ದುಬಾೖ ಕಬಡ್ಡಿ ಲೀಗ್: ಭಾರತ-ಇರಾನ್ ಫೈನಲ್
Team Udayavani, Jun 30, 2018, 6:00 AM IST
ದುಬಾೖ: ದುಬಾೖ ಕಬಡ್ಡಿ ಲೀಗ್ ಪಂದ್ಯಾವಳಿಯ ಫೈನಲ್ನಲ್ಲಿ ಭಾರತ ಮತ್ತು ಇರಾನ್ ಪ್ರಶಸ್ತಿ ಸುತ್ತಿನಲ್ಲಿ ಸೆಣಸಲಿವೆ. ಶುಕ್ರವಾರ ನಡೆದ ಸೆಮಿಫೈನಲ್ನಲ್ಲಿ ಭಾರತ 36-20 ಅಂಕಗಳ ಅಂತರದಿಂದ ದ. ಕೊರಿಯಾ ವನ್ನು ಮಣಿಸಿತು. ವಿರಾಮದ ವೇಳೆ ಭಾರತ 17-10 ಅಂತರದ ಮುನ್ನಡೆ ಸಾಧಿಸಿತ್ತು. ನಾಯಕ ಅಜಯ್ ಠಾಕೂರ್ ಮತ್ತು ಗಿರೀಶ್ ಎರ್ನಾಕ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಇದಕ್ಕೂ ಮೊದಲು ನಡೆದ ಸೆಮಿಫೈನಲ್ನಲ್ಲಿ ಇರಾನ್ 40-21ರಿಂದ ಪಾಕಿಸ್ಥಾನವನ್ನು ಪರಾಭವಗೊಳಿಸಿತು. ಅನುಭವಿ ಆಟಗಾರ ರನ್ನು ಒಳಗೊಂಡ ಇರಾನ್ ಆರಂಭದಿಂದಲೇ ಪಂದ್ಯವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿತು. ಇರಾನ್ ಕೂಡ ಭಾತದಂತೆ ಲೀಗ್ ಹಂತದಲ್ಲಿ ಅಜೇಯವಾಗಿ ಉಳಿದಿತ್ತು.
ಫೈನಲ್ ಹಣಾಹಣಿ ಶನಿವಾರ ನಡೆಯಲಿದೆ.