ಚೆನ್ನೈ ಕಿಂಗ್ಸ್ಗೆ ಧೋನಿ ಪುನರಾಗಮನ: ತಮಿಳುನಾಡಿನಲ್ಲಿ ಹರ್ಷ
Team Udayavani, Jan 6, 2018, 6:50 AM IST
ಚೆನ್ನೈ: ಚೆನ್ನೈ ಕಿಂಗ್ಸ್ ಐಪಿಎಲ್ ತಂಡಕ್ಕೆ 2 ವರ್ಷಗಳ ನಂತರ ಎಂ.ಎಸ್.ಧೋನಿ ಪುನರಾಗಮನವಾಗಿದೆ. ಇದು ಚೆನ್ನೈನಲ್ಲಿ ದೊಡ್ಡ ಸದ್ದು ಮಾಡಿದೆ. ಅಭಿಮಾನಿಗಳು ಸಂಭ್ರಮ ಪಟ್ಟಿದ್ದಾರೆ.
ಧೋನಿ ಜಾರ್ಖಂಡ್ನವರಾಗಿದ್ದರೂ ತಮಿಳುನಾಡಿಗೆ ಮನೆಮಗನಾಗಿಬಿಟ್ಟಿದ್ದಾರೆ. ಅವರನ್ನು ಬೆಂಬಲಿಸಿ ಟ್ವೀಟರ್, ಫೇಸ್ಬುಕ್ನಲ್ಲಿ ಮತ್ತೆ ಅಭಿಮಾನಿಗಳು ಪೋಸ್ಟ್ಗಳ ಸುರಿಮಳೆ ಮಾಡಿದ್ದಾರೆ. ಚೆನ್ನೈನಲ್ಲಿ ಧೋನಿಯನ್ನು ಚಿನ್ನ ಥಾಲಾ ಎಂದೇ ಕರೆಯುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.