Udayavni Special

ಫುಟ್ಬಾಲ್ ದಂತಕಥೆ ಡಿಗೋ ಮರಡೋನ ಇನ್ನಿಲ್ಲ


Team Udayavani, Nov 25, 2020, 10:21 PM IST

ಫುಟ್ಬಾಲ್ ದಂತಕಥೆ ಡಿಯಾಗೋ ಮರಡೋನ ಇನ್ನಿಲ್ಲ..

ಅರ್ಜೆಂಟೀನಾ: ಅರ್ಜೆಂಟೀನಾದ ಮಾಜಿ ಫುಟ್ಬಾಲ್ ಆಟಗಾರ ಮರಡೋನ (60) ಬುಧವಾರ ತಡರಾತ್ರಿ ಹೃದಾಯಾಘಾತದಿಂದ ನಿಧನ ಹೊಂದಿದ್ದಾರೆ. ಅವರು ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಮರಡೋನಾ ಶ್ರೇಷ್ಠ ಫುಟ್ಬಾಲ್‌ ಆಟಗಾರರಲ್ಲಿ ಒಬ್ಬರಾಗಿದ್ದಾರೆ. 1986ರಲ್ಲಿ ಆರ್ಜೆಂಟೀನಾ ವಿಶ್ವಕಪ್‌ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

1986ರ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಅವರು ಬಾರಿಸಿದ ಒಂದು ಗೋಲು ಪ್ರಶಸ್ತಿಯನ್ನು ಎತ್ತಿ ಹಿಡಿಯುವಂತೆ ಮಾಡಿತ್ತು. ಇವರನ್ನು “ಹ್ಯಾಂಡ್ ಆಫ್ ಗಾಡ್” ಎಂದೇ ಟೀಂನಲ್ಲಿ ಕರೆಯಲಾಗುತ್ತಿತ್ತು.

ಮಿದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ನವೆಂಬರ್ 11 ರಂದು ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆಗಿದ್ದರು. ತಮ್ಮ ವೃತ್ತಿಜೀವನದಲ್ಲಿ 91 ಪಂದ್ಯಗಳನ್ನು ಆಡಿದ್ದು, 34 ಗೋಲುಗಳನ್ನು ಬಾರಿಸಿದ್ದಾರೆ. 1986ರ ವಿಶ್ವಕಪ್ ಸೇರಿದಂತೆ 4 ಫಿಫಾ ವಿಶ್ವಕಪ್ ಪಂದ್ಯಾವಳಿಗಳಲ್ಲಿ ಆಡಿದ್ದರು. 1986ರ ವಿಶ್ವಕಪ್‌ನಲ್ಲಿ ಆರ್ಜೆಂಟೀನಾ ತಂಡದ ನಾಯಕರಾಗಿದ್ದರು. ಆ ಪಂದ್ಯಾವಳಿಯಲ್ಲಿ ಅತ್ಯುತ್ತಮ ಆಟಗಾರ ಎಂಬ ಪುರಸ್ಕಾರಕ್ಕೆ ಭಾಜನರಾಗಿದ್ದರು.

ಮರಡೋನಾ ಬೊಕಾ ಜೂನಿಯರ್ಸ್, ನಾಪೋಲಿ, ಬಾರ್ಸಿಲೋನಾದ ಕ್ಲಬ್‌ಗಳ ಪರ ಆಡಿದ್ದರು. ಅವರಿಗೆ ಪ್ರಪಂಚದಾದ್ಯಂತ ಲಕ್ಷಾಂತರ ಅಭಿಮಾನಿಗಳಿದ್ದಾರೆ.

ಮರಡೋನಾ ಅವರು ಫುಟ್‌ಬಾಲ್‌ನಿಂದ ನಿವೃತ್ತಿಯಾದ ಬಳಿಕ ಹಲವು ಬಾರಿ ಆಸ್ಪತ್ರೆಗೆ ದಾಖಲಾಗಿದ್ದರು. 2005ರಲ್ಲಿ ಅವರು ತೂಕ ಇಳಿಸಲು ಪ್ರಯತ್ನಿಸಿದ್ದರು. 2007ರಲ್ಲಿ ಅತಿಯಾದ ಮದ್ಯಪಾನದಿಂದಾಗಿ ಆರೋಗ್ಯದಲ್ಲಿ ಏರಿಳಿತ ಕಂಡು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಫುಟ್ಬಾಲ್ ವಿಶ್ವಕಪ್‌ನಲ್ಲಿ ಅವರ ಆರೋಗ್ಯವೂ ಹದಗೆಟ್ಟಿತು.

 

ದುಶ್ಚಟಗಳಿಗೆ ಬಲಿ
ಮರಡೋನ 1983ರಲ್ಲಿ ಸ್ಪೇನ್‌ಗೆ ತೆರಳಿದ್ದರು. ಅಲ್ಲಿಂದ ದುಶ್ಚಟಗಳಿಗೆ ದಾಸರಾಗಿದ್ದರು. ಮಾದಕ ವ್ಯಸನಿಯಾಗಿ ಬದಲಾದ ಅವರು ಅದರಿಂದ ಹೊರಬರಲು ಸಾಧ್ಯವಾಗದೇ ಬಹಳ ಒದ್ದಾಡಿದರು. ಇದರ ಜೊತೆಗೆ ಕುಡಿತವನ್ನೂ ಕಲಿತರು. ಪರಿಣಾಮ ಅವರ ತೂಕ 130 ಕೆಜಿಯವರೆಗೆ ಏರಿ ವಿಪರೀತ ಅನಾರೋಗ್ಯ ಸಮಸ್ಯೆ ಉಂಟಾಗಿತ್ತು. ಆಗಾಗ ಆಸ್ಪತ್ರೆಗೆ ಸೇರುವುದು ನಡೆದೇ ಇತ್ತು. 2007ರಲ್ಲಿ ಅವರು ಹೆಪಟೈಟಿಸ್‌ಗೆ ಚಿಕಿತ್ಸೆ ಪಡೆದಿದ್ದರು. ಗ್ಯಾಸ್ಟ್ರಿಕ್‌ ಸಮಸ್ಯೆ ಕಾರಣ ಬೈಪಾಸ್‌ ಶಸ್ತ್ರಚಿಕಿತ್ಸೆಯೂ ಆಗಿತ್ತು.

2019 ಜನವರಿಯಲ್ಲಿ ಅವರ ಹೊಟ್ಟೆಯೊಳಗೆ ಸಂಭವಿಸಿದ ರಕ್ತಸ್ರಾವದಿಂದ ಆಸ್ಪತ್ರೆ ಸೇರಿದ್ದರು. ಇತ್ತೀಚೆಗೆ ಮೆದುಳಿಗೆ ಶಸ್ತ್ರಚಿಕಿತ್ಸೆಯಾಗಿತ್ತು. ನ.12ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು.

ಭಾರತಕ್ಕೆ ಬಂದಿದ್ದ ಮರಡೋನಾ!
ಕ್ಯಾನ್ಸರ್‌ ರೋಗಿಗಳ ದತ್ತಿ ಕಾರ್ಯಕ್ರಮದ ಅಂಗವಾಗಿ 2008ರಲ್ಲಿ ಕೋಲ್ಕತಾಗೆ ಭೇಟಿ ನೀಡಿದ ವೇಳೆ “ನಾನೇನು ದೇವರಲ್ಲ, ಒಬ್ಬ ಸಾಮಾನ್ಯ ಫ‌ುಟ್‌ಬಾಲ್‌ ಆಟಗಾರ’ ಎಂದಿದ್ದರು. 1986ರ ವಿಶ್ವಕಪ್‌ ಎತ್ತಿ ಹಿಡಿದಿರುವ ತಮ್ಮ ಪ್ರತಿಮೆಯನ್ನು ಕೋಲ್ಕತಾದ ಪಾರ್ಕ್‌ ಒಂದದರಲ್ಲಿ ಅನಾವರಣಗೊಳಿಸಿ, ನನ್ನ ಪ್ರತಿಮೆ ನೋಡಿ ಖುಷಿಯಾಗುತ್ತಿದೆ ಎಂದು ಹೇಳಿದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ದೆಹಲಿ ಹಿಂಸಾಚಾರ: ರೈತ ಮುಖಂಡರ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ದೀಪ್ ಸಿಧು ನಾಪತ್ತೆ?

ದೆಹಲಿ ಹಿಂಸಾಚಾರ: ರೈತ ಮುಖಂಡರ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ದೀಪ್ ಸಿಧು ನಾಪತ್ತೆ?

ರಾಜಕಾರಣ ಎಲ್ಲಿಗೆ ಹೋಗಿ ನಿಂತಿದೆ.. ನನ್ನ ಕಾಪಾಡುವಲ್ಲಿ ಯಡಿಯೂರಪ್ಪ ವಿಫಲ: ವಿಶ್ವನಾಥ್ ಬೇಸರ

ರಾಜಕಾರಣ ಎಲ್ಲಿಗೆ ಹೋಗಿ ನಿಂತಿದೆ..? ನನ್ನ ಕಾಪಾಡುವಲ್ಲಿ ಯಡಿಯೂರಪ್ಪ ವಿಫಲ: ವಿಶ್ವನಾಥ್ ಬೇಸರ

Samsung Galaxy M02 to launch on February 2; check price, specifications and other details

ಸ್ಯಾಮ್ ಸಂಗ್ M02 ಫೆಬ್ರವರಿ 2ಕ್ಕೆ ಬಿಡುಗಡೆ

ರಾಜಕೀಯ ವೈರಿ ಡಿಕೆಶಿ ಕೊಠಡಿಗೆ ಯೋಗೇಶ್ವರ್ ಪ್ರವೇಶ: ಇಲ್ಲೂ ಇದೆಯಾ ಸಾಹುಕಾರ್ ಪಾತ್ರ

ರಾಜಕೀಯ ವೈರಿ ಡಿಕೆಶಿ ಕೊಠಡಿಗೆ ಯೋಗೇಶ್ವರ್ ಪ್ರವೇಶ: ಇಲ್ಲೂ ಇದೆಯಾ ಸಾಹುಕಾರ್ ಪಾತ್ರ?

ಅಪ್ರಾಪ್ತೆಯ ಕೈ ಹಿಡಿದು, ಜಿಪ್ ತೆಗೆಯುವುದು ಲೈಂಗಿಕ ದೌರ್ಜನ್ಯವಲ್ಲ: ಬಾಂಬೆ ಹೈಕೋರ್ಟ್

ಮರಾಠ ಸಮಾಜದವರು ಕರ್ನಾಟಕದಲ್ಲಿ ಖುಷಿಯಿಂದಿದ್ದಾರೆ: ಲಕ್ಷ್ಮೀ ಹೆಬ್ಬಾಳ್ಕರ್

ಮರಾಠ ಸಮಾಜದವರು ಕರ್ನಾಟಕದಲ್ಲಿ ಖುಷಿಯಿಂದಿದ್ದಾರೆ: ಲಕ್ಷ್ಮೀ ಹೆಬ್ಬಾಳ್ಕರ್

ಹಳ್ಳಿಹಕ್ಕಿ ‘ಸಚಿವ’ ಆಸೆಗೆ ತಣ್ಣೀರೆರಚಿದ ಕೋರ್ಟ್: ಹೈಕೋರ್ಟ್ ತೀರ್ಪು ಎತ್ತಿಹಿಡಿದ ಸುಪ್ರೀಂ

ಹಳ್ಳಿಹಕ್ಕಿ ‘ಸಚಿವ’ ಆಸೆಗೆ ತಣ್ಣೀರೆರಚಿದ ಕೋರ್ಟ್: ಹೈಕೋರ್ಟ್ ತೀರ್ಪು ಎತ್ತಿಹಿಡಿದ ಸುಪ್ರೀಂಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿರಾಟ್‌ ಕೊಹ್ಲಿಗೆ ನೋಟಿಸ್‌ ಜಾರಿ

ವಿರಾಟ್‌ ಕೊಹ್ಲಿಗೆ ನೋಟಿಸ್‌ ಜಾರಿ

ಫ‌ವಾದ್‌ ಆಲಂ ಶತಕದ ತಿರುಗೇಟು

ಫ‌ವಾದ್‌ ಆಲಂ ಶತಕದ ತಿರುಗೇಟು

Untitled-1

ಮುಷ್ತಾಕ್‌ ಅಲಿ: ಸೋಲಂಕಿ ಸಾಹಸ; ಬರೋಡ ಸೆಮಿ ಪ್ರವೇಶ

ಫೆ. 18ರಂದು ನಡೆಯಲಿದೆ ಐಪಿಎಲ್‌ ಹರಾಜು

ಫೆ. 18ರಂದು ನಡೆಯಲಿದೆ ಐಪಿಎಲ್‌ ಹರಾಜು

ಬಿಡಬ್ಲ್ಯುಎಫ್ ವರ್ಲ್ಡ್ ಟೂರ್‌ ಬ್ಯಾಡ್ಮಿಂಟನ್‌ : ಸಿಂಧು, ಶ್ರೀಕಾಂತ್‌ ಸೋಲಿನ ಆರಂಭ

ಬಿಡಬ್ಲ್ಯುಎಫ್ ವರ್ಲ್ಡ್ ಟೂರ್‌ ಬ್ಯಾಡ್ಮಿಂಟನ್‌ : ಸಿಂಧು, ಶ್ರೀಕಾಂತ್‌ ಸೋಲಿನ ಆರಂಭ

MUST WATCH

udayavani youtube

ಕೃಷಿಕ ಪ್ರತಿಭಟನೆ – ಗೊಂದಲ, ಘರ್ಷಣೆ , ವಿಶ್ಲೇಷಣೆ

udayavani youtube

ಮಂಗಳೂರು: ಜ. 30ರಿಂದ ಕಂಬಳ ನಡೆಸಲು ಅನುಮತಿ

udayavani youtube

ಕೃಷಿ ಕಾಯಿದೆ; ಕೃಷಿಕನ ಅಭಿಪ್ರಾಯ ಕ್ಕೆ ಕಿವಿಯಾಗೋಣ ಬನ್ನಿ

udayavani youtube

Udupiಯ ಜನತೆಗೆ ಕಲೆಯಿಂದ ಜನಜಾಗೃತಿ ಮೂಡಿಸಿದ ಕಲಾವಿದ KAMIL RAZA,

udayavani youtube

ದೇರಳಕಟ್ಟೆ ಅಯ್ಯಪ್ಪ ದೇವಸ್ಥಾನದಲ್ಲಿ ಕಳ್ಳತನ ನಡೆಸಿದ್ದ ಇಬ್ಬರ ಬಂಧನ!

ಹೊಸ ಸೇರ್ಪಡೆ

Protest held at gokak

ಮಹಾ ಗಡಿ ಪುಸ್ತಕ ದಹಿಸಿ ಕರವೇ ಪ್ರತಿಭಟನೆ

Farmers do not insult the nation

ರೈತರು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿಲ್ಲ: ಸತೀಶ

Protest at belagavi

ಹಿಂದೂ ದೇವತೆಗಳ ಅವಮಾನ ಖಂಡಿಸಿ ಪ್ರತಿಭಟನೆ

ilakalla  peoples request for train

ರೈಲಿಗಾಗಿ ಇಳಕಲ್ಲ ಜನ ಸಮಿತಿ ಮನವಿ

ದೆಹಲಿ ಹಿಂಸಾಚಾರ: ರೈತ ಮುಖಂಡರ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ದೀಪ್ ಸಿಧು ನಾಪತ್ತೆ?

ದೆಹಲಿ ಹಿಂಸಾಚಾರ: ರೈತ ಮುಖಂಡರ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ದೀಪ್ ಸಿಧು ನಾಪತ್ತೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.