ಯುಎಸ್ ಓಪನ್‌ನಿಂದ ಹಿಂದೆ ಸರಿದ ಮರ್ರೆ
Team Udayavani, Aug 28, 2017, 10:30 AM IST
ನ್ಯೂಯಾರ್ಕ್ :ವಿಶ್ವದ ಎರಡನೇ ರ್‍ಯಾಂಕಿನ ಬ್ರಿಟನ್‌ನ ಆ್ಯಂಡಿ ಮರ್ರೆ ಅವರು ಯುಎಸ್ ಓಪನ್ ಗ್ರ್ಯಾನ್ ಸ್ಲಾಮ್ ಕೂಟದಿಂದ ಹಿಂದೆ ಸರಿಯಲು ನಿರ್ಧ ರಿಸಿದ್ದಾರೆ. ಸೊಂಟ ನೋವಿನಿಂದ ಬಳಲುತ್ತಿರುವ ಅವರು ಈ ವರ್ಷದ ಕೊನೆಯ ಗ್ರ್ಯಾನ್‌ಸ್ಲಾಮ್‌ನಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ. ಯುಎಸ್ ಓಪನ್ ಕೂಟ ಸೋಮವಾರರಿಂದ ಆರಂಭವಾಗಲಿದೆ.
2012ರ ಯುಎಸ್ ಒಪನ್ ಸಹಿತ ಮೂರು ಗ್ರ್ಯಾನ್ ಸ್ಲಾಮ್ ಕೂಟದ ಪ್ರಶಸ್ತಿ ಗೆದ್ದಿರುವ ಮರ್ರೆ ಯಾವಾಗ ಚೇತರಿಸಿಕೊಳ್ಳುತ್ತಾರೆಂದು ಗೊತ್ತಾಗಿಲ್ಲ. ಸಾಧ್ಯವಾದಷ್ಟು ಬೇಗ ಟೆನಿಸ್ ಅಂಕಣಕ್ಕೆ ಬರಲು ಬಯಸಿದ್ದೇನೆ. ಆದರೆ ವೈದ್ಯರ ಸಲಹೆ ಪಡೆದು ಮುಂದಿನ ಕೆಲವು ದಿನಗಳಲ್ಲಿ ಈ ಬಗ್ಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳುವೆ ಎಂದು ಮರ್ರೆ ತಿಳಿಸಿದರು. ಕಳೆದ ತಿಂಗಳು ಅಮೆರಿಕದ ಸ್ಯಾಮ್ ಕ್ವೆರಿ ವಿರುದ್ಧ ವಿಂಬಲ್ಡನ್ ಟೆನಿಸ್ ಕೂಟದ ಕ್ವಾರ್ಟರ್‌ಫೈನಲ್‌ನಲ್ಲಿ ಐದು ಸೆಟ್‌ಗಳ ಮ್ಯಾರಥಾನ್ ಆಟ ಆಡಿದ ಬಳಿಕ 30ರ ಹರೆಯದ ಮರ್ರೆ ಯಾವುದೇ ಟೆನಿಸ್ ಪಂದ್ಯ ಆಡಿಲ್ಲ.
ಮರ್ರೆ ಈ ಕೂಟದಿಂದ ಹಿಂದೆ ಸರಿಯದ ಅಗ್ರ 10ರೊಳಗಿನ ಆಟಗಾರರಲ್ಲಿ ಐದನೆಯವರಾಗಿದ್ದಾರೆ. ಸ್ವಿಸ್‌ನ ವಾವ್ರಿಂಕ, ಜೊಕೋವಿಕ್, ಜಪಾನಿನ ಕೆಯಿ ನಿಶಿಕೋರಿ ಮತ್ತು ರಾನಿಕ್ ಈಗಾಗಲೇ ಗಾಯದ ಸಮಸ್ಯೆಯಿಂದ ಕೂಟದಿಂದ ಹಿಂದೆ ಸರಿದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್ ವಶಕ್ಕೆ
Aranthodu ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಹಲ್ಲೆ
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
ಕೊಲೆಗಾಗಿಯೇ ಚಾಕು ಖರೀದಿಸಿದ್ದ ಫಯಾಜ್: ಮೂರೂವರೆ ತಾಸು ಸ್ಥಳ ಮಹಜರು ಮಾಡಿದ ಸಿಐಡಿ ತಂಡ
Congress ಅಭ್ಯರ್ಥಿ ಡಿ.ಕೆ. ಸುರೇಶ್ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ