12 ವರ್ಷಗಳ ಬಳಿಕ ಕಾರ್ತಿಕ್‌ ದರ್ಶನ!

Team Udayavani, Apr 16, 2019, 10:07 AM IST

ಮುಂಬಯಿ: ವಿಶ್ವಕಪ್‌ ತಂಡದ ಅಚ್ಚರಿಯ ಆಯ್ಕೆಯಾಗಿರುವ ತಮಿಳುನಾಡಿನ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌, 33ರ ಹರೆಯದ ದಿನೇಶ್‌ ಕಾರ್ತಿಕ್‌ ಪದಾರ್ಪಣೆಯ ಲೆಕ್ಕಾಚಾರದಲ್ಲಿ ಟೀಮ್‌ ಇಂಡಿಯಾದ ಅತ್ಯಂತ ಅನುಭವಿ ಆಟಗಾರ. ಮಹೇಂದ್ರ ಸಿಂಗ್‌ ಧೋನಿ ಭಾರತ ತಂಡವನ್ನು ಪ್ರತಿನಿಧಿಸುವುದಕ್ಕಿಂತ 3 ತಿಂಗಳು ಮೊದಲೇ ಕಾರ್ತಿಕ್‌ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಪದಾರ್ಪಣೆ ಮಾಡಿದ್ದರು.

ಇದಕ್ಕೂ ಸ್ವಾರಸ್ಯಕರ ಸಂಗತಿಯೆಂದರೆ, 91 ಏಕದಿನ ಪಂದ್ಯಗಳ ಅನುಭವಿಯಾಗಿರುವ ಕಾರ್ತಿಕ್‌ 2007ರ ವಿಶ್ವಕಪ್‌ ವೇಳೆ ಭಾರತ ತಂಡದಲ್ಲಿದ್ದರು ಎಂಬುದು. ಆದರೆ ಇದು ಅನೇಕರಿಗೆ ನೆನಪಿಲ್ಲ. ಏಕೆಂದರೆ 2011 ಮತ್ತು 2015ರಲ್ಲಿ ಅವರಿಗೆ “ವರ್ಲ್ಡ್ಕಪ್‌ ಬಸ್‌’ ಮಿಸ್‌ ಆಗಿತ್ತು. ಈಗ 12 ವರ್ಷಗಳ ಬಳಿಕ ಕಾರ್ತಿಕ್‌ಗೆ ವಿಶ್ವಕಪ್‌ ಬಾಗಿಲು ತೆರೆದದ್ದೊಂದು ಅಚ್ಚರಿ!

ಧೋನಿಗೆ 4ನೇ ವಿಶ್ವಕಪ್‌
ತಂಡದ ಅತೀ ಹಿರಿಯ ಹಾಗೂ ಅತ್ಯಂತ ಅನುಭವಿ ಆಟಗಾ ರನಾಗಿರುವ ಮಹೇಂದ್ರ ಸಿಂಗ್‌ ಧೋನಿ ಪಾಲಿಗೆ ಇದು 4ನೇ ವಿಶ್ವಕಪ್‌. ಹಾಗೆಯೇ ಕೊನೆಯ ದೂ ಆಗಬಹುದು. ಮೊದಲ ಸಲ ವಿಶ್ವಕಪ್‌ನಲ್ಲಿ ಭಾರತವನ್ನು ಮುನ್ನ ಡೆಸಲಿರುವ ವಿರಾಟ್‌ ಕೊಹ್ಲಿಗೆ ಇದು 3ನೇ ವಿಶ್ವಕಪ್‌ ಆಗಿದೆ.

ಉಳಿದಂತೆ ರೋಹಿತ್‌ ಶರ್ಮ, ಶಿಖರ್‌ ಧವನ್‌, ರವೀಂದ್ರ ಜಡೇಜ, ಮೊಹಮ್ಮದ್‌ ಶಮಿ ಮತ್ತು ಭುವನೇಶ್ವರ್‌ ಕುಮಾರ್‌ 2015ರ ವಿಶ್ವಕಪ್‌ನಲ್ಲೂ ಆಡಿದ್ದರು. ಉಳಿದ 7 ಆಟಗಾರರು ಮೊದಲ ಸಲ ವಿಶ್ವಕಪ್‌ ಆಡುವ ಅವಕಾಶ ಪಡೆದಿದ್ದಾರೆ. ಭಾರತದ 2011ರ ವಿಶ್ವಕಪ್‌ ಜಯಭೇರಿಗೆ ಸಾಕ್ಷಿಯಾಗಿದ್ದ ಇಬ್ಬರಷ್ಟೇ ಈಗಿನ ತಂಡದಲ್ಲಿದ್ದಾರೆ. ಇವರೆಂದರೆ ಧೋನಿ ಮತ್ತು ಕೊಹ್ಲಿ.

ಹೊರಬಿದ್ದವರು…
2015ರ ವಿಶ್ವಕಪ್‌ ತಂಡದಲ್ಲಿ ಆಡಿದ 8 ಮಂದಿ ಈ ಬಾರಿ ಹೊರಗುಳಿದಿದ್ದಾರೆ. ಇವರೆಂದರೆ ಆರ್‌. ಅಶ್ವಿ‌ನ್‌, ಸ್ಟುವರ್ಟ್‌ ಬಿನ್ನಿ, ಅಂಬಾಟಿ ರಾಯುಡು, ಅಜಿಂಕ್ಯ ರಹಾನೆ, ಅಕ್ಷರ್‌ ಪಟೇಲ್‌, ಸುರೇಶ್‌ ರೈನಾ, ಮೋಹಿತ್‌ ಶರ್ಮ ಮತ್ತು ಉಮೇಶ್‌ ಯಾದವ್‌.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಹೊಸದಿಲ್ಲಿ : ಭಾರತದ ವರಿಷ್ಠ ನ್ಯಾಯಮೂರ್ತಿ (ಸಿಜೆಐ) ರಂಜನ್‌ ಗೊಗೊಯ್‌ ಅವರಿಂದು ಶನಿವಾರ ಸುಪ್ರೀಂ ಕೋರ್ಟಿನ ವಿಶೇಷ ಪೀಠದಲ್ಲಿದ್ದುಕೊಂಡು ತನ್ನ ವಿರುದ್ಧ...

  • ಇಂದು ನಿತ್ಯ ಹರಿದ್ವರ್ಣ ಕಾಡುಗಳಲ್ಲಷ್ಟೇ ಬೃಹತ್‌ ಗಾತ್ರದ ದೇವದಾರು, ತೇಗ, ಬೀಟೆ ಮೊದಲಾದ ಮರಗಳನ್ನು ಕಾಣಬಹುದು. ಆದರೆ ಸವಣೂರಿನ ಕಲ್ಮಠದಲ್ಲಿ ಸಾವಿರಾರು ವರ್ಷಗಳ...

  • Gadwall (Anas strepera) M -Duck + ಗದ್ವಾಲ್‌ ಬಾತನ್ನು ಚರ್ಲೆ ಅಥವಾ ಸರಳೆ ಬಾತು ಎಂದು ಕರೆಯಲಾಗುತ್ತದೆ. ಈ ಹಕ್ಕಿ, ನೀರಿನಲ್ಲಿ ಮುಳುಗಿ ಅಲ್ಲಿರುವ ಕ್ರಿಮಿ ಕೀಟಗಳನ್ನು ಬೇಟೆಯಾಡುತ್ತದೆ....

  • ವೃತ್ತಿಯಲ್ಲಿ ಶಿಕ್ಷಕರಾದ ಕಲ್ಯಾಣ್‌ ಕುಮಾರ್‌ ಅವರಿಗೆ ಪತ್ರಿಕೆ ಸಂಗ್ರಹಿಸುವ ಹವ್ಯಾಸ. ಇದು ಹುಟ್ಟಿದ್ದು ಪರ ಊರಿಗೆ ಪ್ರಯಾಣಿಸುವಾಗ . ಬೇಜಾರು ಕಳೆಯಲಿಕ್ಕೆ...

  • ಉದ್ದಾನ ವೀರಭದ್ರಸ್ವಾಮಿಗಳು ಈ ಆಂಜನೇಯನಿಗೆ ಲಿಂಗಧಾರಣೆ ಮಾಡಿದ್ದು, ಕೊರಳಿನಲ್ಲಿ ರುದ್ರಾಕ್ಷಿ ಮಾಲೆ ಇರುವುದು ಒಂದು ವಿಶೇಷ. ಸೊಂಟದಲ್ಲಿ ಕತ್ತಿ ಇರುವುದು...

  • ಅರಳಿಮರದ ಬುಡದಲ್ಲಿ ಕುಳಿತು ಸರ್ವಾಂತರ್ಯಾಮಿಯಾದ ಭಗವಂತನ ಸ್ವರೂಪವನ್ನು ಯೋಗಿಗಳಿಂದ ಕೇಳಿ ತಿಳಿದ ರೀತಿಯಲ್ಲೇ ಧ್ಯಾನ ಮಾಡತೊಡಗಿದ್ದರು. ಏಕಾಗ್ರಚಿತ್ತದಿಂದ...