ಚೆಸ್‌ ಆಡುವುದು ತಪ್ಪಲ್ಲ: ಕೈಫ್ಗೆ ಇಸ್ಲಾಂ ಧರ್ಮ ಗುರುಗಳ ಬೆಂಬಲ

Team Udayavani, Jul 30, 2017, 7:00 AM IST

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಮಗನ ಜತೆಗೆ ಚೆಸ್‌ ಆಡುತ್ತಿರುವ ಫೋಟೋ ಪ್ರಕಟಿಸಿದ್ದ ಕ್ರಿಕೆಟಿಗ ಮೊಹಮ್ಮದ್‌ ಕೈಫ್ ಇಸ್ಲಾಂ ಮತೀಯವಾದಿಗಳ ಸಿಟ್ಟಿಗೆ ಬಲಿಯಾಗಿದ್ದರು. ಈ ಬೆನ್ನಲ್ಲೇ ಸ್ವತಃ ಮುಸ್ಲಿಂ ಧರ್ಮಗುರುಗಳೇ ಈಗ ಕೈಫ್ ಬೆಂಬಲಕ್ಕೆ ನಿಂತಿದ್ದಾರೆ.

ದಿಲ್ಲಿಯ ಧರ್ಮಗುರುವೊಬ್ಬರು ಮಾತನಾಡಿ ಕೈಫ್ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಕೈಫ್ ಮಾಡಬಾರದ ತಪ್ಪು ಮಾಡಿಲ್ಲ.
ಚೆಸ್‌ ಆಡುವುದರಲ್ಲಿ ತಪ್ಪೇನಿಲ್ಲ. ಆರೋಪ ಮಾಡುವವರು ಮೊದಲು ಅವರನ್ನು ನೋಡಿಕೊಳ್ಳಬೇಕು ಎಂದು ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.

ಶುಕ್ರವಾರ ಕೈಫ್ ಮಗನೊಂದಿಗೆ ಚೆಸ್‌ ಆಡುತ್ತಿರುವ ಫೋಟೋ ಪ್ರಕಟಿಸಿದ್ದರು. ಇದಾದ ಬಳಿಕ ವಿವಾದ ಹುಟ್ಟಿಕೊಂಡಿತ್ತು. ಇಸ್ಲಾಂನಲ್ಲಿ ಚೆಸ್‌ ಆಡುವುದು ನಿಷೇಧ ಎಂದು ಮೂಲಭೂತವಾದಿಗಳು ಸರಣಿ ಟ್ವೀಟ್‌ ಮಾಡಿ ಕೈಫ್ಗೆ ಬೈದಿದ್ದರು. ಹಿಂದೆ ಇವರು ಸೂರ್ಯ ನಮಸ್ಕಾರ ಮಾಡಿದ್ದ ಫೋಟೋ ಪ್ರಕಟಿಸಿದ್ದಾಗಲೂ ಇದೇ ರೀತಿ ಕೈಫ್ ಮೂಲಭೂತವಾದಿಗಳ ಸಿಟ್ಟಿಗೆ ಗುರಿಯಾಗಿದ್ದನ್ನು ಸ್ಮರಿಸಬಹುದು. ಕೆಲ ತಿಂಗಳ ಹಿಂದೆ ಕ್ರಿಕೆಟಿಗ ಇರ್ಫಾನ್‌
ಪಠಾಣ್‌ ಪತ್ನಿ ಉಗುರಿಗೆ ಬಣ್ಣ ಹಚ್ಚಿದ್ದಾಗ ಹಾಗೂ ಮೊಹಮ್ಮದ್‌ ಶಮಿ ಪತ್ನಿ ತೋಳುಗಳಿಲ್ಲದ ಬಟ್ಟೆ ಧರಿಸಿದ್ದಕ್ಕೆ ಮೂಲಭೂತವಾದಿಗಳು ಆಕ್ರೋಶಗೊಂಡಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ