ಐಪಿಎಲ್ ಹರಾಜು: ದೇಶೀಯ ಟಿ20 ಕೂಟಗಳ ದಿನಾಂಕ ಹಿಂದೂಡಿಕೆ
Team Udayavani, Dec 22, 2017, 9:30 AM IST
ನವದೆಹಲಿ: 2 ದೇಶೀಯ ಟಿ20 ಕ್ರಿಕೆಟ್ ಕೂಟಗಳ ದಿನಾಂಕವನ್ನು ಬಿಸಿಸಿಐ ಹಿಂದೂಡಿಕೆ ಮಾಡಿದೆ. ಜ.27, 28ರಂದು ಬೆಂಗಳೂರಿನಲ್ಲಿ ಐಪಿಎಲ್ ಹರಾಜು ಇರುವುದರಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ. ಐಪಿಎಲ್ ಹರಾಜಿಗೆ ಮುನ್ನವೇ ಈ ಕೂಟಗಳನ್ನು ನಡೆಸುವುದರಿಂದ ಆಟಗಾರರ ಪ್ರದರ್ಶನದ ಮಾಹಿತಿ ಫ್ರಾಂಚೈಸಿ ಳಿಗಿರುತ್ತವೆ, ಆದ್ದರಿಂದ ಆಯ್ಕೆ ಸುಲಭವಾಗುತ್ತದೆ ಎನ್ನುವುದು ಇದರ ಹಿಂದಿನ ತರ್ಕ.
ಹಿಂದಿನ ಲೆಕ್ಕಾಚಾರದ ಪ್ರಕಾರ ಅಂತರ ವಲಯ ಟಿ20 ಕೂಟವನ್ನು ಜ.21ರಿಂದ 29ರವರೆಗೆ ಇಟ್ಟುಕೊಳ್ಳಲಾಗಿತ್ತು. ಅದು ಜ.8ರಿಂದ 16ರವರೆಗೆ ನಡೆಯಲಿದೆ. ಮತ್ತೂಂದು ಪ್ರಮುಖ ಸೈಯದ್ ಮುಷ್ತಾಕ್ ಅಲಿ ಕೂಟ ಫೆ.4ರಿಂದ 10ರವರೆಗೆ ನಡೆಯಬೇಕಿತ್ತು. ಅದೀಗ ಜ.21ರಿಂದ 27ರವರೆಗೆ ನಡೆಯಲಿದೆ. ಇಷ್ಟು ಮಾತ್ರವಲ್ಲ 50 ಓವರ್‌ಗಳ ವಿಜಯ್ ಹಜಾರೆ ಕೂಟದ ದಿನಾಂಕವೂ ಬದಲಾಗಿದೆ.
ಲೀಗ್ ಹಂತದ ಪಂದ್ಯಗಳು ಹಿಂದಿನ ಫೆ.16ರಿಂದ 25ರ ಬದಲು ಫೆ.5ರಿಂದ 14ರವರೆಗೆ ನಡೆಯಲಿದೆ. ಈ ಕೂಟದ ನಾಕೌಟ್ ಹಂತದ ಪಂದ್ಯಗಳು ಫೆ.21ರಿಂದ 26ರವರೆಗೆ ನಡೆಯಲಿವೆ.
ಐಪಿಎಲ್‌ನಲ್ಲಿ ಟಿ20 ಕೂಟಗಳ ಪ್ರದರ್ಶನಕ್ಕೆ ಮಹತ್ವ ನೀಡುವುದರಿಂದ ಬಿಸಿಸಿಐನ ಈ ನಿರ್ಧಾರ ಮಹತ್ವ ಪಡೆದುಕೊಂಡಿದೆ. ಇದೀಗ ಆಟಗಾರರಿಗೆ ಐಪಿಎಲ್‌ಗೆ ಆಯ್ಕೆಯಾಗುವ ಸುವರ್ಣಾವಕಾಶ ಎದುರಾಗಿದೆ. ಆದ್ದರಿಂದ ಗರಿಷ್ಠ ಒತ್ತಡ ನಿರ್ಮಾಣವಾಗಿದೆ.
ಗಂಭೀರ್‌ಗೆ ಕೆಕೆಆರ್ ತಂಡದಿಂದ ಹೊರಬೀಳುವ ಆತಂಕ?
ಉಳಿಸಿಕೊಳ್ಳಬೇಕಾದ ಆಟಗಾರರ ಪಟ್ಟಿ ಕೊಡಲು ಐಪಿಎಲ್ ಫ್ರಾಂಚೈಸಿಗಳಿಗೆ ಬಿಸಿಸಿಐ ಜ.4ರ ಗಡುವು ನೀಡಿದೆ. ಇದರ ಮಧ್ಯೆ ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕ ಗೌತಮ್ ಗಂಭೀರ್ ಯಾವುದೇ ಫ್ರಾಂಚೈಸಿಗಳ ಪರ ಆಡುವುದಾಗಿ ತಿಳಿಸಿದ್ದಾರೆ. ತಾನಿನ್ನೂ ಮಾಲಿಕರೊಂದಿಗೆ ನನ್ನ ಭವಿಷ್ಯದ ಬಗ್ಗೆ ಚರ್ಚಿಸಿಲ್ಲ, ಅಗತ್ಯ ಬಂದರೆ ಯಾವುದೇ ತಂಡಗಳ ಪರವೂ ಆಡಲು ಸಿದ್ಧನಿದ್ದೇನೆ. ಪ್ರದರ್ಶನ ನೀಡುವುದಷ್ಟೇ ನನ್ನ ಕೆಲಸ ಎಂದಿದ್ದಾರೆ. ಅವರ ಈ ಹೇಳಿಕೆ ಪರಿಗಣಿಸಿದರೆ, ಕೋಲ್ಕತಾ ಫ್ರಾಂಚೈಸಿ ಗಂಭೀರ್‌ರನ್ನು ಬಿಟ್ಟು ಕೊಡುವ ಸುಳಿವು ನೀಡಿದೆಯೇ? ಎಂಬ ಪ್ರಶ್ನೆ ಉದ್ಭವಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2022: ಮಹತ್ವದ ಪಂದ್ಯದಲ್ಲಿ ಗೆದ್ದ ಆರ್ಸಿಬಿ
ವಿಡಿಯೋ; ರಿಂಗ್ ನಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ ಜರ್ಮನಿಯ ಬಾಕ್ಸರ್ ಮೂಸಾ ಯಮಕ್!
ಮುಚ್ಚಿದ ಬಾಗಿಲಿನ ಹಿಂದೆ ಆರ್ಸಿಬಿ: ಗುಜರಾತ್ ಟೈಟಾನ್ಸ್ ವಿರುದ್ಧ ಇಂದು ಅಂತಿಮ ಪಂದ್ಯ
ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್: ನಿಖತ್ ಜರೀನ್ ಫೈನಲಿಗೆ
ಇಂಗ್ಲೆಂಡ್ ತಂಡಕ್ಕೆ ಮರಳಿದ ಜೇಮ್ಸ್ ಆ್ಯಂಡರ್ಸನ್,ಸ್ಟುವರ್ಟ್ ಬ್ರಾಡ್