Duleep Trophy Cricket: ಸ್ಯಾಮ್ಸನ್‌ ಅರ್ಧಶತಕ; ಭಾರತ ‘ಡಿ’ 5ಕ್ಕೆ 306


Team Udayavani, Sep 19, 2024, 11:47 PM IST

1-frrr

ಅನಂತಪುರ: ಬಹಳಷ್ಟು ಒತ್ತಡ ದಲ್ಲಿರುವ ಶ್ರೇಯಸ್‌ ಅಯ್ಯರ್‌ ಅವರ ಕಳಪೆ ಫಾರ್ಮ್ ಮುಂದುವರಿ ದಿದೆ. ಆದರೆ ಸಂಜು ಸ್ಯಾಮ್ಸನ್‌ ಸಹಿತ ಅಗ್ರ ಕ್ರಮಾಂಕದ ಆಟಗಾರರ ಉಪಯುಕ್ತ ಆಟದ ನೆರವಿನಿಂದ ದುಲೀಪ್‌ ಟ್ರೋಫಿ ಕ್ರಿಕೆಟ್‌ ಕೂಟದಲ್ಲಿ ಭಾರತ “ಡಿ’ ತಂಡವು ಪಂದ್ಯದ ಮೊದಲ ದಿನ ಭಾರತ “ಬಿ’ ವಿರುದ್ಧ 5 ವಿಕೆಟಿಗೆ 306 ರನ್ನುಗಳ ಉತ್ತಮ ಮೊತ್ತ ಪೇರಿಸಿದೆ.

ಭಾರತೀಯ ಟೆಸ್ಟ್‌ ತಂಡಕ್ಕೆ ಮರಳಲು ಯೋಚಿಸುತ್ತಿರುವ ಅಯ್ಯರ್‌ ಸದ್ಯ ಸಾಗುತ್ತಿರುವ ಈ ಕೂಟದಲ್ಲಿ ಸತತ ಎರಡನೇ ಬಾರಿ ಶೂನ್ಯಕ್ಕೆ ಔಟಾಗಿ ನಿರಾಶೆ ಅನುಭವಿಸಿದ್ದಾರೆ. ಆದರೆ ದೇವದತ್ತ ಪಡಿಕ್ಕಲ್‌ (50), ಶ್ರೀಕರ್‌ ಭರತ್‌ (52), ರಿಕಿ ಭುಯಿ (56) ಮತ್ತು ಸಂಜು ಸ್ಯಾಮ್ಸನ್‌ ಅವರ ಅಜೇಯ 89 ರನ್‌ ನೆರವಿನಿಂದ ಭಾರತ “ಡಿ’ ತಂಡವು 5 ವಿಕೆಟಿಗೆ 306 ರನ್‌ ಪೇರಿಸಿದೆ. ದಿನದಾಟದ ಅಂತ್ಯದ ವೇಳೆ ಸ್ಯಾಮ್ಸನ್‌ ಮತ್ತು 26 ರನ್‌ ಗಳಿಸಿದ್ದ ಸರನ್‌Ï ಜೈನ್‌ ಕ್ರೀಸ್‌ನಲ್ಲಿದ್ದರು. ಬಿರುಸಿನ ಆಟವಾಡಿದ ಸ್ಯಾಮ್ಸನ್‌ ಇಷ್ಟರವರೆಗೆ 83 ಎಸೆತ ಎದುರಿಸಿದ್ದು 10 ಬೌಂಡರಿ ಮತ್ತು ಮೂರು ಸಿಕ್ಸರ್‌ ಬಾರಿಸಿದ್ದರು. ಅವರು ಈಗಾಗಲೇ ಜೈನ್‌ ಜತೆ ಮುರಿಯದ ಆರನೇ ವಿಕೆಟಿಗೆ 90 ರನ್‌ ಪೇರಿಸಿದ್ದಾರೆ.

ಭಾರತ “ಬಿ’ ಪರ ಲೆಗ್‌ ಸ್ಪಿನ್ನರ್‌ ರಾಹುಲ್‌ ಚಹರ್‌ ಬಿಗು ದಾಳಿ ಸಂಘಟಿಸಿದ್ದರು. ಅವರು 60 ರನ್‌ ವೆಚ್ಚದಲ್ಲಿ ಮೂರು ವಿಕೆಟ್‌ ಕಿತ್ತು “ಡಿ’ ತಂಡಕ್ಕೆ ಹೊಡೆತ ನೀಡಿದ್ದರು. ಮುಕೇಶ್‌ ಮತ್ತು ನವದೀಪ್‌ ಸೈನಿ ತಲಾ ಒಂದು ವಿಕೆಟ್‌ ಪಡೆದರು.

ಇನ್ನಿಂಗ್ಸ್‌ ಆರಂಭಿಸಿದ್ದ ದೇವದತ್ತ ಪಡಿಕ್ಕಲ್‌ ಮತ್ತು ಭರತ್‌ ಮೊದಲ ವಿಕೆಟಿಗೆ 105 ರನ್ನುಗಳ ಜತೆಯಾಟ ನೀಡಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದ್ದರು. ಈ ಜೋಡಿಯನ್ನು ಸೈನಿ ಮುರಿದರು. ಸ್ವಲ್ಪ ಹೊತ್ತಿನಲ್ಲಿ ಭರತ್‌ ಅವರ ವಿಕೆಟನ್ನು ಮುಕೇಶ್‌ ಉರುಳಿಸಿದರು.

ಅಯ್ಯರ್‌ ನಿರಾಶೆ
ಮೂರು ವಿಕೆಟಿಗೆ 172 ರನ್‌ ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ವೇಳೆ ಕ್ರೀಸ್‌ಗೆ ಆಗಮಿಸಿದ್ದ ನಾಯಕ ಅಯ್ಯರ್‌ ಮತ್ತೆ ಶೂನ್ಯಕ್ಕೆ ಔಟಾಗಿ ನಿರಾಶೆ ಅನುಭವಿಸಿದರು. ಅವರು ಈ ಕೂಟದ ಕಳೆದ ಐದು ಇನ್ನಿಂಗ್ಸ್‌ಗಳಲ್ಲಿ ಕೇವಲ 104 ರನ್‌ (9, 54, 0, 41, 0) ಗಳಿಸಿದ್ದರು. ಬಾಂಗ್ಲಾ ವಿರುದ್ಧದ ಭಾರತ ತಂಡದಿಂದ ಹೊರಬಿದ್ದಿದ್ದ ಅಯ್ಯರ್‌ ಅವರನ್ನು ಆಸ್ಟ್ರೇಲಿಯ ವಿರುದ್ಧದ ಸರಣಿಗೆ ಪರಿಗಣಿಸುವ ಸಾಧ್ಯತೆ ಇನ್ನಷ್ಟು ದೂರವಾಗಿದೆ.
ಸಂಕ್ಷಿಪ್ತ ಸ್ಕೋರು: ಭಾರತ “ಡಿ’ ಐದು ವಿಕೆಟಿಗೆ 306 (ಸಂಜು ಸ್ಯಾಮ್ಸನ್‌ 89 ಬ್ಯಾಟಿಂಗ್‌, ದೇವದತ್ತ ಪಡಿಕ್ಕಲ್‌ 50, ಶ್ರೀಕರ್‌ ಭರತ್‌ 52, ರಿಕಿ ಭುಯಿ 56, ರಾಹುಲ್‌ ಚಹರ್‌ 60ಕ್ಕೆ 3).

ಭಾರತ “ಎ’ ತಂಡಕ್ಕೆ ರಾವತ್‌ ನೆರವು
ಅನಂತಪುರ: ಶಾಶ್ವತ್‌ ರಾವತ್‌ ಅವರ ಅಜೇಯ ಶತಕದಿಂದಾಗಿ ಭಾರತ “ಎ’ ತಂಡವು ದುಲೀಪ್‌ ಟ್ರೋಫಿ ಕ್ರಿಕೆಟ್‌ ಕೂಟದ ಪಂದ್ಯದಲ್ಲಿ ಭಾರತ “ಸಿ’ ತಂಡದೆದುರು 7 ವಿಕೆಟಿಗೆ 224 ರನ್‌ ಪೇರಿಸಿದೆ.

ಆರಂಭಿಕ ಕುಸಿತದ ಬಳಿಕ ತಂಡಕ್ಕೆ ಆಸರೆಯಾದ ಎಡಗೈ ಬ್ಯಾಟ್ಸ್‌ಮನ್‌ ಆಗಿರುವ ರಾವತ್‌ ಸೊಗಸಾದ ಶತಕ ಬಾರಿಸಿ ಗಮನ ಸೆಳೆದರು. ಅವರಿಗೆ ಉಪಯುಕ್ತ ನೆರವು ನೀಡಿದ ಶಮ್ಸ್‌ ಮುಲಾನಿ 76 ಎಸೆತಗಳಿಂದ 44 ರನ್‌ ಹೊಡೆದರು.

ಆರಂಭಿಕ ಆಘಾತಕ್ಕೆ ಒಳಗಾದ ಭಾರತ “ಎ’ ತಂಡವು ಮೊದಲ 20 ಓವರ್‌ ಮುಗಿದಾಗ ಕೇವಲ 36 ರನ್ನಿಗೆ ಐದು ವಿಕೆಟ್‌ ಕಳೆದುಕೊಂಡು ಒದ್ದಾಡುತ್ತಿತ್ತು. ಕಳೆದ ಪಂದ್ಯದ ಶತಕವೀರ ಪ್ರಥಮ್‌ ಸಿಂಗ್‌, ನಾಯಕ ಮಾಯಾಂಕ್‌ ಅಗರ್ವಾಲ್‌, ತಿಲಕ್‌ ವರ್ಮ ಮತ್ತು ರಿಯಾನ್‌ ಪರಾಗ್‌ ಅವರು ಅಲ್ಪ ಮೊತ್ತಕ್ಕೆ ಔಟಾಗಿ ನಿರಾಶೆ ಅನುಭವಿಸಿದರು. ಕಳೆದ ವಾರ ಇನ್ನಿಂಗ್ಸ್‌ವೊಂದರಲ್ಲಿ ಎಂಟು ವಿಕೆಟ್‌ ಹಾರಿಸಿದ್ದ ಅನುÏಲ್‌ ಕಾಂಬೋಜ್‌ ಮತ್ತೆ ಬಿಗು ದಾಳಿ ಸಂಘಟಿಸಿ 40 ರನ್ನಿಗೆ ಮೂರು ವಿಕೆಟ್‌ ಕಿತ್ತರು.

ದೇಶೀಯ ಕ್ರಿಕೆಟ್‌ನಲ್ಲಿ ಬರೋಡ ಪರ ಆಡುತ್ತಿರುವ ಶಾಶ್ವತ್‌ ರಾವತ್‌ ಇಷ್ಟರವರೆಗೆ 235 ಎಸೆತ ಎದುರಿಸಿದ್ದು 122 ರನ್‌ ಗಳಿಸಿ ಆಡುತ್ತಿದ್ದಾರೆ. ಆಕರ್ಷಕ ಹೊಡೆತಗಳಿಂದ ಗಮನ ಸೆಳೆದ ಅವರು ಈಗಾಗಲೇ 15 ಬೌಂಡರಿ ಬಾರಿಸಿದ್ದಾರೆ. ಅವರು ಮುಲಾನಿ ಜತೆ 87 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡಿದ್ದರು.

ಸಂಕ್ಷಿಪ್ತ ಸ್ಕೋರು: ಭಾರತ “ಎ’ 7 ವಿಕೆಟಿಗೆ 224 (ಶಾಶ್ವತ್‌ ರಾವತ್‌ 122 ಬ್ಯಾಟಿಂಗ್‌, ಶಮ್ಸ್‌ ಮುಲಾನಿ 44, ಅನುÏಲ್‌ ಕಾಂಬೋಜ್‌ 40ಕ್ಕೆ 3, ವಿಜಯಕುಮಾರ್‌ ವೈಶಾಖ್‌ 33ಕ್ಕೆ 2).

ಟಾಪ್ ನ್ಯೂಸ್

1-asss-bg

Baba Siddique ಪ್ರಕರಣಕ್ಕೆ ಜಲಂಧರ್ ನಂಟು: 4ನೇ ಆರೋಪಿ ಜೀಶನ್ ಅಖ್ತರ್

Kapil Sibal;

EVM ಬಗ್ಗೆ ಕಾಂಗ್ರೆಸ್ ಎತ್ತಿರುವ ಪ್ರಶ್ನೆಗಳಿಗೆ ಚುನಾವಣ ಆಯೋಗ ಸ್ಪಷ್ಟನೆ ನೀಡಲೇಬೇಕು: ಸಿಬಲ್

BBK11:ಬಿಗ್ ಬಾಸ್‌ ಮನೆಯಲ್ಲಿ ನಮಗೆ ಯಾವ ತೊಂದರೆಯೂ ಆಗಿಲ್ಲ..ಮಹಿಳಾ ಸ್ಪರ್ಧಿಗಳಿಂದ ಸ್ಪಷ್ಟನೆ

BBK11:ಬಿಗ್ ಬಾಸ್‌ ಮನೆಯಲ್ಲಿ ನಮಗೆ ಯಾವ ತೊಂದರೆಯೂ ಆಗಿಲ್ಲ..ಮಹಿಳಾ ಸ್ಪರ್ಧಿಗಳಿಂದ ಸ್ಪಷ್ಟನೆ

yallamma-Meeting

Savadatthi: ಯಲ್ಲಮ್ಮ ದೇವಿ ಭಕ್ತರಿಗೆ ದಾಸೋಹ ವ್ಯವಸ್ಥೆ, ಸ್ವಚ್ಛತೆಗೆ ಆದ್ಯತೆ ನೀಡಿ: ಸಿಎಂ

salman-khan

Salman Khan ವಿರುದ್ದದ ಸೇಡು? ..; ಎಲ್ಲಾ ಕೋನಗಳಲ್ಲಿ ತನಿಖೆ ಎಂದ ಮುಂಬಯಿ ಪೊಲೀಸರು

Congress: ವಿಧಾನ ಪರಿಷತ್‌ ಉಪ ಚುನಾವಣೆ: ಕಾಂಗ್ರೆಸ್‌ ಉಸ್ತುವಾರಿಗಳ ನೇಮಕ

Congress: ವಿಧಾನ ಪರಿಷತ್‌ ಉಪ ಚುನಾವಣೆ: ಕಾಂಗ್ರೆಸ್‌ ಉಸ್ತುವಾರಿಗಳ ನೇಮಕ

1-reee

Virat Kohli ಅವರನ್ನು ಭಾರತ ಹೊರಗಿಟ್ಟಿತ್ತೇ?:ಬಾಬರ್ ಕೈಬಿಟ್ಟಿದ್ದಕ್ಕೆ ಫಖರ್ ಜಮಾನ್ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-reee

Virat Kohli ಅವರನ್ನು ಭಾರತ ಹೊರಗಿಟ್ಟಿತ್ತೇ?:ಬಾಬರ್ ಕೈಬಿಟ್ಟಿದ್ದಕ್ಕೆ ಫಖರ್ ಜಮಾನ್ ಆಕ್ರೋಶ

ಟೆಸ್ಟ್‌ ತಂಡದಿಂದ ಬಾಬರ್‌ಗೆ ಗೇಟ್‌ ಪಾಸ್;‌ ಪಾಕ್‌ ಕ್ರಿಕೆಟ್‌ ನಲ್ಲಿ ಏನಾಗುತ್ತಿದೆ?

Pakistan Cricket: ಟೆಸ್ಟ್‌ನಿಂದ ಬಾಬರ್‌ಗೆ ಗೇಟ್‌ ಪಾಸ್;‌ ಪಾಕ್‌ ತಂಡದಲ್ಲಿ ಏನಾಗುತ್ತಿದೆ?

INDvsBAN: India’s young speedster Mayank Yadav joins the special record club

INDvsBAN: ವಿಶೇಷ ದಾಖಲೆ ಕ್ಲಬ್‌ ಸೇರಿದ ಭಾರತದ ಯುವ ವೇಗಿ ಮಯಾಂಕ್‌ ಯಾದವ್

15

Women’s T20 World Cup: ಭಾರತಕ್ಕಿಂದು ಆಸೀಸ್‌ವಿರುದ್ಧ ನಿರ್ಣಾಯಕ ಪಂದ್ಯ

1–wwewqewq

Bodybuilding competition; ದಿನೇಶ್‌ ಆಚಾರ್ಯ ಮಿಸ್ಟರ್‌ ಉಚ್ಚಿಲ ದಸರಾ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

6

Kumbla: ಕಾಡು ಹಂದಿಯಿಂದ ಸ್ಕೂಟರ್‌ ಹಾನಿ

POlice

Kundapur: ಹಲ್ಲೆ; ಓರ್ವ ಆಸ್ಪತ್ರೆಗೆ ದಾಖಲು

accident

Padubidri: ಪಿಕ್‌ ಅಪ್‌ ವಾಹನ ಡಿಕ್ಕಿ; ವ್ಯಕ್ತಿ ಮೃತ್ಯು

1-asss-bg

Baba Siddique ಪ್ರಕರಣಕ್ಕೆ ಜಲಂಧರ್ ನಂಟು: 4ನೇ ಆರೋಪಿ ಜೀಶನ್ ಅಖ್ತರ್

mis behaviour

Kasaragod: ಲೈಂಗಿಕ ಕಿರುಕುಳ; ಇಬ್ಬರು ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.