
ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ : ಸಿಂಧು ಪರಾಭವ
Team Udayavani, Oct 23, 2021, 5:44 AM IST

ಒಡೆನ್ಸೆ (ಡೆನ್ಮಾಕ್): ದೊಡ್ಡದೊಂದು ಬ್ರೇಕ್ ಬಳಿಕ ಆಡಲಿಳಿದ ಪಿ.ವಿ. ಸಿಂಧು ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಕ್ವಾರ್ಟರ್ ಫೈನಲ್‌ನಲ್ಲಿ ಪರಾಭವಗೊಂಡರು. ಅವರನ್ನು ವಿಶ್ವದ ನಂ.8 ಆಟಗಾರ್ತಿ, ಕೊರಿಯಾದ ಆ್ಯನ್ ಸೆಯಂಗ್ 21-11, 21-12 ನೇರ ಗೇಮ್‌ಗಳಲ್ಲಿ ಹಿಮ್ಮೆಟ್ಟಿಸಿದರು. ಆದರೆ ಪುರುಷರ ಸಿಂಗಲ್ಸ್‌ನಲ್ಲಿ ಸಮೀರ್ ವರ್ಮ ವಿಶ್ವದ ನಂ. 3 ಆಟಗಾರ ಆ್ಯಂಡರ್ಸ್ ಆ್ಯಂಟನ್ಸೆನ್ ಅವರನ್ನು ಕೆಡವಿ ಅಚ್ಚರಿಯ ಫಲಿತಾಂಶ ದಾಖಲಿಸಿದರು.
ಡೆನ್ಮಾರ್ಕ್‌ನಲ್ಲಿ ನಡೆದ ಕಳೆದ ಪಂದ್ಯಾವಳಿಯಲ್ಲೂ ಆ್ಯನ್ ಸೆಯಂಗ್ ವಿರುದ್ಧ ಸಿಂಧು ನೇರ ಗೇಮ್‌ಗಳಲ್ಲಿ ಎಡವಿದ್ದರು. ಅಂದು ಇವರಿಬ್ಬರ ಪಾಲಿಗೆ ಮೊದಲ ಮುಖಾಮುಖಿಯಾಗಿತ್ತು.
ಕೊರಿಯನ್ನಳ ಆಕ್ರಮಣಕಾರಿ ಆಟಕ್ಕೆ ಉತ್ತರ ನೀಡುವಲ್ಲಿ ಸಿಂಧು ವಿಫಲರಾದರು. ಸೆಯಂಗ್ ಆರಂಭದ ಗೇಮ್‌ನ ಆರೇ ನಿಮಿಷದ ಆಟದಲ್ಲಿ 7 ಅಂಕಗಳ ಮುನ್ನಡೆ ಸಾಧಿಸಿ ಪ್ರಭುತ್ವ ಸಾಧಿಸಿದರು.
ಇದನ್ನೂ ಓದಿ:ಶೀಘ್ರ 5 ಸಾವಿರ ಶಿಕ್ಷಕರ ನೇಮಕಾತಿ: ಸಚಿವ ಬಿ.ಸಿ.ನಾಗೇಶ್
ಸಮೀರ್ ಸಂಭ್ರಮ
ಗುರುವಾರ ರಾತ್ರಿಯ ಪುರುಷರ ಸಿಂಗಲ್ಸ್‌ನಲ್ಲಿ ಸಮೀರ್ ವರ್ಮ 21-14, 21-18 ಅಂತರದಿಂದ ಆ್ಯಂಡರ್ಸ್ ಆ್ಯಂಟನ್ಸೆನ್ ಅವರನ್ನು ಪರಾಭವಗೊಳಿಸಿದರು. 28ನೇ ರ್‍ಯಾಂಕಿಂಗ್ ಆಟಗಾರನಾಗಿರುವ ಸಮೀರ್ ಈಗ ಕ್ವಾರ್ಟರ್ ಫೈನಲ್ ಕಾದಾಟಕ್ಕೆ ಅಣಿಯಾಗಿದ್ದಾರೆ.
ಭಾರತದ ಮತ್ತೋರ್ವ ಆಟಗಾರ ಲಕ್ಷ್ಯ ಸೇನ್ ಒಲಿಂಪಿಕ್ಸ್ ಚಾಂಪಿಯನ್ ವಿಕ್ಟರ್ ಅಕ್ಸೆಲ್ಸೆನ್ ವಿರುದ್ಧ 15-21, 7-21ರಿಂದ ಪರಾಭವಗೊಂಡರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಮಲ್ಪೆ ಮೀನಿನ ಮಾರುಕಟ್ಟೆ ಹೇಗೆದೆ ನೋಡಿ | ಯಾವ ಮೀನಿಗೆ ಎಷ್ಟು ಬೆಲೆ ?

ವಿದ್ಯಾರ್ಥಿ ಭವನ್ ವೈಟರ್ ಸಾಹಸಕ್ಕೆ ಆನಂದ್ ಮಹೀಂದ್ರ ಫುಲ್ ಖುಷ್; ಇಲ್ಲಿದೆ ವಿಡಿಯೋ

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ
