ಕ್ವಾರ್ಟರ್ ಫೈನಲ್ಗೆ ಕ್ವಿಟೋವಾ, ಹಾಲೆಪ್
Team Udayavani, Feb 21, 2019, 12:30 AM IST
ದುಬಾೖ: ಮಾಜಿ ಚಾಂಪಿಯನ್ಗಳಾದ ಪೆಟ್ರಾ ಕ್ವಿಟೋವಾ, ಸಿಮೋನಾ ಹಾಲೆಪ್ “ದುಬಾೖ ಟೆನಿಸ್ ಚಾಂಪಿಯನ್ಶಿಪ್’ ಕೂಟದ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಆದರೆ ಆ್ಯಂಜೆಲಿಕ್ ಕೆರ್ಬರ್ ಆಘಾತ ಅನುಭವಿಸಿ ಟೂರ್ನಿಯಿಂದ ಹೊರಬಿದ್ದಿದ್ದಾರೆ.
2ನೇ ಶ್ರೇಯಾಂಕಿತೆ ಪೆಟ್ರಾ ಕ್ವಿಟೋವಾ ಅಮೆರಿಕದ ಅರ್ಹತಾ ಆಟಗಾರ್ತಿ ಜೆನ್ನಿಫರ್ ಬ್ರಾಡಿ ವಿರುದ್ಧ 7-5, 1-6, 6-3 ಸೆಟ್ಗಳಿಂದ ಗೆಲುವು ದಾಖಲಿಸಿದರು. ಕ್ವಿಟೋವಾ ಅವರ ಕ್ವಾರ್ಟರ್ ಫೈನಲ್ ಎದುರಾಳಿ ಸ್ಲೋವಾಕಿಯಾದ ವಿಕ್ಟೋರಿಯಾ ಕುಜೊ¾àವಾ.
ಇನ್ನೊಂದು ಪಂದ್ಯದಲ್ಲಿ ರೊಮೇನಿಯಾದ ಸಿಮೋನಾ ಹಾಲೆಪ್ ಉಕ್ರೇನಿನ ಲೆಸಿಯಾ ಸುರೆಂಕೊ ಅವರನ್ನು 6-3, 7-5 ಸೆಟ್ಗಳಿಂದ ಸೋಲಿಸಿದರು.
ಆ್ಯಂಜೆಲಿಕ್ ಕೆರ್ಬರ್ಗೆ ಸೋಲು
ಜರ್ಮನಿಯ ಆಟಗಾರ್ತಿ ಆ್ಯಂಜೆಲಿಕ್ ಕೆರ್ಬರ್ ತೈವಾನ್ನ ಶೀ ಸು-ವೀ ವಿರುದ್ಧ 7-5, 4-6, 0-6 ಅಂತರದಿಂದ ಪರಾಭವಗೊಂಡರು. ಮೊದಲ ಸೆಟ್ನಲ್ಲಿ ಜಯ ಸಾಧಿಸಿದ ಕೆರ್ಬರ್ ಉಳಿದರೆಡೂ ಸೆಟ್ಗಳನ್ನು ಕಳೆದುಕೊಂಡರು.ಇದಕ್ಕೂ ಮುನ್ನ “ಆಸ್ಟ್ರೇಲಿಯನ್ ಓಪನ್’ ಚಾಂಪಿಯನ್, ಜಪಾನಿನ ನವೋಮಿ ಒಸಾಕಾ ದುಬಾೖ ಮೂಲದ ಫ್ರೆಂಚ್ ಆಟಗಾರ್ತಿ ಕ್ರಿಸ್ಟಿನಾ ಮಲ್ಡೊನೊವಿಕ್ ವಿರುದ್ಧ 3-6, 3-6 ನೇರ ಸೆಟ್ಗಳಿಂದ ಸೋಲನುಭವಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ