ಆಸೀಸ್ ಆಟಗಾರ್ತಿ ಎಮಿಲಿ ಸ್ಮಿತ್ ಗೆ ಒಂದು ವರ್ಷ ನಿಷೇಧ: ಕಾರಣ ಏನು ಗೊತ್ತಾ?

Team Udayavani, Nov 19, 2019, 11:03 AM IST

ಸಿಡ್ನಿ: ತಂಡದ ಆಡಳಿತ ಮಂಡಳಿಯ ಅನುಮತಿ ಪಡೆಯದೆ ಸಾಮಾಜಿಕ ಜಾಲತಾಣದಲ್ಲಿ ಆಡುವ 11 ಆಟಗಾರರ ವಿವರ ಹಂಚಿಕೊಂಡದ್ದಕ್ಕಾಗಿ ಆಸ್ಟ್ರೇಲಿಯಾದ ತಾರಾ ಕ್ರಿಕೆಟ್‌ ಆಟಗಾರ್ತಿ ಎಮಿಲಿ ಸ್ಮಿತ್‌ ಅವರನ್ನು ಅಮಾನತು ಮಾಡಲಾಗಿದೆ.

ಸದ್ಯ ಮಹಿಳಾ ಬಿಗ್‌ ಬಾಶ್‌ ಟಿ20 ಕ್ರಿಕೆಟ್‌ ಕೂಟದಲ್ಲಿ ಹೋಬರ್ಟ್‌ ಹರಿಕೇನ್ಸ್‌ ತಂಡ ಪ್ರತಿನಿಧಿಸುತ್ತಿರುವ ಎಮಿಲಿ, ಸಿಡ್ನಿ ಥಂಡರ್‌ ವಿರುದ್ಧದ ಪಂದ್ಯಕ್ಕೂ ಮೊದಲು ಆಟಗಾರ್ತಿಯರ ಪಟ್ಟಿಯನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪ್ರಕಟಿಸಿದ್ದಾರೆ.

“ಇದು ಕೂಟದ ಭ್ರಷ್ಟಾಚಾರ ತಡೆ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಇದಕ್ಕೆ ಕ್ಷಮೆ ಇಲ್ಲ. ಆಟಗಾರ್ತಿ ವಿರುದ್ಧ ಕಠಿನ ಕ್ರಮ ತೆಗೆದು ಕೊಳ್ಳಲಾಗಿದೆ. ಮುಂದಿನ ಪಂದ್ಯಗಳಿಂದ ಸ್ಮಿತ್‌ ಅವರನ್ನು ಅಮಾನತು ಮಾಡಲಾಗಿದೆ. ಅವರು ಮುಂದಿನ ಒಂದು ವರ್ಷ ಯಾವುದೇ ವೃತ್ತಿಪರ ಕ್ರಿಕೆಟ್‌ ಕೂಟದಲ್ಲಿ ಪಾಲ್ಗೊಳ್ಳುವಂತಿಲ್ಲ’ ಎಂದು ಕ್ರಿಕೆಟ್‌ ಆಸ್ಟ್ರೇಲಿಯ ಭ್ರಷ್ಟಾಚಾರ ತನಿಖಾ ವಿಭಾಗ ತಿಳಿಸಿದೆ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ