ಟೆಸ್ಟ್ ಕ್ರಿಕೆಟಿಗೆ ರಶೀದ್: ಕೋಚ್ ಬೈಲಿಸ್ ವಿಶ್ವಾಸ
Team Udayavani, Jul 21, 2018, 6:00 AM IST
ಲಂಡನ್: ಇಂಗ್ಲೆಂಡಿನ ಲೆಗ್ ಸ್ಪಿನ್ನರ್ ಆದಿಲ್ ರಶೀದ್ ಟೆಸ್ಟ್ ನಿವೃತ್ತಿಯಿಂದ ಹಿಂದೆ ಸರಿದು ಭಾರತದೆದುರಿನ ಸರಣಿಯಲ್ಲಿ ಆಡುವ ಸಾಧ್ಯತೆ ಇದೆ ಎಂಬುದಾಗಿ ಇಂಗ್ಲೆಂಡ್ ತಂಡದ ಕೋಚ್ ಟ್ರೆವರ್ ಬೈಲಿಸ್ ಹೇಳಿದ್ದಾರೆ.
30ರ ಹರೆಯದ ಆದಿಲ್ ರಶೀದ್ 2016ರ ಡಿಸೆಂಬರ್ನಲ್ಲಿ ತಮ್ಮ 10ನೇ ಹಾಗೂ ಕೊನೆಯ ಟೆಸ್ಟ್ ಆಡಿದ್ದರು. ಬಳಿಕ 5 ದಿನಗಳ ಪಂದ್ಯಕ್ಕೆ ಗುಡ್ಬೈ ಹೇಳಿದ್ದರು. ಆದರೆ ಈಗ ಅತ್ಯುತ್ತಮ ಫಾರ್ಮ್ನಲ್ಲಿರುವ ರಶೀದ್, ಸೀಮತ ಓವರ್ಗಳ ಕ್ರಿಕೆಟ್ನಲ್ಲಿ ಭಾರತವನ್ನು, ಅದರಲ್ಲೂ ಇನ್ ಫಾರ್ಮ್ ವಿರಾಟ್ ಕೊಹ್ಲಿ ಅವರನ್ನು ಕಾಡಿದ್ದರು. ಭಾರತದ ಕಪ್ತಾನನಿಗೆ ಟೆಸ್ಟ್ನಲ್ಲೂ ಬಲೆ ಬೀಸಲು ನಿವೃತ್ತಿಯಿಂದ ಹಿಂದೆ ಸರಿಯುವಂತೆ ಇಸಿಬಿ ವರಿಷ್ಠರು ರಶೀದ್ ಮನ ಒಲಿಸಲು ಮುಂದಾಗಿದ್ದಾರೆಂಬುದು ನಿನ್ನೆ ಸುದ್ದಿಯಾಗಿತ್ತು.
ಈ ಕುರಿತು ಆಂಗ್ಲ ಮಾಧ್ಯಮಗಳು ಟ್ರೆವರ್ ಬೈಲಿಸ್ ಅವರನ್ನು ಪ್ರಶ್ನಿಸಿದಾಗ ಅವರಿಂದ ಸಕಾರಾತ್ಮಕ ಉತ್ತರ ಲಭಿಸಿದೆ. “ಬಹುಶಃ ರಶೀದ್ ಟೆಸ್ಟ್ ಕ್ರಿಕೆಟಿಗೆ ವಾಪಸಾಗಲಿದ್ದಾರೆ. ಕಳೆದ ಕೆಲವು ವರ್ಷಗಳಿಂದ ರಶೀದ್ ಏಕದಿನದಲ್ಲಿ ಅತ್ಯುತ್ತಮ ನಿರ್ವಹಣೆ ತೋರುತ್ತ ಬಂದಿದ್ದಾರೆ. ಅವರ ಬೌಲಿಂಗ್ ಈಗ ಹೆಚ್ಚು ಪರಿಣಾಮಕಾರಿಯಾಗಿದೆ’ ಎಂದು ಬೈಲಿಸ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’
Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್ ಹೆಗ್ಡೆ
Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ
Subramanya ಏನೆಕಲ್ಲು: ಕಾರಿಗೆ ಗೂಡ್ಸ್ ಆಟೋ ಢಿಕ್ಕಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ