ತೀವ್ರ ಮಾಲಿನ್ಯದ ನಡುವೆಯೇ ದಿಲ್ಲಿ ಟಿ20 ಪಂದ್ಯ

ಈಗ ಪಂದ್ಯದ ತಾಣವನ್ನು ಬದಲಿಸಲಾಗದು;ಪರಿಸ್ಥಿತಿ ಸುಧಾರಿಸುವ ನಂಬಿಕೆಯಲ್ಲಿ ಬಿಸಿಸಿಐ

Team Udayavani, Nov 2, 2019, 12:19 AM IST

PTI11_1_2019_000052A

ಹೊಸದಿಲ್ಲಿ: ಕಳೆದ 15 ದಿನಗಳಿಂದ ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ವಾಯುಮಾಲಿನ್ಯ ಅತಿಯಾಗಿದೆ. ಇದರಿಂದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಸಾರ್ವಜನಿಕ ಆರೋಗ್ಯ ಇಲಾಖೆ ತುರ್ತುಸ್ಥಿತಿ ಘೋಷಿಸಿದೆ. ಇಂತಹ ಸ್ಥಿತಿಯಲ್ಲಿ ಕ್ರಿಕೆಟ್‌ ಪಂದ್ಯವನ್ನು ಹೇಗೆ ಆಡಿಸುತ್ತೀರಿ ಎಂಬ ಪ್ರಶ್ನೆಗಳು ಉದ್ಭವವಾಗಿವೆ. ಇದರ ಮಧ್ಯೆಯೇ ನ. 3ರ ರವಿವಾರ ಭಾರತ-ಬಾಂಗ್ಲಾದೇಶ ನಡುವಿನ ಮೊದಲ ಟಿ20 ಪಂದ್ಯವನ್ನು ನಡೆಸುತ್ತೇವೆ ಎಂದು ಬಿಸಿಸಿಐ ಬಲವಾಗಿ ಹೇಳಿದೆ.

ದೀಪಾವಳಿ ಮುಗಿದ ಅನಂತರ ಹೊಸದಿಲ್ಲಿಯಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ, ಆದ್ದರಿಂದ ಆಟಗಾರರಿಗೆ ಸಮಸ್ಯೆ ಯಾಗುತ್ತದೆ. ಪಂದ್ಯ ಆಡಿಸಬೇಡಿ ಎಂದು ಹಲವರು ಒತ್ತಾಯಿಸಿದ್ದಾರೆ. ಇದಕ್ಕೆ ಬಿಸಿಸಿಐ ಮಣಿದಿಲ್ಲ.

ಸ್ಥಳಾಂತರ ಅಸಾಧ್ಯ
“ನಮಗೆ ವಾಯುಮಾಲಿನ್ಯ ನಿಯಂತ್ರಣ ಮಂಡಳಿ, ರವಿವಾರದ ವೇಳೆ ಪರಿಸ್ಥಿತಿ ತಿಳಿಯಾ ಗುತ್ತದೆ ಎಂಬ ಮಾಹಿತಿ ನೀಡಿದೆ. ಅಲ್ಲದೇ ಈಗ ಪಂದ್ಯದ ತಾಣವನ್ನು ಬದಲಾಯಿಸುವುದು ಸೂಕ್ತವಲ್ಲ’ ಎನ್ನುವುದು ಬಿಸಿಸಿಐ ನಿಲುವು.

ಇನ್ನೊಂದು ಕಡೆ ಬಿಸಿಸಿಐ ನೂತನ ಪದಾಧಿಕಾರಿಗಳಿಗೆ ಈ ವಿಚಾರದಲ್ಲಿ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವೂ ಆಗದಂತಹ ಪರಿಸ್ಥಿತಿಯಿದೆ. ಇದಕ್ಕೆ ಸಮಯಾವಕಾಶದ ಕೊರತೆಯೇ ಕಾರಣ.

ಈ ವಿಚಾರದಲ್ಲಿ ಪರೋಕ್ಷವಾಗಿ ಗೌತಮ್‌ ಗಂಭೀರ್‌ ಬಿಸಿಸಿಐ ಬೆಂಬಲಕ್ಕೆ ಧಾವಿಸಿದ್ದಾರೆ. ಕ್ರಿಕೆಟ್‌ ಪಂದ್ಯವೊಂದು ಸಣ್ಣ ವಿಚಾರ. ಜನ ನಿಜಕ್ಕೂ ಗಮನಿಸಬೇಕಾಗಿರುವುದು ಮಾಲಿನ್ಯದ ತೀವ್ರತೆಯನ್ನು ಎಂದು ಗಂಭೀರ್‌ ಹೇಳಿದ ಅನಂತರ ಬಿಸಿಸಿಐ ಪರ ಮಾತೂ ಕೇಳಿಬರುತ್ತಿದೆ.

ಪರಿಸ್ಥಿತಿ ಸರಿಯಿಲ್ಲ, ಹಾಗಂತ ಯಾರೂ ಸಾಯುವ ಸ್ಥಿತಿಯಲ್ಲಿಲ್ಲ!
ಹೊಸದಿಲ್ಲಿಯ ವಾಯುಮಾಲಿನ್ಯದ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಾಂಗ್ಲಾ ಕ್ರಿಕೆಟ್‌ ತಂಡದ ತರಬೇತುದಾರ ಡೊಮಿಂಗೊ ರಸೆಲ್‌, “ಇಲ್ಲಿನ ಪರಿಸ್ಥಿತಿ ಉತ್ತಮವಾಗಿಲ್ಲ ನಿಜ, ಹಾಗಂತ ಯಾರೂ ಸಾಯುವ ಸ್ಥಿತಿಯಲ್ಲಿಲ್ಲ’ ಎಂದಿದ್ದಾರೆ.

“ನಮಗೇನೂ ಮಾಲಿನ್ಯ ಹೊಸತಲ್ಲ, ನಮಗೆ ಇದರ ಅನುಭವವಿದೆ. ಇದೆಲ್ಲ ಕೆಲವು ದೇಶಗಳಿಗೆ ಮಾತ್ರ ದೊಡ್ಡ ಸುದ್ದಿ ಅನಿಸಬಹುದು. ಗಂಟಲು ನೋವು, ಕಣ್ಣುಕೆರೆತ ಇದೆ. ಪರಾÌಗಿಲ್ಲ, ಹೊಂದಿಕೊಳ್ಳಬಹುದು. ಬಾಂಗ್ಲಾಕ್ಕೆ ಮಾತ್ರವಲ್ಲ, ಎರಡೂ ತಂಡಗಳಿಗೆ ಇದು ಸಮಸ್ಯೆಯಾಗಿದೆ’ ಎಂದು ಡೊಮಿಂಗೊ ಹೇಳಿದ್ದಾರೆ.

“ಇದು ಕೇವಲ 3 ಗಂಟೆಗಳ ಪಂದ್ಯ. ಇದನ್ನು ಆಡುವುದು ಕಷ್ಟವೇನಲ್ಲ. ಶ್ರೀಲಂಕಾ ಆಟಗಾರರು ಹಿಂದೆ ಕಷ್ಟಪಟ್ಟಿದ್ದಾರೆ ಎಂಬುದು ಗೊತ್ತು. ಆದರೆ ಬಾಂಗ್ಲಾದೇಶದಲ್ಲೂ ಇಂಥದೇ ಪರಿಸ್ಥಿತಿಯಿದೆ. ಆಟಗಾರರು ಪಂದ್ಯದ ಕಡೆಗೆ ಗಮನಹರಿಸಿದ್ದಾರೆ. ವಾತಾವರಣದ ಬಗ್ಗೆ ತೀವ್ರವಾಗಿ ತಲೆಕೆಡಿಸಿಕೊಂಡಿಲ್ಲ’ ಎಂದಿದ್ದಾರೆ.

ಆಟಕ್ಕೆ ತೊಂದರೆ ಇಲ್ಲ: ವಿಕ್ರಂ ರಾಥೋಡ್‌
ದಿಲ್ಲಿಯಲ್ಲಿ ವಾಯುಮಾಲಿನ್ಯದ ತೀವ್ರತೆ ಹೆಚ್ಚಿದೆ, ಆದರೂ ನಾವು ಪಂದ್ಯವನ್ನು ಆಡುತ್ತೇವೆ ಎಂದು ಭಾರತ ತಂಡದ ಬ್ಯಾಟಿಂಗ್‌ ಕೋಚ್‌ ವಿಕ್ರಂ ರಾಥೋಡ್‌ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ರಾಥೋಡ್‌, “ದಿಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಇದು ಎಲ್ಲರಿಗೂ ತಿಳಿದ ವಿಚಾರ. ಆದರೆ ಇಲ್ಲಿ ಕ್ರಿಕೆಟ್‌ ಆಡಲಾಗದಷ್ಟು ಮಟ್ಟಿಗೆ ತೊಂದರೆ ಸಂಭವಿಸಿಲ್ಲ. ಅಭ್ಯಾಸದ ವೇಳೆ ಭಾರತ, ಬಾಂಗ್ಲಾ ಆಟಗಾರರು ಈ ಕುರಿತು ಆಕ್ಷೇಪ ವ್ಯಕ್ತಪಡಿಸಿಲ್ಲ. ಹೀಗಾಗಿ ಮೊದಲೇ ನಿಗದಿಯಾದಂತೆ ಪಂದ್ಯ ನಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ’ ಎಂದಿದ್ದಾರೆ.

ಟಾಪ್ ನ್ಯೂಸ್

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

1-RCB

RCB ; ರವಿವಾರ ಕೆಕೆಆರ್‌ ವಿರುದ್ಧ ಈಡನ್‌ನಲ್ಲಿ ಗೋ ಗ್ರೀನ್‌ ಗೇಮ್‌

1-ewqe

Olympics ಅರ್ಹತೆ ತಪ್ಪುವ ಭೀತಿಯಲ್ಲಿ ದೀಪಕ್‌, ಸುಜೀತ್‌

1-wqewqewq

Doping: ಶಾಲು ಚೌಧರಿ ದೋಷಮುಕ್ತ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.