ನನ್ನ ಸ್ಥಾನದ ಬಗ್ಗೆ ಚಿಂತೆ ಇಲ್ಲ: ರಾಹುಲ್‌

Team Udayavani, Dec 12, 2019, 10:34 PM IST

ಮುಂಬಯಿ: ಇನ್ನು ಮುಂದೆ ತಂಡದಲ್ಲಿ ನನ್ನ ಸ್ಥಾನದ ಕುರಿತು ಚಿಂತೆ ಪಡುವ ಅಗತ್ಯವಿಲ್ಲ ಎಂದು ಭಾರತ ತಂಡದ ಆರಂಭಿಕ ಆಟಗಾರ ಕೆ.ಎಲ್‌. ರಾಹುಲ್‌ ಹೇಳಿದ್ದಾರೆ.

ಬುಧವಾರ ಮುಂಬಯಿಯಲ್ಲಿ ನಡೆದ ಅಂತಿಮ ಟಿ20 ಪಂದ್ಯದಲ್ಲಿ ರಾಹುಲ್‌ 56 ಎಸೆತಗಳಲ್ಲಿ 91 ರನ್‌ ಸಿಡಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಬಳಿಕ ಮಾಧ್ಯಮದವರೊಂದಿಗೆ ಮಾತಾಡುತ್ತಿದ್ದರು.

“ನನಗೆ ಸಿಕ್ಕ ಅವಕಾಶವನ್ನು ಸರಿಯಾಗಿಯೇ ಬಳಸಿಕೊಂಡಿದ್ದೇನೆ. ತಂಡದ ಗೆಲುವೇ ಗುರಿಯಾಗಿತ್ತು. ವೈಯಕ್ತಿಕ ಸಾಧನೆ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ತಂಡದ ಮೊತ್ತವನ್ನು ಹೆಚ್ಚಿಸುವುದು ಹೇಗೆ ಎನ್ನುದನ್ನು ಆರಂಭದಲ್ಲೇ ಯೋಚಿಸಿ ಬ್ಯಾಟಿಂಗ್‌ ನಡೆಸಿದೆ’ ಎಂದರು.

“ಪ್ರತಿ ಪಂದ್ಯದಲ್ಲೂ ನಾನು ಆಟದ ಬಗ್ಗೆ ಹೆಚ್ಚು ಕಲಿಯಲು ಪ್ರಯತ್ನಿಸುತ್ತೇನೆ. ಅದುವೇ ನನಗೆ ಮತ್ತೆ ಫಾರ್ಮ್ಗೆ ಮರಳುವಂತೆ ಮಾಡಿದೆ’ ಎಂದು ರಾಹುಲ್‌ ಹೇಳಿದರು.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ