ವಿಶ್ವಕಪ್: ಇಂಗ್ಲೆಂಡ್ ಸಂಭಾವ್ಯ ತಂಡ ಪ್ರಕಟ
Team Udayavani, Apr 18, 2019, 5:30 AM IST
ಲಂಡನ್: ಆತಿಥೇಯ ಇಂಗ್ಲೆಂಡ್ ವಿಶ್ವಕಪ್ ಸಂಭಾವ್ಯ ತಂಡವೊಂದನ್ನು ಪ್ರಕಟಿಸಿದೆ. ಆದರೆ ಪಾಕಿಸ್ಥಾನ ವಿರುದ್ಧ ಆಡಲಾಗುವ 5 ಪಂದ್ಯಗಳ ಏಕದಿನ ಸರಣಿ ಬಳಿಕ 15 ಸದಸ್ಯರ ತಂಡ ಅಂತಿಗೊಳ್ಳಲಿದೆ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಎಡ್ ಸ್ಮಿತ್ ಹೇಳಿದ್ದಾರೆ. ಈ ಸರಣಿಗೂ ಮುನ್ನ ಐರ್ಲೆಂಡ್ ವಿರುದ್ಧವೂ ಇಂಗ್ಲೆಂಡ್ ಏಕದಿನ ಪಂದ್ಯವೊಂದನ್ನು ಆಡಲಿದೆ.
ಸಂಭಾವ್ಯ ತಂಡ: ಇಯಾನ್ ಮಾರ್ಗನ್ (ನಾಯಕ), ಮೊಯಿನ್ ಅಲಿ, ಜಾನಿ ಬೇರ್ಸ್ಟೊ, ಜಾಸ್ ಬಟ್ಲರ್, ಟಾಮ್ ಕರನ್, ಜೋ ಡೆನ್ಲಿ. ಅಲೆಕ್ಸ್ ಹೇಲ್ಸ್, ಲಿಯಮ್ ಪ್ಲಂಕೆಟ್, ಆದಿಲ್ ರಶೀದ್, ಜೋ ರೂಟ್, ಜಾಸನ್ ರಾಯ್, ಬೆನ್ ಸ್ಟೋಕ್ಸ್, ಡೇವಿಡ್ ವಿಲ್ಲಿ, ಕ್ರಿಸ್ ವೋಕ್ಸ್, ಮಾರ್ಕ್ ವುಡ್.