ಮೊದಲ ಫೈನಲ್‌ ಕನಸಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌

ಇಂದು ಮುಂಬೈ-ಡೆಲ್ಲಿ ಮೊದಲ ಕ್ವಾಲಿಫೈಯರ್‌ ಸೆಣಸಾಟ ಗೆದ್ದವರಿಗೆ ನೇರ ಫೈನಲ್‌; ಸೋತವರಿಗೆ ಇನ್ನೊಂದು ಚಾನ್ಸ್‌

Team Udayavani, Nov 5, 2020, 5:55 AM IST

IPL-2ಮೊದಲ ಫೈನಲ್‌ ಕನಸಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌

ದುಬಾೖ: ಒಂದು ದಿನದ ವಿರಾಮದ ಬಳಿಕ 2020ರ ಐಪಿಎಲ್‌ ಪಂದ್ಯಾವಳಿ ಮತ್ತೂಂದು ಸುತ್ತಿನ ಕುತೂಹಲಕ್ಕೆ ಸಜ್ಜಾಗಲಿದೆ. ಲೀಗ್‌ ಹಂತದ ಮೊದಲೆರಡು ಸ್ಥಾನ ಪಡೆದ ಮುಂಬೈ ಇಂಡಿಯನ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ಗುರುವಾರ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಮುಖಾಮುಖೀಯಾಗಲಿವೆ. ಗೆದ್ದವರರು ನೇರವಾಗಿ ಫೈನಲ್‌ಗೆ ಲಗ್ಗೆ ಇಡಲಿದ್ದಾರೆ. ಸೋತವರಿಗೇನೂ ನಷ್ಟವಿಲ್ಲ, ಅವರ ಮುಂದೆ ಇನ್ನೊಂದು ಅವಕಾಶ ತೆರೆದುಕೊಳ್ಳಲಿದೆ.

ಡೆಲ್ಲಿ ಅಷ್ಟೇನೂ ಜನಪ್ರಿಯ ಹಾಗೂ ಸ್ಟಾರ್‌ ತಂಡವಲ್ಲ. ಭಾರೀ ಸಂಖ್ಯೆಯ ಅಭಿಮಾನಿಗಳನ್ನೂ ಹೊಂದಿಲ್ಲ. ಆದರೆ ಸತತ 4 ಸೋಲುಗಳ ಆಘಾತದ ನಡುವೆಯೂ ಅಂತಿಮ ಲೀಗ್‌ ಪಂದ್ಯದಲ್ಲಿ ಬಲಿಷ್ಠ ಆರ್‌ಸಿಬಿಯನ್ನು 6 ವಿಕೆಟ್‌ಗಳಿಂದ ಉರುಳಿಸಿದ ಖುಷಿಯಲ್ಲಿದೆ. ಇದರಿಂದ ಅದಕ್ಕೆ ದ್ವಿತೀಯ ಸ್ಥಾನದ ಅದೃಷ್ಟ ಒಲಿಯಿತು. ಇಲ್ಲಿಂದಾಚೆಯೂ ತಂಡಕ್ಕೆ ಲಕ್‌ ಇದೆಯೇ ಎಂಬುದು ಮಿಲಿಯನ್‌ ಡಾಲರ್‌ ಪ್ರಶ್ನೆ!

ಡೆಲ್ಲಿ ಐಪಿಎಲ್‌ ಇತಿಹಾಸದಲ್ಲಿ ಒಮ್ಮೆಯೂ ಚಾಂಪಿಯನ್‌ ಆದ ತಂಡವಲ್ಲ. ಅಷ್ಟೇಕೆ, ಫೈನಲ್‌ ಮುಖವನ್ನೂ ಕಂಡ ತಂಡ ಅದಲ್ಲ. ಈ ಬಾರಿ ಅದು ನೂತನ ಇತಿಹಾಸ ಬರೆದೀತೇ ಎಂಬ ಕುತೂಹಲ ಎಲ್ಲರದು.

ಲೀಗ್‌ನಲ್ಲಿ ಎರಡು ಸೋಲು
ಶ್ರೇಯಸ್‌ ಅಯ್ಯರ್‌ ನೇತೃತ್ವದ ಡೆಲ್ಲಿ ಲೀಗ್‌ ಹಂತದ ಎರಡೂ ಪಂದ್ಯಗಳಲ್ಲಿ ಮುಂಬೈಗೆ ಶರಣಾಗಿತ್ತು. ಎರಡೂ ಸಂದರ್ಭಗಳಲ್ಲಿ ಅದು ಮೊದಲು ಬ್ಯಾಟಿಂಗ್‌ ನಡೆಸಿತ್ತು, ಮುಂಬೈ ಯಶಸ್ವಿಯಾಗಿ ರನ್‌ ಚೇಸ್‌ ಮಾಡಿತ್ತು. ಈ ಎರಡು ಸೋಲಿಗೆ ಕ್ವಾಲಿಫೈಯರ್‌ನಲ್ಲಿ ಸೇಡು ತೀರಿಸುವುದು ಡೆಲ್ಲಿಯ ಯೋಜನೆ. ಆದರೆ ಅಸ್ಥಿರ ಬ್ಯಾಟಿಂಗ್‌ ಮತ್ತು ಸೀಮಿತ ಸಾಮರ್ಥ್ಯದ ಬೌಲಿಂಗ್‌ ಡೆಲ್ಲಿ ಪಾಲಿನ ಚಿಂತೆಯ ಸಂಗತಿಯಾಗಿದೆ.

ಬ್ಯಾಟಿಂಗ್‌ ವಿಭಾಗದಲ್ಲಿ ಪೃಥ್ವಿ ಶಾ, ರಿಷಭ್‌ ಪಂತ್‌ ಬದ್ಧತೆಯನ್ನು ತೋರಬೇಕಾದ ಅಗತ್ಯವಿದೆ. ಅವಕಾಶ ಪಡೆದರೆ ಹೆಟ್‌ಮೈರ್‌ ಸಿಡಿದು ನಿಲ್ಲಬೇಕಿದೆ. ಶಿಖರ್‌ ಧವನ್‌ (525 ರನ್‌), ಶ್ರೇಯಸ್‌ ಅಯ್ಯರ್‌ (421 ರನ್‌) ಮಾತ್ರ ಈ ವರೆಗೆ ಡೆಲ್ಲಿಯ ನಂಬುಗೆಯ ಬ್ಯಾಟ್ಸ್‌ಮನ್‌ಗಳಾಗಿ ಗೋಚರಿದ್ದಾರೆ. ಕಳೆದ ಪಂದ್ಯದಲ್ಲಿ ರಹಾನೆ ಅರ್ಧ ಶತಕ ಬಾರಿಸಿ ತಂಡಕ್ಕೆ ಹೊಸ ಭರವಸೆ ಮೂಡಿಸಿದ್ದಾರೆ.

ಡೆಲ್ಲಿಯ ಬೌಲಿಂಗ್‌ ಆಫ್ರಿಕಾದ ವೇಗಿಗಳಾದ ಕಾಗಿಸೊ ರಬಾಡ, ಅನ್ರಿಚ್‌ ನೋರ್ಜೆ; ಭಾರತದ ಸ್ಪಿನ್‌ದ್ವಯರಾದ ರವಿಚಂದ್ರನ್‌ ಅಶ್ವಿ‌ನ್‌, ಅಕ್ಷರ್‌ ಪಟೇಲ್‌ ಅವರನ್ನು ಅವಲಂಬಿಸಿದೆ.

ಮುಂಬೈ ಹೆಚ್ಚು ಬಲಿಷ್ಠ
4 ಬಾರಿಯ ಚಾಂಪಿಯನ್‌ ಮುಂಬೈ ಈ ಕೂಟದ ಅತ್ಯಂತ ಬಲಾಡ್ಯ ತಂಡ. ಬ್ಯಾಟಿಂಗ್‌, ಬೌಲಿಂಗ್‌ ಹಾಗೂ ಆಲ್‌ರೌಂಡ್‌ ಸಾಮರ್ಥ್ಯದಲ್ಲಿ ಮುಂಬೈಯನ್ನು ಮೀರಿಸುವವರಿಲ್ಲ. ನಾಯಕ ರೋಹಿತ್‌ ಶರ್ಮ ಮರಳಿದ್ದರಿಂದ ತಂಡಕ್ಕೆ ಹೆಚ್ಚಿನ ಬಲ ಬಂದಿದೆ ನಿಜ, ಆದರೆ ರೋಹಿತ್‌ ಇಲ್ಲದೆಯೂ ಅದು ಗೆಲುವಿನ ರುಚಿ ಕಂಡಿದೆ. ಮಂಗಳವಾರ ಹೈದರಾಬಾದ್‌ಗೆ 10 ವಿಕೆಟ್‌ಗಳಿಂದ ಸೋತರೂ ಮುಂಬೈಯ ಕ್ವಾಲಿಫೈಯರ್‌ ಸ್ಪರ್ಧೆಯ ಗೇಮ್‌ಪ್ಲ್ರಾನ್‌ ಮಾತ್ರ ಬೇರೆಯೇ ಆಗಿರಲಿದೆ!

ಲೀಗ್‌ ಸುತ್ತಿನಲ್ಲಿ ಮುಂಬೈ-ಡೆಲ್ಲಿ
1. ಮುಂಬೈಗೆ 5 ವಿಕೆಟ್‌ ಜಯ
2. ಮುಂಬೈಗೆ 9 ವಿಕೆಟ್‌ ಜಯ

ಟಾಪ್ ನ್ಯೂಸ್

ಈಶ್ವರಪ್ಪ

ಹೈಕಮಾಂಡ್ ನಿಂದ ಸಚಿವರ ರಹಸ್ಯ ವರದಿ ವಿಚಾರ ನನಗೆ ಗೊತ್ತಿಲ್ಲ: ಈಶ್ವರಪ್ಪ

ಕುತೂಹಲ ಮೂಡಿಸಿದ ಪ್ರಧಾನಿ ಮೋದಿ-ದೇವೇಗೌಡರ ಭೇಟಿ

ಕುತೂಹಲ ಮೂಡಿಸಿದ ಪ್ರಧಾನಿ ಮೋದಿ-ದೇವೇಗೌಡರ ಭೇಟಿ

corona-positive

ತುಮಕೂರಿನಲ್ಲಿ ಕೇರಳದಿಂದ ಬಂದ ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ದೃಢ

ಸಚಿವ ಅಶೋಕ್

ಕೋವಿಡ್ ಹೆಚ್ಚಾದರೆ ಹಿಂದೆ ಇದ್ದ ನಿಯಮಗಳೇ ಜಾರಿ: ಸಚಿವ ಅಶೋಕ್

ಭಾರತದಲ್ಲಿ ಈವರೆಗೆ ಒಮಿಕ್ರಾನ್ ವೈರಸ್ ಪತ್ತೆಯಾಗಿಲ್ಲ; ಕೇಂದ್ರ ಸಚಿವ ಮಾಂಡವೀಯಾ

ಭಾರತದಲ್ಲಿ ಈವರೆಗೆ ಒಮಿಕ್ರಾನ್ ವೈರಸ್ ಪತ್ತೆಯಾಗಿಲ್ಲ; ಕೇಂದ್ರ ಸಚಿವ ಮಾಂಡವೀಯಾ

k l rahul and rashid khan

ಐಪಿಎಲ್ ನಿಂದ ಕೆ.ಎಲ್.ರಾಹುಲ್ ಮತ್ತು ರಶೀದ್ ಖಾನ್ ಒಂದು ವರ್ಷ ಬ್ಯಾನ್?

ಚಿಕ್ಕಮಗಳೂರು: ಕಸ-ಕಡ್ಡಿ,ಹುಳ ಮಿಶ್ರಿತ ನೀರನ್ನೇ ಕುಡಿಯಬೇಕು:ಗ್ರಾಮಸ್ಥರ ಯಾತನೆಗೆ ಕೊನೆಯಿಲ್ಲ

ಚಿಕ್ಕಮಗಳೂರು: ಕಸ-ಕಡ್ಡಿ,ಹುಳ ಮಿಶ್ರಿತ ನೀರನ್ನೇ ಕುಡಿಯಬೇಕು:ಗ್ರಾಮಸ್ಥರ ಯಾತನೆಗೆ ಕೊನೆಯಿಲ್ಲಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

k l rahul and rashid khan

ಐಪಿಎಲ್ ನಿಂದ ಕೆ.ಎಲ್.ರಾಹುಲ್ ಮತ್ತು ರಶೀದ್ ಖಾನ್ ಒಂದು ವರ್ಷ ಬ್ಯಾನ್?

ಮೈದಾನದ ಸಿಬಂದಿಗೆ ದ್ರಾವಿಡ್‌ ಇನಾಮು

ಮೈದಾನದ ಸಿಬಂದಿಗೆ ದ್ರಾವಿಡ್‌ ಇನಾಮು

ಐಪಿಎಲ್‌ ಫ್ರಾಂಚೈಸಿಗಳಿಗೆ ಇಂದು ಅಂತಿಮ ಗಡುವು

ಐಪಿಎಲ್‌ ಫ್ರಾಂಚೈಸಿಗಳಿಗೆ ಇಂದು ಅಂತಿಮ ಗಡುವು

ರೂಪಾಂತರಿ ಭೀತಿ ನಡುವೆ “ಎ’ ತಂಡಗಳ ಟೆಸ್ಟ್‌

ರೂಪಾಂತರಿ ಭೀತಿ ನಡುವೆ “ಎ’ ತಂಡಗಳ ಟೆಸ್ಟ್‌

ಟೀಮ್‌ ಇಂಡಿಯಾದ ಓಪನರ್‌ ಕೆ.ಎಲ್‌. ರಾಹುಲ್‌ ತುಳು ಕಮೆಂಟ್‌

ಟೀಮ್‌ ಇಂಡಿಯಾದ ಓಪನರ್‌ ಕೆ.ಎಲ್‌. ರಾಹುಲ್‌ ತುಳು ಕಮೆಂಟ್‌

MUST WATCH

udayavani youtube

ಈ ನೀರು ಕುಡಿದ್ರೆ ಕೊರೋನಾ, ಓಮಿಕ್ರಾನ್ ಅಲ್ಲ ಇನ್ನೂ ಅಪಾಯಕಾರಿ ರೋಗ ಬರಬಹುದು

udayavani youtube

‘Car’bar with Merwyn Shirva | Episode 1

udayavani youtube

ಭಾರತ – ನ್ಯೂಜಿಲ್ಯಾಂಡ್ ಟೆಸ್ಟ್ ಪಂದ್ಯ ಡ್ರಾ : ಜಯದ ಸನಿಹದಲ್ಲಿದ್ದ ಟೀಂ ಇಂಡಿಯಾಗೆ ನಿರಾಸೆ

udayavani youtube

ಫ್ರೆಂಡ್ ಪೆನ್ಸಿಲ್ ಕದ್ದ ಎಂದು ಪೊಲೀಸ್ ಠಾಣೆಗೆದೂರು ದಾಖಲಿಸಲು ಹೋದ ಪುಟ್ಟ ವಿದ್ಯಾರ್ಥಿಗಳು!

udayavani youtube

ಕಟ್ಟಡ ತೆರವಿಗೆ ಕೂಡಿ ಬರದ ಗಳಿಗೆ : ಅವಘಡ ಸಂಭವಿಸುವ ಮೊದಲು ಎಚ್ಚೆತ್ತುಕೊಳ್ಳಿ

ಹೊಸ ಸೇರ್ಪಡೆ

19upperhouse

ಮೇಲ್ಮನೆ ಚುನಾವಣೆಯಲ್ಲಿ ಬಿಜೆಪಿಗೆ 16 ಸ್ಥಾನ ನಿಶ್ಚಿತ: ಕಾರಜೋಳ

ಕಾಂಗ್ರೆಸ್‌ ಅಭ್ಯರ್ಥಿ ಗೆಲುವು ನಿಶ್ಚಿತ: ರೇವಣ್ಣ

ಕಾಂಗ್ರೆಸ್‌ ಅಭ್ಯರ್ಥಿ ಗೆಲುವು ನಿಶ್ಚಿತ: ರೇವಣ್ಣ

ಈಶ್ವರಪ್ಪ

ಹೈಕಮಾಂಡ್ ನಿಂದ ಸಚಿವರ ರಹಸ್ಯ ವರದಿ ವಿಚಾರ ನನಗೆ ಗೊತ್ತಿಲ್ಲ: ಈಶ್ವರಪ್ಪ

ಕುತೂಹಲ ಮೂಡಿಸಿದ ಪ್ರಧಾನಿ ಮೋದಿ-ದೇವೇಗೌಡರ ಭೇಟಿ

ಕುತೂಹಲ ಮೂಡಿಸಿದ ಪ್ರಧಾನಿ ಮೋದಿ-ದೇವೇಗೌಡರ ಭೇಟಿ

corona-positive

ತುಮಕೂರಿನಲ್ಲಿ ಕೇರಳದಿಂದ ಬಂದ ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ದೃಢ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.