ವನಿತಾ ಡಬಲ್ಸ್: ಬಬೋಸ್-ಲಡೆನೋವಿಕ್ ಚಾಂಪಿಯನ್
Team Udayavani, Jan 27, 2018, 12:08 PM IST
ಹಂಗೇರಿಯ: ಟೈಮಿಯಾ ಬಬೋಸ್-ಫ್ರಾನ್ಸ್ನ ಕ್ರಿಸ್ಟಿನಾ ಲಡೆ ನೋವಿಕ್ ಜೋಡಿ ಆಸ್ಟ್ರೇಲಿಯನ್ ಓಪನ್ ವನಿತಾ ಡಬಲ್ಸ್ ಪ್ರಶಸ್ತಿ ಜಯಿಸಿದೆ. ಹಂಗೇರಿ ಮತ್ತು ಫ್ರಾನ್ಸ್ ಆಟಗಾರ್ತಿಯರಿಗೆ ಈ ಪ್ರಶಸ್ತಿ ಒಲಿ ಯುತ್ತಿರುವುದು ಇದೇ ಮೊದಲು. ಶುಕ್ರವಾರದ ಫೈನಲ್ನಲ್ಲಿ ಬಬೋಸ್ -ಲಡೆನೋವಿಕ್ ಸೇರಿ ಕೊಂಡು ರಷ್ಯಾದ ಎಕತೆರಿನಾ ಮಕ ರೋವಾ -ಎಲೆನಾ ವೆಸ್ನಿನಾ ಜೋಡಿ ಯನ್ನು 6-4, 6-3 ಅಂತರದಿಂದ ಮಣಿಸಿದರು. ಇದು ಟೈಮಿಯಾ ಬಬೋಸ್ಗೆ ಒಲಿದ ಮೊದಲ ಗ್ರ್ಯಾನ್ಸ್ಲಾಮ್ ವನಿತಾ ಡಬಲ್ಸ್ ಪ್ರಶಸ್ತಿ. 2016ರ ವಿಂಬಲ್ಡನ್ ಡಬಲ್ಸ್ ಪ್ರಶಸ್ತಿ ಸುತ್ತಿನ ತನಕ ಬಂದಿದ್ದ ಬಬೋಸ್, ಅಲ್ಲಿ ಸೆರೆನಾ ವಿಲಿಯಮ್ಸ್-ವೀನಸ್ ವಿಲಿ ಯಮ್ಸ್ ಜೋಡಿಗೆ ಸೋತಿದ್ದರು.
ಲಡೆನೋವಿಕ್ಗೆ ಇದು 2ನೇ ಗ್ರ್ಯಾನ್ಸ್ಲಾಮ್ ಡಬಲ್ಸ್ ಪ್ರಶಸ್ತಿ ಯಾಗಿದೆ. 2016ರ ಫ್ರೆಂಚ್ ಓಪನ್ ಪಂದ್ಯಾವಳಿಯಲ್ಲಿ ಕ್ಯಾರೋಲಿನ್ ಗಾರ್ಸಿಯಾ ಜತೆಗೂಡಿ ಚಾಂಪಿಯನ್ ಆಗಿದ್ದರು. ಕಳೆದ ವರ್ಷ ಲಡೆನೋವಿಕ್-ಗಾರ್ಸಿಯಾ ಯುಎಸ್ ಓಪನ್ ಫೈನಲ್ ತಲುಪಿತಾದರೂ ಬೆಥನಿ ಮಾಟೆಕ್ ಸ್ಯಾಂಡ್ಸ್-ಲೂಸಿ ಸಫ ರೋವಾ ಜೋಡಿಗೆ ಶರಣಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Dr Rajkumar: ಇಂದು ರಾಜ್ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ