ಅರ್ಜೆಂಟೀನಾ ವಿರುದ್ಧ ಗೆದ್ದ ಸೌದಿ ಆಟಗಾರರಿಗೆ ರೋಲ್ಸ್ ರಾಯ್ಸ್ ಕಾರು ಸಿಗುತ್ತಾ? ಏನಿದು ಸುದ್ದಿ?
Team Udayavani, Nov 28, 2022, 11:49 AM IST
ದೋಹಾ: ಸೌದಿ ಅರೇಬಿಯ ತಂಡ ಅಚ್ಚರಿಯ ರೀತಿಯಲ್ಲಿ ವಿಶ್ವ ಫುಟ್‌ಬಾಲ್ ಬಲಿಷ್ಠ ತಂಡ ಅರ್ಜೆಂಟೀನವನ್ನು ಸೋಲಿಸಿದ್ದೇ ತಡ ವದಂತಿಗಳು ಹರಿದಾಡತೊಡಗಿದವು. ಸೌದಿ ತಂಡದ ಅಷ್ಟೂ ಮಂದಿಗೆ ಅತ್ಯಂತ ದುಬಾರಿ ರೋಲ್ಸ್ ರಾಯ್ಸ್ ಕಾರನ್ನು ಕೊಡುಗೆಯಾಗಿ ನೀಡಲಾಗುತ್ತದೆ ಎನ್ನುವುದು ಇದರಲ್ಲಿ ಅತ್ಯಂತ ಮಹತ್ವದ ಸುದ್ದಿ.
ಆದರೆ ಸೌದಿ ಕೋಚ್ ಹರ್ವ್ ರೆನಾರ್ಡ್ ಮಾತ್ರ, “ಅದೆಲ್ಲ ಸುಳ್ಳು, ರೋಲ್ಸ್ ರಾಯ್ಸ ಕೊಡಲ್ಲ’ ಎಂದಿದ್ದಾರೆ. ಮಾಡಬೇಕಿರುವುದು ಬೇಕಾದಷ್ಟಿದೆ, ಅಂಕಪಟ್ಟಿಯಲ್ಲಿ ಅಗ್ರ ಎರಡರಲ್ಲಿ ಒಂದು ಸ್ಥಾನ ಗಳಿಸಿ, ಮೇಲೇರುವುದು ನಮ್ಮ ಗುರಿ ಎಂದಿದ್ದಾರೆ.
ಇದನ್ನೂ ಓದಿ:ಹರ್ಯಾಣ ಜಿಲ್ಲಾ ಪರಿಷತ್ ಚುನಾವಣೆ: ಬಿಜೆಪಿ 22 ಸ್ಥಾನಗಳಲ್ಲಿ, ಆಮ್ ಆದ್ಮಿ ಪಕ್ಷ 15 ಸ್ಥಾನಗಳಲ್ಲಿ ಗೆಲುವು
ಫಿಫಾ ವಿಶ್ವಕಪ್ 2022ರ ತನ್ನ ಆರಂಭಿಕ ಪಂದ್ಯದಲ್ಲಿ ಸೌದಿ ಅರೇಬಿಯಾವು ಅರ್ಜೆಂಟೀನಾ ವಿರುದ್ಧ ಅನಿರೀಕ್ಷಿತ ಜಯ ಸಾಧಿಸಿತ್ತು. ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ವಿರುದ್ಧ ಸೌದಿ ತಂಡವು 2-1 ಗೋಲು ಅಂತರದ ಜಯ ಸಾಧಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮತ್ತೆ ಅರಬ್ಬರ ನಾಡಿನಲ್ಲಿ ನಡೆಯುತ್ತಾ ಏಷ್ಯಾಕಪ್?: ಪಾಕ್ ಗೆ ಮುಖಭಂಗ
ಕುಡಿದು ಬಂದು ಪತ್ನಿಗೆ ಹಲ್ಲೆ,ನಿಂದನೆ: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ವಿರುದ್ಧ FIR
ರಣಜಿ ಟ್ರೋಫಿ ಕ್ರಿಕೆಟ್: ಸೌರಾಷ್ಟ್ರ ಗೆಲುವು; ಕರ್ನಾಟಕದ ಎದುರಾಳಿ
“ಬಹಳಷ್ಟು ಸ್ಪಿನ್ ಆಯ್ಕೆಗಳಿವೆ’: ಪ್ಯಾಟ್ ಕಮಿನ್ಸ್
ಸೌದಿ ಪ್ರೊ ಲೀಗ್ ಫುಟ್ ಬಾಲ್: ಮೊದಲ ಗೋಲು ಬಾರಿಸಿದ ಕ್ರಿಸ್ಟಿಯಾನೊ ರೊನಾಲ್ಡೊ