ಕೊರೊನಾ ಭೀತಿಯಲ್ಲಿ ದಿಲ್ಲಿ ವಿಶ್ವಕಪ್‌ ಶೂಟಿಂಗ್‌


Team Udayavani, Feb 26, 2020, 11:30 PM IST

vishwacup-shooting

ಹೊಸದಿಲ್ಲಿ: ಕೊರೊನಾ ವೈರಸ್‌ ಭೀತಿಯಿಂದಾಗಿ ಹೊಸದಿಲ್ಲಿ ಆತಿಥ್ಯದಲ್ಲಿ ಮುಂದಿನ ತಿಂಗಳು ನಡೆಯಲಿರುವ ವಿಶ್ವಕಪ್‌ ಶೂಟಿಂಗ್‌ ಕೂಟದಿಂದ ಚೀನ ಸೇರಿದಂತೆ ಒಟ್ಟು 6 ರಾಷ್ಟ್ರಗಳು ಹೊರಬಿದ್ದಿವೆ.

ಭಾರತೀಯ ರಾಷ್ಟ್ರೀಯ ರೈಫ‌ಲ್‌ ಸಂಸ್ಥೆ (ಎನ್‌ಆರ್‌ಎಐ) ಅಧ್ಯಕ್ಷ ರಣಿಂದರ್‌ ಸಿಂಗ್‌ ಇದನ್ನು ಸ್ಪಷ್ಟಪಡಿಸಿದ್ದಾರೆ. ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಚೀನ ತಾನಾಗಿಯೇ ಹಿಂದಕ್ಕೆ ಸರಿದಿದೆ. ಈಗ ತೈವಾನ್‌, ಹಾಂಕಾಂಗ್‌, ಮಕಾವ್‌, ಉತ್ತರ ಕೊರಿಯಾ ಹಾಗೂ ತುರ್ಕ್‌
ಮೆನಿಸ್ಥಾನ ರಾಷ್ಟ್ರಗಳು ಕೂಡ ಕೂಟದಿಂದ ಹಿಂದೆ ಸರಿಯಲು ನಿರ್ಧರಿಸಿವೆ.

ಸದ್ಯದ ಪರಿಸ್ಥಿತಿಯಲ್ಲಿ ಅಲ್ಲಿನ ಸರಕಾರಗಳು ಕೊರೊನಾ ವೈರಸ್‌ ಭೀತಿಯಿಂದಾಗಿ ವಿದೇಶಿ ಪ್ರಯಾಣಕ್ಕೆ ಕಡಿವಾಣ ಹಾಕಿವೆ. ರಾಷ್ಟ್ರೀಯ ನಿಯಮದಡಿ ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂದರು.

ಪಾಕಿಸ್ಥಾನ ಕೂಡ ಗೈರು
ಇದೇ ವೇಳೆ ಪಾಕಿಸ್ಥಾನ ಕೂಡ ಈ ಕೂಟದಿಂದ ಹಿಂದಕ್ಕೆ ಸರಿದಿದೆ. ಮುಂಬರುವ ಒಲಿಂಪಿಕ್ಸ್‌ ಅಭ್ಯಾಸಕ್ಕಾಗಿ ಅಲ್ಲಿನ ಸ್ಪರ್ಧಿಗಳು ಜರ್ಮನಿಗೆ ತೆರಳಿದ್ದಾರೆ. ಹೀಗಾಗಿ ಕೂಟದಲ್ಲಿ ಭಾಗವಹಿಸುವುದಿಲ್ಲ ಎಂದು ಪಾಕಿಸ್ಥಾನ ಶೂಟಿಂಗ್‌ ಸಂಸ್ಥೆ ಹೇಳಿಕೊಂಡಿದೆ.

ಕಳೆದ ವರ್ಷದ ಶೂಟಿಂಗ್‌ ವೇಳೆ ಪಾಕ್‌ ಕ್ರೀಡಾಪಟು ಹಾಗೂ ಅಧಿಕಾರಿಗಳಿಗೆ ಭಾರತದ ವೀಸಾ ನಿರಾಕರಿಸಲಾಗಿತ್ತು. ಹೀಗಾಗಿ ಮತ್ತೂಮ್ಮೆ ಭಾರತ ವೀಸಾ ನಿರಾಕರಿಸಿತೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ರಣಿಂದರ್‌, “ಕಳೆದ ವರ್ಷಕ್ಕೂ ಇದಕ್ಕೂ ಹೋಲಿಕೆ ಬೇಡ. ಪಾಕಿಸ್ಥಾನದ ಇಬ್ಬರು ಶೂಟರ್‌ಗಳು ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಹೀಗಾಗಿ ಈ ಕೂಟ ದಲ್ಲಿ ಪಾಲ್ಗೊಳ್ಳಲು ಸಾಧ್ಯವೇ ಇಲ್ಲ’ ಎಂದು ತಿಳಿಸಿದರು.

ಐಎಸ್‌ಎಸ್‌ಎಫ್ ವಿಶ್ವಕಪ್‌ ಶೂಟಿಂಗ್‌ ಮಾ. 15ರಿಂದ 25ರ ತನಕ “ಕರ್ಣಿ ಸಿಂಗ್‌ ಶೂಟಿಂಗ್‌ ರೇಂಜ್‌’ನಲ್ಲಿ ನಡೆಯಲಿದೆ.

ದೇಶದಲ್ಲೇ ತರಬೇತಿ ಪಡೆಯಿರಿ: ಎನ್‌ಆರ್‌ಎಐ
ಕೊರೊನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ದೇಶದಲ್ಲೇ ಇದ್ದು ತರಬೇತಿ ಪಡೆಯುವಂತೆ ಭಾರತೀಯ ರಾಷ್ಟ್ರೀಯ ಶೂಟಿಂಗ್‌ ಸಂಸ್ಥೆ (ಎನ್‌ಆರ್‌ಎಐ) ಶೂಟರ್‌ಗಳಿಗೆ ಸೂಚಿಸಿದೆ. ವಿದೇಶಗಳಲ್ಲಿ ತರಬೇತಿ ಪಡೆಯುವುದನ್ನು ನಿಷೇಧಿಸಿದೆ. ಕೊರೊನಾ ವೈರಸ್‌ ಹತೋಟಿಗೆ ಬಾರದಿದ್ದರೆ ಒಲಿಂಪಿಕ್ಸ್‌ ಅರ್ಹತಾ ಕೂಟದಿಂದ ಹಿಂದಕ್ಕೆ ಸರಿಯುವುದಾಗಿಯೂ ತಿಳಿಸಿದೆ. ಎ. 16ರಿಂದ ಟೋಕಿಯೋದಲ್ಲಿ ಒಲಿಂಪಿಕ್ಸ್‌ ಅರ್ಹತಾ ಸುತ್ತು ಆರಂಭವಾಗಲಿದೆ.

ಟಾಪ್ ನ್ಯೂಸ್

fghjjjjjjjjjjjjjjjjjjjjjjjj

ಒಮಿಕ್ರಾನ್‌ : ಭಾರತೀಯರು ಸುರಕ್ಷಿತ, ಯಾವುದೇ ರೂಪಾಂತರಿಗೂ ಹೆದರಬೇಕಿಲ್ಲ: ಡಾ.ಜಮೀಲ್‌

rwytju11111111111

ಬುಧವಾರದ ರಾಶಿ ಫಲ : ಇಲ್ಲಿದೆ ಓದಿ ನಿಮ್ಮ ಗ್ರಹಬಲ

ತಿಂಗಳು ಕಳೆದರೂ ಸಿಗದ ಸಮವಸ್ತ್ರ

ತಿಂಗಳು ಕಳೆದರೂ ಸಿಗದ ಸಮವಸ್ತ್ರ

ಟ್ವಿಟರ್‌ಗೆ ಪರಾಗ್‌ ಸ್ಪರ್ಶ

ಟ್ವಿಟರ್‌ಗೆ ಪರಾಗ್‌ ಅಗರ್ವಾಲ್‌ ಸ್ಪರ್ಶ

ದ.ಕ.: 4 ವರ್ಷಗಳಲ್ಲಿ 133 ಮಂದಿ ನಾಪತ್ತೆ

ದ.ಕ.: 4 ವರ್ಷಗಳಲ್ಲಿ 133 ಮಂದಿ ನಾಪತ್ತೆ

ಕಾರ್ಪೋರೆಟ್‌ ಜಗದಲ್ಲಿ ಭಾರತದ ಪತಾಕೆ!

ಕಾರ್ಪೋರೆಟ್‌ ಜಗದಲ್ಲಿ ಭಾರತದ ಪತಾಕೆ!

ಏಡ್ಸ್‌ ನಿರ್ಮೂಲನೆಯ ಪಣ ತೊಡೋಣ ; ಅಸಮಾನತೆ ಕೊನೆಗೊಳಿಸೋಣ

ಏಡ್ಸ್‌ ನಿರ್ಮೂಲನೆಯ ಪಣ ತೊಡೋಣ ; ಅಸಮಾನತೆ ಕೊನೆಗೊಳಿಸೋಣಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7ನೇ ಬಾರಿ ಬ್ಯಾಲನ್‌ ಡಿ’ ಓರ್‌ ಪ್ರಶಸ್ತಿ ಗೆದ್ದ ಲಿಯೋನೆಲ್‌ ಮೆಸ್ಸಿ

7ನೇ ಬಾರಿ ಬ್ಯಾಲನ್‌ ಡಿ’ ಓರ್‌ ಪ್ರಶಸ್ತಿ ಗೆದ್ದ ಲಿಯೋನೆಲ್‌ ಮೆಸ್ಸಿ

ದ್ವಿತೀಯ ಟೆಸ್ಟ್‌ಗೆ ವಿರಾಟ್‌ ಕೊಹ್ಲಿ ಲಭ್ಯ; ಆಡುವ ಬಳಗದ ಆಯ್ಕೆಯೇ ಸವಾಲು

ದ್ವಿತೀಯ ಟೆಸ್ಟ್‌ಗೆ ವಿರಾಟ್‌ ಕೊಹ್ಲಿ ಲಭ್ಯ; ಆಡುವ ಬಳಗದ ಆಯ್ಕೆಯೇ ಸವಾಲು

ಐಪಿಎಲ್‌: ರಿಟೈನ್‌ ಆಟಗಾರರ ಪಟ್ಟಿ ರಿಲೀಸ್‌

ಐಪಿಎಲ್‌: ರಿಟೈನ್‌ ಆಟಗಾರರ ಪಟ್ಟಿ ರಿಲೀಸ್‌

SAಭಾರತೀಯ ಕ್ರಿಕೆಟಿಗರ ಸುರಕ್ಷೆಗೆ ನಾವು ಬದ್ಧ: ದಕ್ಷಿಣ ಆಫ್ರಿಕಾ

ಭಾರತೀಯ ಕ್ರಿಕೆಟಿಗರ ಸುರಕ್ಷೆಗೆ ನಾವು ಬದ್ಧ: ದಕ್ಷಿಣ ಆಫ್ರಿಕಾ

ಟೆಸ್ಟ್‌ : ಬಾಂಗ್ಲಾದೇಶ ವಿರುದ್ಧ ಪಾಕಿಸ್ಥಾನಕ್ಕೆ 8 ವಿಕೆಟ್‌ ಜಯ

ಟೆಸ್ಟ್‌ : ಬಾಂಗ್ಲಾದೇಶ ವಿರುದ್ಧ ಪಾಕಿಸ್ಥಾನಕ್ಕೆ 8 ವಿಕೆಟ್‌ ಜಯ

MUST WATCH

udayavani youtube

ಕಾಪು ಪರಿಸರದಲ್ಲಿ ಗಾಳಿ, ಗುಡುಗು, ಮಿಂಚು ಸಹಿತ ಭಾರೀ ಮಳೆ

udayavani youtube

ದನಗಳ್ಳರನ್ನು ಹಿಡಿಯಲು ಹೋದವರ ಮೇಲೆ ವಾಹನ ಚಲಾಯಿಸಿ ಹಲ್ಲೆ: ಇಬ್ಬರಿಗೆ ಗಂಭೀರ ಗಾಯ

udayavani youtube

ಸುಟ್ಟಗಾಯ ಸಂರ್ಪೂಣ ನಿವಾರಣೆ ಆಗಲು ಈ ನಾಟಿ ವೈದ್ಯರ ಬಳಿ ಇದೆ ಔಷಧಿ.

udayavani youtube

ಕಸ್ತೂರಿರಂಗನ್ ಸಮೀಕ್ಷೆ ಅವೈಜ್ಞಾನಿಕ !?

udayavani youtube

ಭಾರತದಲ್ಲಿ ವ್ಯಾಸಂಗ ಮಾಡಿದ್ದನಂತೆ ಈ ತಾಲಿಬಾನ್‌ ವಕ್ತಾರ!

ಹೊಸ ಸೇರ್ಪಡೆ

fghjjjjjjjjjjjjjjjjjjjjjjjj

ಒಮಿಕ್ರಾನ್‌ : ಭಾರತೀಯರು ಸುರಕ್ಷಿತ, ಯಾವುದೇ ರೂಪಾಂತರಿಗೂ ಹೆದರಬೇಕಿಲ್ಲ: ಡಾ.ಜಮೀಲ್‌

rwytju11111111111

ಬುಧವಾರದ ರಾಶಿ ಫಲ : ಇಲ್ಲಿದೆ ಓದಿ ನಿಮ್ಮ ಗ್ರಹಬಲ

ತಿಂಗಳು ಕಳೆದರೂ ಸಿಗದ ಸಮವಸ್ತ್ರ

ತಿಂಗಳು ಕಳೆದರೂ ಸಿಗದ ಸಮವಸ್ತ್ರ

ಟ್ವಿಟರ್‌ಗೆ ಪರಾಗ್‌ ಸ್ಪರ್ಶ

ಟ್ವಿಟರ್‌ಗೆ ಪರಾಗ್‌ ಅಗರ್ವಾಲ್‌ ಸ್ಪರ್ಶ

ದ.ಕ.: 4 ವರ್ಷಗಳಲ್ಲಿ 133 ಮಂದಿ ನಾಪತ್ತೆ

ದ.ಕ.: 4 ವರ್ಷಗಳಲ್ಲಿ 133 ಮಂದಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.