ಡ್ಯಾನ್ಸ್‌ ಮಾಡುವ ಅವಕಾಶ ತಪ್ಪಿಸಿಕೊಳ್ಳುವುದಿಲ್ಲ: ಕೊಹ್ಲಿ

Team Udayavani, Aug 13, 2019, 5:20 AM IST

ಪೋರ್ಟ್‌ ಆಫ್ ಸ್ಪೇನ್‌:”ತಂಡದ ನಾಯಕನಾಗಿರುವುದರಿಂದ ನಾನು ಮೈದಾನದಲ್ಲಿ ನರ್ತಿಸಬಾರದು ಎಂಬ ಭಾವನೆ ನನಗಿಲ್ಲ. ನಾನೂ ಒಬ್ಬ ಆಟಗಾರ. ಹಾಗಾಗಿ ನರ್ತಿಸುವುದರಲ್ಲಿ ನನಗೆ ಖುಷಿಯಿದೆ’ ವಿರಾಟ್‌ ಕೊಹ್ಲಿ ತಿಳಿಸಿದ್ದಾರೆ.

ವಿಂಡೀಸ್‌ ವಿರುದ್ಧದ ಏಕದಿನ ಕ್ರಿಕೆಟ್‌ನಲ್ಲಿ 42ನೇ ಶತಕ ಬಾರಿಸಿದ ಕೊಹ್ಲಿ ಪಂದ್ಯ ಬಳಿಕ ಯಜುವೇಂದ್ರ ಚಹಲ್‌ ನಡೆಸಿದ ಟೀವಿ ಸಂದರ್ಶನದಲ್ಲಿ ಡ್ಯಾನ್ಸ್‌ ವಿಷಯ ಪ್ರಸ್ತಾವಿಸಿದರು.

ಗಯಾನದ ಮೊದಲ ಪಂದ್ಯಕ್ಕೆ ಮಳೆಯಿಂದ ಅಡಚಣೆಯಾದಾಗ ವಿರಾಟ್‌ ಕೊಹ್ಲಿ ಅಂಗಳದಲ್ಲೇ ಡ್ಯಾನ್ಸ್‌ ಮಾಡಿದ್ದರು. ಈ ಬಗ್ಗೆ ಚಹಲ್‌ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೊಹ್ಲಿ, “ಕ್ರಿಕೆಟ್‌ ಫೀಲ್ಡ್‌ನಲ್ಲಿ ನಾನು ಸಂತೋಷವಾಗಿರಲು ಬಯಸುತ್ತೇನೆ. ತಂಡದ ನಾಯಕ ಎನ್ನುವ ಕಾರಣಕ್ಕೆ ನನ್ನನ್ನು ನಾನು ನಿಯಂತ್ರಿಸಿಕೊಳ್ಳಲು ಇಷ್ಟಪಡುವುದಿಲ್ಲ. ನರ್ತಿಸುವುದರಲ್ಲಿ ನನಗೆ ಖುಷಿಯಿದೆ. ಯಾವಾಗೆಲ್ಲ ಸಂಗೀತ ಕೇಳಿ ಬರುತ್ತದೋ ಅದಕ್ಕೆಲ್ಲ ಹೆಜ್ಜೆ ಹಾಕುತ್ತೇನೆ. ನಾನು ಮಾತ್ರವಲ್ಲ, ಎದುರಾಳಿ ಆಟಗಾರನನ್ನೂ ಜತೆಗೆ ಸೇರಿಸಿಕೊಳ್ಳುತ್ತೇನೆ. ಸದ್ಯ ನನ್ನ ಜೀವನ ಬಹಳ ಸಂತೋಷದಿಂದ ಕೂಡಿದೆ. ಹೀಗಾಗಿ ಅವಕಾಶ ಸಿಕ್ಕಾಗಲೆಲ್ಲ ತಪ್ಪದೆ ಡ್ಯಾನ್ಸ್‌ ಮಾಡುತ್ತೇನೆ’ ಎಂದು ಕೊಹ್ಲಿ ಹೇಳಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ