಮಿಷ, 10 ಸೆಕೆಂಡ್ಸ್ನಲ್ಲಿ ಗುರಿ ಸೇರಿ ಮೊದಲಿಗರಾದರು. ಕಳೆದ ಆವೃತ್ತಿಯಲ್ಲಿ 59 ನಿಮಿಷ, 18 ಸೆಕೆಂಡ್ಸ್ ಸಾಧನೆ ದಾಖಲಿಸಿದ್ದರು. ಈ ಬಾರಿ ಕೇವಲ 2 ಸೆಕೆಂಡ್ಸ್ ಅಂತರದಿಂದ ವಿಶ್ವ ದಾಖಲೆ ಅವಕಾಶ ಕಳೆದುಕೊಂಡರು.
ಮಹಿಳಾ ಸ್ಪರ್ಧಿ ತ್ಸೆಹೆ ಗೆಮೆಚು 66 ನಿಮಿಷ ದಲ್ಲಿ ಗುರಿ ತಲುಪಿ ವೈಯಕ್ತಿಕ ದಾಖಲೆಯನ್ನು ಉತ್ತಮ ಪಡಿಸಿಕೊಂಡರು.