ಆಸೀಸ್ ಸರಣಿಗೂ ಮುನ್ನ ಫುಟ್ಬಾಲ್ ಆಡಿದ ಧೋನಿ
Team Udayavani, Feb 20, 2019, 5:12 AM IST
ಮುಂಬಯಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ಮುಂಬರುವ ಆಸ್ಟ್ರೇಲಿಯ ಸರಣಿಗೂ ಮೊದಲು ಮುಂಬಯಿಯಲ್ಲಿ ಚಾರಿಟಿ ಫುಟ್ಬಾಲ್ ಕೂಟವೊಂದರಲ್ಲಿ ಪಾಲ್ಗೊಂಡಿದ್ದಾರೆ. ಬಾಲಿವುಡ್ ತಾರೆಯರು ಮತ್ತು ಫುಟ್ಬಾಲ್ ತಾರೆಯರ ನಡುವೆ ನಡೆದ ಈ ಪಂದ್ಯದಲ್ಲಿ ಧೋನಿ ಕೂಡ ಭಾಗವಹಿಸಿ ಗಮನ ಸೆಳೆದರು.
ಬಾಲಿವುಡ್ ತಾರೆಯರಾದ ದಿನು ಮೊರಿಯ, ಅಪರಶಕ್ತಿ ಖುರಾನ, ನಟ-ರೂಪದರ್ಶಿ ಮಾರ್ಕ್ ರಾಬಿನ್ಸನ್ ದಿಗ್ಗಜ ಕ್ರಿಕೆಟಿಗನ ಜತೆಗೆ ಆಡಿ ಖುಷಿಪಟ್ಟರು. ಧೋನಿ ಆಗಮಿಸುತ್ತಿದ್ದಂತೆ ಕ್ರೀಡಾಂಗಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದರು. ಫೋಟೋ ತೆಗೆಸಿಕೊಳ್ಳಲು ಮುಗಿಬಿದ್ದರು. ಒಂದು ಹಂತದಲ್ಲಿ ಜನರನ್ನು ನಿಯಂತ್ರಿಸುವುದು ಭದ್ರತಾ ಪಡೆಗಳಿಗೆ ಭಾರೀ ಸವಾಲಿನ ಕೆಲಸವಾಯಿತು. ಫೆ. 24ರಿಂದ ಭಾರತ-ಆಸ್ಟ್ರೇ ಲಿಯ ನಡುವಿನ ಟಿ20 ಸರಣಿ ಆರಂಭವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್