ಎಲಿಸ್‌ ಮಾರ್ಟೆನ್ಸ್‌ಗೆ ಕತಾರ್‌ ಕಿರೀಟ


Team Udayavani, Feb 18, 2019, 12:30 AM IST

elise-mertens.jpg

ದೋಹಾ: ಬೆಲ್ಜಿಯಂನ ಎಲಿಸ್‌ ಮಾರ್ಟೆನ್ಸ್‌ ತಮ್ಮ ಟೆನಿಸ್‌ ಬಾಳ್ವೆಯ ಅತೀ ದೊಡ್ಡ ಪ್ರಶಸ್ತಿ ಜಯಿಸಿದ್ದಾರೆ. ಶನಿವಾರ ರಾತ್ರಿ ನಡೆದ “ಕತಾರ್‌ ಓಪನ್‌’ ಕೂಟದ ಫೈನಲ್‌ನಲ್ಲಿ ಅವರು 3ನೇ ಶ್ರೇಯಾಂಕದ ಸಿಮೋನಾ ಹಾಲೆಪ್‌ ವಿರುದ್ಧ ಮೊದಲ ಸೆಟ್‌ ಕಳೆದುಕೊಂಡೂ ಟ್ರೋಫಿಗೆ ಮುತ್ತಿಡುವಲ್ಲಿ ಯಶಸ್ವಿಯಾದರು. ಮಾರ್ಟೆನ್ಸ್‌ ಗೆಲುವಿನ ಅಂತರ 3-6, 6-4, 6-3.

ವಿಶ್ವದ 21ನೇ ರ್‍ಯಾಂಕಿಂಗ್‌ ಆಟಗಾರ್ತಿಯಾಗಿರುವ ಎಲಿಸ್‌ ಮಾರ್ಟೆನ್ಸ್‌ ಮೊದಲ ಸೆಟ್‌ನಲ್ಲಿ ಹಾಲೆಪ್‌ಗೆ ಸಾಟಿಯಾಗುವಲ್ಲಿ ವಿಫ‌ಲರಾದರು. ಆಗ ಮಾರ್ಟೆನ್ಸ್‌ ಬಹಳ ನರ್ವಸ್‌ ಆದಂತಿತ್ತು. 32 ನಿಮಿಷಗಳಲ್ಲಿ ಈ ಸೆಟ್‌ ಕಳೆದುಕೊಂಡರು.
ದ್ವಿತೀಯ ಸೆಟ್‌ ವೇಳೆಯೂ 0-2 ಹಿನ್ನಡೆಯಲ್ಲಿದ್ದರು. ಆಗ ಬೆನ್ನು ನೋವಿಗೆ ಸಿಲುಕಿದಾಗಲಂತೂ ಬೆಲ್ಜಿಯನ್‌ ಆಟಗಾರ್ತಿಯ ಸೋಲು ಖಚಿತ ಎಂಬುದೇ ಎಲ್ಲರ ಲೆಕ್ಕಾಚಾರವಾಗಿತ್ತು. ಆದರೆ 8 ನಿಮಿಷಗಳ “ಮೆಡಿಕಲ್‌ ಟೈಮ್‌ಔಟ್‌’ ಬಳಿಕ ಅಮೋಘ ರೀತಿಯಲ್ಲಿ ಚೇತರಿಸಿಕೊಂಡ ಮಾರ್ಟೆನ್ಸ್‌, ನೆಚ್ಚಿನ ಹಾಲೆಪ್‌ ಹಾರಾಟವನ್ನು ಕೊನೆಗೊಳಿಸಿಯೇ ಬಿಟ್ಟರು. 2 ಗಂಟೆಗೂ ಸ್ವಲ್ಪ ಹೆಚ್ಚು ಕಾಲ ಇವರಿಬ್ಬರ ಆಟ ಸಾಗಿತು.

ಈ ಜಯದೊಂದಿಗೆ ಎಲಿಸ್‌ ಮಾರ್ಟೆನ್ಸ್‌ ಒಂದೇ ವಾರದಲ್ಲಿ ಟಾಪ್‌-10 ಯಾದಿಯ ಮೂವರು ಆಟಗಾರರನ್ನು ಸೋಲಿಸಿದಂತಾಯಿತು. ಹಾಗೆಯೇ ಗ್ರ್ಯಾನ್‌ಸ್ಲಾಮ್‌ ಚಾಂಪಿಯನ್ಸ್‌ ವಿರುದ್ಧ 2ನೇ ಗೆಲುವನ್ನೂ ಸಾಧಿಸಿದರು. ಹಾಲಿ ಫ್ರೆಂಚ್‌ ಓಪನ್‌ ಚಾಂಪಿಯನ್‌ ಹಾಲೆಪ್‌ ಅವರನ್ನು ಫೈನಲ್‌ನಲ್ಲಿ ಸೋಲಿಸುವುದಕ್ಕಿಂತ ಮೊದಲು ಸೆಮಿಫೈನಲ್‌ನಲ್ಲಿ ವಿಂಬಲ್ಡನ್‌ ವಿಜೇತೆಯಾಗಿರುವ ಆ್ಯಂಜೆಲಿಕ್‌ ಕೆರ್ಬರ್‌ ಆಟವನ್ನೂ ಕೊನೆಗೊಳಿಸಿದ್ದರು.

ಈ ಜಯದಿಂದಾಗಿ ನೂತನ ರ್‍ಯಾಂಕಿಂಗ್‌ನಲ್ಲಿ ಎಲಿಸ್‌ ಮಾರ್ಟೆನ್ಸ್‌ 5 ಸ್ಥಾನ ಮೇಲೇರಿ 16ನೇ ಸ್ಥಾನ ತಲುಪಲಿದ್ದಾರೆ. ಕಾಕತಾಳೀಯವೆಂದರೆ, ಕಳೆದ ವರ್ಷದ ಕತಾರ್‌ ಓಪನ್‌ ಪ್ರಶಸ್ತಿ ಗೆಲ್ಲುವಾಗ ಪೆಟ್ರಾ ಕ್ವಿಟೋವಾ ಕೂಡ 21ನೇ ರ್‍ಯಾಂಕಿಂಗ್‌ ಹೊಂದಿದ್ದರು.

ಬಹಳ ಬಳಲಿದ್ದೆ: ಹಾಲೆಪ್‌
2014ರಲ್ಲಿ ಕತಾರ್‌ ಕಿರೀಟ ಏರಿಸಿಕೊಂಡಿದ್ದ ಸಿಮೋನಾ ಹಾಲೆಪ್‌ ಸೋಲಿನ ಬಳಿಕ ಪ್ರತಿಕ್ರಿಯಿಸುತ್ತ, “3ನೇ ಸೆಟ್‌ ವೇಳೆ ನಾನು ಬಹಳ ಬಳಲಿದ್ದೆ. ಈ ಸೆಟ್‌ ಗೆಲ್ಲುವ ಯಾವ ಅವಕಾಶವೂ ನನ್ನ ಮುಂದಿರಲಿಲ್ಲ. ಮಾರ್ಟೆನ್ಸ್‌ ಹಂತ ಹಂತವಾಗಿ ಹೆಚ್ಚು ಬಲಿಷ್ಠಗೊಳ್ಳುತ್ತಲೇ ಹೋದರು. ಗೆಲುವಿಗೆ ಅವರು ಅರ್ಹವಾಗಿದ್ದರು’ ಎಂದರು.

“ಇದು ನನ್ನ ಟೆನಿಸ್‌ ಬದುಕಿನ ಮಹಾನ್‌ ಗಳಿಗೆ. ಹಿನ್ನಡೆಯ ಬಳಿಕವೂ ಉತ್ತಮ ಪ್ರದರ್ಶನ ನೀಡಿದೆ. ನೈಸೆಸ್ಟ್‌ ವಿಕ್ಟರಿ’
– ಎಲಿಸ್‌ ಮಾರ್ಟೆನ್ಸ್‌

ಟಾಪ್ ನ್ಯೂಸ್

ತಿಪಟೂರು: ಬಳುವನೇರಲು ಗೇಟ್ ಬಳಿ ಬೈಕಿಗೆ ಜೀಪು ಡಿಕ್ಕಿ : ಬೈಕ್ ಸವಾರರು ಸ್ಥಳದಲ್ಲೇ ಸಾವು

ಬಳುವನೇರಲು ಗೇಟ್ ಬಳಿ ಭೀಕರ ಅಪಘಾತ : ಬೈಕ್ ಸವಾರರು ಸ್ಥಳದಲ್ಲೇ ಸಾವು ;ಗ್ರಾಮಸ್ಥರ ಪ್ರತಿಭಟನೆ

730

ನಾನು ದೇವೇಗೌಡರ ಗರಡಿಯಲ್ಲಿ ಬೆಳೆದವನು: ಸಚಿವ ವಿ.ಸೋಮಣ್ಣ

ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನೇತೃತ್ವದ ಸಂಪುಟ ರಾಜಿನಾಮೆಗೆ ಪ್ರತಿಪಕ್ಷಗಳ ಆಗ್ರಹ

ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನೇತೃತ್ವದ ಸಂಪುಟ ರಾಜಿನಾಮೆಗೆ ಪ್ರತಿಪಕ್ಷಗಳ ಆಗ್ರಹ

kannada news films

ಬಿಡುಗಡೆಗೆ ರೆಡಿಯಾಗಿವೆ ಸಾಲು ಸಾಲು ಸಿನಿಮಾಗಳು…

ಪೆಗಾಸಸ್ ಗೂಢಚರ್ಯೆ; ಸ್ವತಂತ್ರ ತನಿಖೆ ನಡೆಸಲು ತಜ್ಞರ ಸಮಿತಿ ರಚಿಸಿದ ಸುಪ್ರೀಂಕೋರ್ಟ್

ಪೆಗಾಸಸ್ ಗೂಢಚರ್ಯೆ; ಸ್ವತಂತ್ರ ತನಿಖೆ ನಡೆಸಲು ತಜ್ಞರ ಸಮಿತಿ ರಚಿಸಿದ ಸುಪ್ರೀಂಕೋರ್ಟ್

kotigobba 3

ಸಲಗ, ಕೋಟಿಗೊಬ್ಬ-3 ಸಕ್ಸಸ್‌ ಸಂಭ್ರಮ

ಮಕ್ಕಳಿಗೆ ಲಸಿಕೆ ಸುರಕ್ಷಿತವೇ? ಅನುಮಾನಕ್ಕೆ ಪರಿಹಾರ

ಮಕ್ಕಳಿಗೆ ಲಸಿಕೆ ಸುರಕ್ಷಿತವೇ? ಅನುಮಾನಕ್ಕೆ ಪರಿಹಾರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1333

ಹಿಂದೂಗಳ ನಡುವೆ ನಮಾಜ್ : ಹೇಳಿಕೆಗಾಗಿ ಕ್ಷಮೆಯಾಚಿಸಿದ ವಕಾರ್ ಯೂನಿಸ್

ಟೀಮ್‌ ಇಂಡಿಯಾದ ಕೋಚ್‌ ಹುದ್ದೆಗೆ ದ್ರಾವಿಡ್‌ ಅರ್ಜಿ

ಟೀಮ್‌ ಇಂಡಿಯಾದ ಕೋಚ್‌ ಹುದ್ದೆಗೆ ದ್ರಾವಿಡ್‌ ಅರ್ಜಿ

ಬಾಂಗ್ಲಾವನ್ನು ಬಲೆಗೆ ಬೀಳಿಸೀತೇ ಇಂಗ್ಲೆಂಡ್‌?

ಬಾಂಗ್ಲಾವನ್ನು ಬಲೆಗೆ ಬೀಳಿಸೀತೇ ಇಂಗ್ಲೆಂಡ್‌?

ಜನಾಂಗೀಯ ನಿಂದನೆ: ಮಂಡಿಯೂರಲು ಡಿ ಕಾಕ್‌ ನಕಾರ!

ಜನಾಂಗೀಯ ನಿಂದನೆ: ಮಂಡಿಯೂರಲು ಡಿ ಕಾಕ್‌ ನಕಾರ!

ಗೆಲುವಿನ ಓಟ ಮುಂದುವರಿಸಿದ ಪಾಕಿಸ್ಥಾನ

ಗೆಲುವಿನ ಓಟ ಮುಂದುವರಿಸಿದ ಪಾಕಿಸ್ಥಾನ

MUST WATCH

udayavani youtube

ಆಧುನಿಕ ಪದ್ಧತಿಯೊಂದಿಗೆ ಬ್ಯಾಡಗಿ ಮೆಣಸಿನಕಾಯಿ ಕೃಷಿಗೆ ಮುಂದಾದ ಅಡಕೆ ಕೃಷಿಕ

udayavani youtube

ಬಸ್ ಕಂಡಕ್ಟರ್‌ನಿಂದ ಸೂಪರ್ ಸ್ಟಾರ್ ಆದ ರಜನಿಕಾಂತ್ ಕಥೆ

udayavani youtube

ಈ ಪ್ರೌಢ ಶಾಲೆಯಲ್ಲಿ ಒಂದಲ್ಲ, ಎರಡಲ್ಲ ಹಲವಾರು ಸಮಸ್ಯೆಗಳು!

udayavani youtube

ಪಾಕಿಸ್ಥಾನದ ವಿಜಯವನ್ನು ಸಂಭ್ರಮಿಸಿದ ರಾಜಸ್ಥಾನದ ಟೀಚರ್

udayavani youtube

ಸಾಮಾಜಿಕ ಸಂದೇಶ ಹೊತ್ತು 3500 ಕಿ.ಮೀ ಸೈಕಲ್ ಪ್ರಯಾಣ!

ಹೊಸ ಸೇರ್ಪಡೆ

ತಿಪಟೂರು: ಬಳುವನೇರಲು ಗೇಟ್ ಬಳಿ ಬೈಕಿಗೆ ಜೀಪು ಡಿಕ್ಕಿ : ಬೈಕ್ ಸವಾರರು ಸ್ಥಳದಲ್ಲೇ ಸಾವು

ಬಳುವನೇರಲು ಗೇಟ್ ಬಳಿ ಭೀಕರ ಅಪಘಾತ : ಬೈಕ್ ಸವಾರರು ಸ್ಥಳದಲ್ಲೇ ಸಾವು ;ಗ್ರಾಮಸ್ಥರ ಪ್ರತಿಭಟನೆ

davanagere news

ಆಂಗ್ಲ ಭಾಷಾ ವ್ಯಾಮೋಹದಿಂದ ಹೊರ ಬನ್ನಿ

14govt-hospital

ಬಡವರಿಗೆ ವರವಾದ ಸರ್ಕಾರಿ ಆಸ್ಪತ್ರೆ

730

ನಾನು ದೇವೇಗೌಡರ ಗರಡಿಯಲ್ಲಿ ಬೆಳೆದವನು: ಸಚಿವ ವಿ.ಸೋಮಣ್ಣ

13pejavara

ಗೋವನ್ನು ಮಾತೆಯಂತೆ ಗೌರವಿಸಲು ಪೇಜಾವರ ಶ್ರೀ ಸಲಹೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.