ಇಟಾಲಿಯನ್‌ ಓಪನ್‌: ಎಲಿನಾ ಸ್ವಿಟೋಲಿನಾ, ಜ್ವೆರೇವ್‌ ಔಟ್

Team Udayavani, May 16, 2019, 6:00 AM IST

ರೋಮ್‌: ಎರಡು ಬಾರಿಯ ವನಿತಾ ಚಾಂಪಿಯನ್‌ ಎಲಿನಾ ಸ್ವಿಟೋಲಿನಾ, ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೇವ್‌ ‘ಇಟಾಲಿ ಯನ್‌ ಓಪನ್‌’ ಕೂಟದ ದ್ವಿತೀಯ ಸುತ್ತಿನಲ್ಲಿ ಸೋಲನುಭವಿಸಿ ಕೂಟ ದಿಂದ ಹೊರಬಿದ್ದಿದ್ದಾರೆ.

ದ್ವಿತೀಯ ಸುತ್ತಿನ ಪಂದ್ಯದಲ್ಲಿ ಅಕ್ಕ ವೀನಸ್‌ ವಿಲಿಯಮ್ಸ್‌ ವಿರುದ್ಧ ಆಡಬೇಕಿದ್ದ ಸೆರೆನಾ ವಿಲಿಯಮ್ಸ್‌ಗೆ ಗಂಟು ನೋವು ಕಾಣಿಸಿಕೊಂಡಿದ್ದು ಕೂಟದಿಂದ ಹಿಂದೆ ಸರಿದಿದ್ದಾರೆ. ಇವರ ನಿರ್ಗಮನದಿಂದ ವೀನಸ್‌ ತೃತೀಯ ಸುತ್ತಿಗೆ ಮುನ್ನಡೆದಿದ್ದಾರೆ.

ವನಿತಾ ಸಿಂಗಲ್ಸ್ನ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಉಕ್ರೇನಿನ ಸ್ವಿಟೋಲಿನಾ ಬೆಲರೂಸ್‌ನ ವಿಕ್ಟೋರಿಯಾ ಅಜರೆಂಕಾ ವಿರುದ್ಧ 6-4, 1-6, 5-7 ಸೆಟ್‌ಗಳಿಂದ ಸೋತರು.

ವಿಶ್ವದ ಮಾಜಿ ನಂ. ವನ್‌ ಕ್ಯಾರೋಲಿನ್‌ ವೋಜ್ನಿಯಾಕಿ ಕೂಡ ಗಾಯಾಳಾಗಿದ್ದಾರೆ. ಡೆನಿಯಲ್ ಕೊಲಿನ್ಸ್‌ ವಿರುದ್ಧ ಮೊದಲ ಸೆಟ್ ಕಳೆದುಕೊಂಡು ಹಿನ್ನಡೆಯಲ್ಲಿದ್ದಾಗ ಕಾಲು ನೋವಿಗೆ ತುತ್ತಾದ ಕಾರಣ ವೋಜ್ನಿಯಾಕಿ ಹಿಂದೆ ಸರಿದರು. ಜೆಕ್‌ ಗಣರಾಜ್ಯದ ಕ್ಯಾರೋಲಿನಾ ಪ್ಲಿಸ್ಕೋವಾ, ಆಸ್ಟ್ರೇಲಿಯದ ಆ್ಯಶ್ಲಿ ಬಾರ್ಟಿ 3ನೇ ಸುತ್ತಿಗೆ ಪ್ರವೇಶಿಸಿದ್ದಾರೆ.

ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ವಿಶ್ವದ 5ನೇ ರ್‍ಯಾಂಕಿನ ಅಲೆಕ್ಸಾಂಡರ್‌ ಜ್ವೆರೇವ್‌ ಇಟಲಿಯ ವೈಲ್ಡ್ಕಾರ್ಡ್‌ ಆಟಗಾರ ಮ್ಯಾಟೊ ಬೆರ್ರೆಟ್ಟಿನಿ ವಿರುದ್ಧ 5-7, 5-7ರಿಂದ ಸೋತರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ