ದುಬಾೖ: 6 ರಾಷ್ಟ್ರಗಳ ಕಬಡ್ಡಿ ಪಂದ್ಯಾವಳಿ

Team Udayavani, Jun 12, 2018, 6:00 AM IST

ಮುಂಬಯಿ: ಅಂತಾರಾಷ್ಟ್ರೀಯ ಕಬಡ್ಡಿ ಒಕ್ಕೂಟ (ಐಕೆಎಫ್) ವತಿಯಿಂದ ಸ್ಟಾರ್‌ ನ್ಪೋರ್ಟ್ಸ್ ಸಹಯೋಗದಲ್ಲಿ 6 ರಾಷ್ಟ್ರಗಳ ಕಬಡ್ಡಿ ಕೂಟವನ್ನು ದುಬಾೖಯಲ್ಲಿ ಆಯೋಜಿಸಲಾಗಿದೆ. ಜೂ. 22ರಿಂದ ಕೂಟ ಆರಂಭವಾಗಲಿದ್ದು, 9 ದಿನಗಳ ಕಾಲ ನಡೆಯಲಿದೆ. 

“ಎ’ ವಿಭಾಗದಲ್ಲಿ ಭಾರತ, ಪಾಕಿಸ್ಥಾನ ಮತ್ತು ಕೀನ್ಯಾ ತಂಡಗಳು ಸೆಣಸಾಡಿದರೆ, “ಬಿ’ ವಿಭಾಗದಲ್ಲಿ ಇರಾನ್‌, ರಿಪಬ್ಲಿಕ್‌ ಆಫ್ ಕೊರಿಯಾ, ಆರ್ಜೆಂಟೀನಾ ತಂಡಗಳು ಮುಖಾಮುಖಿಯಾಗಲಿವೆ.

ಭಾರತೀಯ ಕಾಲಮಾನ ಪ್ರಕಾರ ರಾತ್ರಿ 8ರಿಂದ ಪಂದ್ಯ ಆರಂಭವಾಗಲಿದ್ದು, ಸ್ಟಾರ್‌ ನ್ಪೋರ್ಟ್ಸ್ ನೇರ ಪ್ರಸಾರ ಮಾಡಲಿದೆ. 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ