ದಕ್ಷಿಣ ಆಫ್ರಿಕಾಕ್ಕೆ ತವರಿನಲ್ಲೇ ವೈಟ್‌ವಾಶ್
3-0 ಅಂತರದಿಂದ ಟಿ20 ಸರಣಿ ಗೆದ್ದ ಇಂಗ್ಲೆಂಡ್
Team Udayavani, Dec 2, 2020, 6:35 PM IST
ಕೇಪ್‌ಟೌನ್: ಮೂರನೇ ಟಿ20 ಪಂದ್ಯವನ್ನು 9 ವಿಕೆಟ್‌ಗಳಿಂದ ಗೆದ್ದ ಇಂಗ್ಲೆಂಡ್, ದಕ್ಷಿಣ ಆಫ್ರಿಕಾಕ್ಕೆ ಅವರದೇ ನೆಲದಲ್ಲಿ ವೈಟ್‌ವಾಶ್ ಮಾಡಿದೆ. ಮಂಗವಾರ ರಾತ್ರಿಯ ಕೇಪ್‌ಟೌನ್ ಪಂದ್ಯ ಬೃಹತ್ ಮೊತ್ತದ ಸ್ಪರ್ಧೆಯಾಗಿ ಗೋಚರಿಸಿದರೂ ಇಂಗ್ಲೆಂಡ್ ಇದನ್ನು ನಿರಾಯಾಸವಾಗಿ ಗೆದ್ದು ಮೆರೆದಾಟಿತು. ಮೊದಲು ಬ್ಯಾಟಿಂಗ್ ನಡೆಸಿದ ಡಿ ಕಾಕ್ ಪಡೆ 3 ವಿಕೆಟಿಗೆ 191 ರನ್ ಪೇರಿಸಿದರೆ, ಇಂಗ್ಲೆಂಡ್ 17.4 ಓವರ್‌ಗಳಲ್ಲಿ ಒಂದೇ ವಿಕೆಟಿಗೆ 192 ರನ್ ಬಾರಿಸಿ ಅಮೋಘ ಜಯ ಸಾಧಿಸಿತು.
ಪ್ರಚಂಡ ಫಾರ್ಮ್ನಲ್ಲಿದ್ದ ಡೇವಿಡ್ ಮಾಲನ್ ಅಜೇಯ 99 ರನ್ (47 ಎಸೆತ, 11 ಬೌಂಡರಿ, 5 ಸಿಕ್ಸರ್) ಮತ್ತು ಆರಂಭಕಾರ ಜಾಸ್ ಬಟ್ಲರ್ ಅಜೇಯ 67 ರನ್ (46 ಎಸೆತ, 3 ಬೌಂಡರಿ, 5 ಸಿಕ್ಸರ್) ಬಾರಿಸಿ ಆತಿಥೇಯರ ಎಸೆತಗಳನ್ನು ಚೆಲ್ಲಾಪಿಲ್ಲಿ ಮಾಡಿದರು. 14 ಓವರ್ ಬ್ಯಾಟಿಂಗ್ ನಡೆಸಿದ ಇವರು ಮುರಿಯದ ದ್ವಿತೀಯ ವಿಕೆಟಿಗೆ 167 ರನ್ ಪೇರಿಸಿ ವಿಜೃಂಭಿಸಿದರು. ಉರುಳಿದ ಏಕೈಕ ವಿಕೆಟ್ ಜಾಸನ್ ರಾಯ್ (16) ಅವರದಾಗಿತ್ತು. ಇದು ನೋರ್ಜೆ ಪಾಲಾಯಿತು.
ದಕ್ಷಿಣ ಆಫ್ರಿಕಾ ಪರ ವಾನ್ ಡರ್ ಡುಸೆನ್ (74) ಮತ್ತು ಫಾ ಡು ಪ್ಲೆಸಿಸ್ (52) ಅಜೇಯ ಜತೆಯಾಟದಲ್ಲಿ 127 ರನ್ ಒಟ್ಟುಗೂಡಿಸಿದರು.
ಸಂಕ್ಷಿಪ್ತ ಸ್ಕೋರ್: ದಕ್ಷಿಣ ಆಫ್ರಿಕಾ-20 ಓವರ್‌ಗಳಲ್ಲಿ 3 ವಿಕೆಟಿಗೆ 191 (ಡುಸೆನ್ ಅಜೇಯ 74, ಡು ಪ್ಲೆಸಿಸ್ ಅಜೇಯ 52, ಬವುಮ 32, ಸ್ಟೋಕ್ಸ್ 26ಕ್ಕೆ 2). ಇಂಗ್ಲೆಂಡ್-17.4 ಓವರ್‌ಗಳಲ್ಲಿ ಒಂದು ವಿಕೆಟಿಗೆ 192 (ಮಾಲನ್ ಅಜೇಯ 99, ಬಟ್ಲರ್ ಅಜೇಯ 67, ನೋರ್ಜೆ 37ಕ್ಕೆ 1).
ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ: ಡೇವಿಡ್ ಮಾಲನ್.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444