ಶ್ರೀಕಾಂತ್‌, ಸೈನಾ ಕ್ವಾರ್ಟರ್‌ಫೈನಲಿಗೆ

Team Udayavani, Oct 20, 2018, 9:14 AM IST

ಒಡೆನ್ಸೆ (ಡೆನ್ಮಾರ್ಕ್‌): ತನ್ನ ಬಾಳ್ವೆಯಲ್ಲಿ ಎರಡನೇ ಬಾರಿ ಶ್ರೇಷ್ಠ ಆಟಗಾರ ಲಿನ್‌ ಡ್ಯಾನ್‌ ಅವರನ್ನು ಉರುಳಿಸಿದ ಕಿದಂಬಿ ಶ್ರೀಕಾಂತ್‌ ಅವರು ಡೆನ್ಮಾರ್ಕ್‌ ಓಪನ್‌ ಬ್ಯಾಡ್ಮಿಂಟನ್‌ ಕೂಟದ ಕ್ವಾರ್ಟರ್‌ಫೈನಲ್‌ ಹಂತಕ್ಕೇರಿದ್ದಾರೆ. ಕ್ವಾರ್ಟರ್‌ಫೈನಲ್‌ನಲ್ಲಿ ಅವರು ತನ್ನ ದೇಶದವರೇ ಆದ ಸಮೀರ್‌ ವರ್ಮ ಅವರ ಸವಾಲನ್ನು ಎದುರಿಸಲಿದ್ದಾರೆ. 

ಮೊದಲ ಗೇಮ್‌ ಕಳೆದು ಕೊಂಡರೂ ವಿಚಲಿತರಾಗದ ವಿಶ್ವದ ಆರನೇ ರ್‍ಯಾಂಕಿನ ಶ್ರೀಕಾಂತ್‌ ಅವರು ವಿಶ್ವದ 14ನೇ ರ್‍ಯಾಂಕಿನ ಡ್ಯಾನ್‌ ಅವರನ್ನು 18-21, 21-17, 21-16 ಗೇಮ್‌ಗಳಿಂದ ಉರುಳಿಸಿ ಮುನ್ನಡೆದರು. ಎರಡು ಬಾರಿಯ ಒಲಿಂಪಿಕ್‌ ಚಿನ್ನ ಮತ್ತು ಐದು ಬಾರಿಯ ವಿಶ್ವ ಚಾಂಪಿಯನ್‌ ಆಗಿರುವ ಡ್ಯಾನ್‌ ಈಗಲೂ ಶ್ರೇಷ್ಠ ಆಟವಾಡುತ್ತಿದ್ದಾರೆ. ಅವರಿಬ್ಬರು 5 ಬಾರಿ ಮುಖಾಮುಖೀಯಾಗಿದ್ದು ಈ ಹಿಂದಿನ ಹೋರಾಟದಲ್ಲಿ (2016ರ ರಿಯೋ ಒಲಿಂಪಿಕ್ಸ್‌ನ ಕ್ವಾರ್ಟರ್‌ಫೈನಲ್‌ ಪಂದ್ಯ) ಡ್ಯಾನ್‌ ಜಯಭೇರಿ ಬಾರಿಸಿದ್ದರು. 2014ರಲ್ಲಿ ಡ್ಯಾನ್‌ ಅವರನ್ನು ಶ್ರೀಕಾಂತ್‌ ಮೊದಲ ಬಾರಿ ಸೋಲಿಸಿ ಚೀನ ಓಪನ್‌ನ ಪ್ರಶಸ್ತಿ ಎತ್ತಿದ್ದರು. ಶ್ರೀಕಾಂತ್‌ ಅವರ ಕ್ವಾರ್ಟರ್‌ಫೈನಲ್‌ ಎದುರಾಳಿ ಸಮೀರ್‌ ವರ್ಮ ತನ್ನ ಪಂದ್ಯದಲ್ಲಿ ಇಂಡೋನೇಶ್ಯದ ಜೋನಾಥನ್‌ ಕ್ರಿಸ್ಟಿ ಅವರನ್ನು ಕೆಡಹಿದ್ದರು.

ಸೈನಾ ಕ್ವಾರ್ಟರ್‌ಫೈನಲಿಗೆ
ವನಿತಾ ಸಿಂಗಲ್ಸ್‌ನಲ್ಲಿ ಸೈನಾ ನೆಹ್ವಾಲ್‌ ವಿಶ್ವದ ಎರಡನೇ ರ್‍ಯಾಂಕಿನ ಅಕಾನೆ ಯಮಗುಚಿ ಅವರನ್ನು 21-15, 21-17 ಗೇಮ್‌ಗಳಿಂದ ಕೆಡಹಿ ಕ್ವಾರ್ಟರ್‌ಫೈನಲ್‌ ತಲುಪಿದ್ದಾರೆ. ಕಳೆದ 4 ವರ್ಷಗಳಲ್ಲಿ ಇದು ಸೈನಾ ಯಮಗುಚಿ ವಿರುದ್ಧ ಮೊದಲ ಗೆಲುವು ಆಗಿದೆ. ಕ್ವಾರ್ಟರ್‌ಫೈನಲ್‌ನಲ್ಲಿ ಸೈನಾ ಅವರು ಎಂಟನೇ ಶ್ರೇಯಾಂಕದ ನವೋಮಿ ಒಕುಹಾರ ಅವರನ್ನು ಎದುರಿಸಲಿದ್ದಾರೆ. ವನಿತಾ ಡಬಲ್ಸ್‌ನಲ್ಲಿ ಅಶ್ವಿ‌ನಿ ಪೊನ್ನಪ್ಪ ಮತ್ತು ಎನ್‌. ಸಿಕ್ಕಿ ರೆಡ್ಡಿ ಅವರು ಅಗ್ರ ಶ್ರೇಯಾಂಕದ ಯೂಕಿ ಫ‌ುಕುಶಿಮಾ ಮತ್ತು ಸಯಾಕಾ ಹಿರೋಟಾ ಅವರ ಸವಾಲಿಗೆ ಉತ್ತರಿಸಲಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಬೆಂಗಳೂರು: ನಗರದಲ್ಲಿ ಆಸ್ತಿ ಮಾಲೀಕರಿಂದ ಆಸ್ತಿ ತೆರಿಗೆಯೊಂದಿಗೆ ಶೇ.2ರಷ್ಟು ಭೂ ಸಾರಿಗೆ ಉಪ ಕರ (ಸೆಸ್‌) ವಸೂಲಿ ಮಾಡುವ ಬಿಬಿಎಂಪಿ ನಿರ್ಣಯಕ್ಕೆ ಸಾರ್ವಜನಿಕ ವಲಯದಿಂದ...

  • ಬೆಂಗಳೂರು: ನೆರೆ ಸಂತ್ರಸ್ತರು ತ್ವರಿತವಾಗಿ ಎರಡನೇ ಕಂತಿನ ಹಣವನ್ನು ಪಡೆದು ಮನೆಗಳನ್ನು ಮೂರು ತಿಂಗಳಲ್ಲಿ ನಿರ್ಮಿಸಿಕೊಳ್ಳಬೇಕು ಎಂದು ಕಂದಾಯ ಸಚಿವ ಆರ್‌.ಅಶೋಕ್‌...

  • ಮುಖ್ಯಮಂತ್ರಿ ಯಡಿಯೂರಪ್ಪ ಅವರ ದೆಹಲಿ ಭೇಟಿ ಹಿನ್ನೆಲೆಯಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತಾದ ಚರ್ಚೆ ಗರಿಗೆದರುತ್ತಿದ್ದು, ಸಚಿವಾಕಾಂಕ್ಷಿಗಳಲ್ಲಿ...

  • ಬೆಂಗಳೂರು: ಕಾರ್ಮಿಕ ಇಲಾಖೆಯಲ್ಲಿ ಖಾಲಿ ಇರುವ ಶೇ.49 ಹುದ್ದೆಗಳನ್ನು ಭರ್ತಿ ಮಾಡಿ ಕೊಳ್ಳುವ ಸಂಬಂಧ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಲಾಗುವುದು...

  • ಬೆಂಗಳೂರು: ಶಿಕ್ಷಣ ಇಲಾಖೆಯಲ್ಲಿ ಒಂದು ವಿಭಾಗದಿಂದ ಇನ್ನೊಂದು ವಿಭಾಗಕ್ಕೆ ವರ್ಗಾವಣೆ ಹೊಂದಿರುವ ಶಿಕ್ಷಕರು ಮುಂಬಡ್ತಿಯಿಂದಲೂ ವಂಚಿತರಾಗುತ್ತಿದ್ದಾರೆ. 2006ಕ್ಕಿಂತ...