ಈಸ್ಟ್ ಬೆಂಗಾಲ್ ಶತಮಾನೋತ್ಸವ
Team Udayavani, Aug 2, 2019, 5:13 AM IST
ಕೋಲ್ಕತಾ : ಶತಮಾನೋತ್ಸ ವದ ಸಂಭ್ರಮದಲ್ಲಿರುವ ಈಸ್ಟ್ ಬೆಂಗಾಲ್ ಫುಟ್ಬಾಲ್ ಕ್ಲಬ್ಗ ಪ. ಬಂಗಾಲದ ಸಿಎಂ ಮಮತಾ ಬ್ಯಾನರ್ಜಿ ಶುಭ ಹಾರೈಸಿದ್ದಾರೆ.
‘ಇಂದು ಈಸ್ಟ್ ಬೆಂಗಾಲ್ ಫುಟ್ಬಾಲ್ ಕ್ಲಬ್ನ ಶತಮಾನೋತ್ಸವ. ಫುಟ್ಬಾಲ್ನ ಭವ್ಯ ವೈಭವಕ್ಕೆ ಸಾಕ್ಷಿಯಾಗಿರುವ ಈ ಕ್ಲಬ್ ಕ್ರೀಡೆಯ ಉತ್ತೇಜನಕ್ಕೆ ತನ್ನದೇ ಆದ ಕೊಡುಗೆ ಯನ್ನು ನೀಡಿದೆ. ಅದರ ಹಾಲಿ ಮತ್ತು ಮಾಜಿ ಆಟಗಾರರಿಗೆ ನನ್ನ ಶುಭಹಾ ರೈಕೆಗಳು’ ಎಂದು ದೀದಿ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ಸುರೇಶ್ ಚಂದ್ರ ಚೌಧರಿ ಎಂಬ ಉದ್ಯಮಿ 1920, ಆಗಸ್ಟ್ ಒಂದರಂದು ಈಸ್ಟ್ ಬೆಂಗಾಲ್ ಫುಟ್ಬಾಲ್ ಕ್ಲಬ್ ಸ್ಥಾಪಿಸಿದ್ದರು. ಆಗ ಕ್ಲಬ್ನಲ್ಲಿದ್ದವರೆಲ್ಲ ಪೂರ್ವ ಬಂಗಾಲದವರು.
ಕಪಿಲ್ ಗೆ ‘ಭಾರತ್ ಗೌರವ್’
ನೇತಾಜಿ ಒಳಾಂಗಣ ಸ್ಟೇಡಿಯಂ ನಲ್ಲಿ ನಡೆದ ಈಸ್ಟ್ ಬೆಂಗಾಲ್ ಶತಮಾನೋತ್ಸವ ಸಮಾರಂಭದಲ್ಲಿ ಮಾಜಿ ಕ್ರಿಕೆಟಿಗ ಕಪಿಲ್ದೇವ್ ಅವರಿಗೆ ‘ಭಾರತ ಗೌರವ್’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದು ಈಸ್ಟ್ ಬೆಂಗಾಲ್ ಕ್ಲಬ್ ವತಿಯಿಂದ ನೀಡಲಾಗುವ ಪ್ರತಿಷ್ಠಿತ ಪ್ರಶಸ್ತಿಯಾಗಿದೆ.