ಭಾರತ ಪ್ರವಾಸಕ್ಕೆ ಆರ್ಚರ್, ಸ್ಟೋಕ್ಸ್ ವಾಪಸ್
Team Udayavani, Jan 23, 2021, 7:00 AM IST
ಲಂಡನ್: ಶ್ರೀಲಂಕಾ ಪ್ರವಾಸ ಮುಗಿಸಿ ಭಾರತಕ್ಕೆ ಟೆಸ್ಟ್ ಸರಣಿ ಆಡಲು ಆಗಮಿಸಲಿರುವ ಇಂಗ್ಲೆಂಡ್ ಮೊದಲೆರಡು ಪಂದ್ಯಗಳಿಗೆ ತಂಡವನ್ನು ಪ್ರಕಟಿಸಿದೆ. ವೇಗಿ ಜೋಫ್ರ ಆರ್ಚರ್, ಆಲ್‌ರೌಂಡರ್ ಬೆನ್ ಸ್ಟೋಕ್ಸ್, ಅಗ್ರ ಕ್ರಮಾಂಕದ ಬ್ಯಾಟ್ಸ್ ಮನ್ ರೋರಿ ಬರ್ನ್ಸ್ ಮರಳಿದ್ದು, ತಂಡದ ಸಾಮರ್ಥ್ಯ ಹೆಚ್ಚಿದೆ.
ಸ್ಟೋಕ್ಸ್ ಮತ್ತು ಆರ್ಚರ್ ಅವರಿಗೆ ಲಂಕಾ ಸರಣಿಯಿಂದ ವಿಶ್ರಾಂತಿ ನೀಡಲಾಗಿತ್ತು. ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಬರ್ನ್ಸ್ ಲಂಕಾ ಪ್ರವಾಸದಿಂದ ದೂರ ಉಳಿದಿದ್ದರು.
ಪ್ರಸ್ತುತ ಶ್ರೀಲಂಕಾ ಪ್ರವಾಸದಲ್ಲಿರುವ ಜಾನಿ ಬೇರ್‌ಸ್ಟೊ, ಸ್ಯಾಮ್ ಕರನ್ ಮತ್ತು ಮಾರ್ಕ್ ವುಡ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಹಾಗೆಯೇ ತಂಡದಲ್ಲಿ ಯಾವುದೇ ಗಾಯದ ಸಮಸ್ಯೆ ಕಾಣಿಸಿಕೊಳ್ಳದಿದ್ದಲ್ಲಿ ಕ್ರೆಗ್ ಓವರ್ಟನ್ ತವರಿಗೆ ಮರಳಲಿದ್ದಾರೆ. 16 ಸದಸ್ಯರ ತಂಡದ ಜತೆಗೆ 6 ಮಂದಿ ಮೀಸಲು ಆಟಗಾರರನ್ನೂ ಇಂಗ್ಲೆಂಡ್ ಹೆಸರಿಸಿದೆ.
ಇಂಗ್ಲೆಂಡ್ ಟೆಸ್ಟ್ ತಂಡ:
ಜೋ ರೂಟ್ (ನಾಯಕ), ಜೋಫ್ರ ಆರ್ಚರ್, ಮೊಯಿನ್ ಅಲಿ, ಜೇಮ್ಸ್ ಆ್ಯಂಡರ್ಸನ್, ಡಾಮ್ ಬೆಸ್, ಸ್ಟುವರ್ಟ್ ಬ್ರಾಡ್, ರೋರಿ ಬರ್ನ್ಸ್, ಜಾಸ್ ಬಟ್ಲರ್, ಜಾಕ್ ಕ್ರಾಲಿ, ಬೆನ್ ಫೋಕ್ಸ್, ಡ್ಯಾನ್ ಲಾರೆನ್ಸ್, ಜಾಕ್ ಲೀಚ್, ಡಾಮ್ ಸಿಬ್ಲಿ, ಬೆನ್ ಸ್ಟೋಕ್ಸ್, ಓಲೀ ಸ್ಟೋನ್, ಕ್ರಿಸ್ ವೋಕ್ಸ್.
ಮೀಸಲು ಆಟಗಾರರು: ಜೇಮ್ಸ್ ಬ್ರೇಸಿ, ಮಾಸನ್ ಕ್ರೇನ್, ಶಕೀಬ್ ಮಹಮೂದ್, ಮ್ಯಾಥ್ಯೂ ಪಾರ್ಕಿನ್ಸನ್, ಓಲೀ ರಾಬಿನ್ಸನ್, ಅಮರ್ ವಿರ್ದಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಈ ದಿನ, ಆ ವರ್ಷ : ಸ‘ಚಿನ್ನ’ ಡಬಲ್ ಸೆಂಚೂರಿ..!
ಪಿಂಕ್ ಬಾಲ್ ನಲ್ಲಿ ಅಕ್ಷರ್ – ಅಶ್ವಿನ್ ಮ್ಯಾಜಿಕ್ : ಅಲ್ಪ ಮೊತ್ತಕ್ಕೆ ಕುಸಿದ ಆಂಗ್ಲರು
ಮೊಟೆರಾದ ಸರ್ದಾರ್ ಪಟೇಲ್ ಸ್ಟೇಡಿಯಂ ಇನ್ನು ನರೇಂದ್ರ ಮೋದಿ ಸ್ಟೇಡಿಯಂ
ಮೊಟೆರಾದಲ್ಲಿ ಪಿಂಕ್ ಬಾಲ್ ಟೆಸ್ಟ್: ಟಾಸ್ ಗೆದ್ದ ರೂಟ್, ಟೀಂ ಇಂಡಿಯಾದಲ್ಲಿ ಎರಡು ಬದಲಾವಣೆ
ಹಲವು ದಾಖಲೆಗಳ ಸರದಾರ ಮೊಟೆರಾದ ಸರ್ದಾರ್ ಪಟೇಲ್ ಕ್ರೀಡಾಂಗಣ
MUST WATCH
ಮಂಗಳೂರು: 22 ಎಟಿಎಂ ಸ್ಕಿಮ್ಮಿಂಗ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಂತಾರಾಜ್ಯ ಚೋರರ ಬಂಧನ
ರಾಷ್ಟ್ರಮಟ್ಟದ ಜಾದೂ ದಿನಾಚರಣೆ: ಮಂಗಳೂರಿನಲ್ಲಿ ಮನಸೂರೆಗೊಂಡ ಕುದ್ರೋಳಿ ಗಣೇಶ್ ಮ್ಯಾಜಿಕ್ ಶೋ
ದಾನದ ಪರಿಕಲ್ಪನೆಯ ಕುರಿತು ಡಾ.ಗುರುರಾಜ ಕರ್ಜಗಿ ಹೇಳಿದ ಕತೆ ಕೇಳಿ.. Part-1
ಎಟಿಎಂ ನಲ್ಲಿ ಸಹಾಯದ ನೆಪವೊಡ್ಡಿ 70 ಸಾವಿರ ರೂ. ಲಪಟಾಯಿಸಿದ ವಂಚಕ ! | Udayavani
ದೇಹದ ತೂಕಕ್ಕೂ, ಮೊಣಕಾಲ ಆರೋಗ್ಯಕ್ಕೂ ಸಂಬಂಧ ಇದೆಯೇ?
ಹೊಸ ಸೇರ್ಪಡೆ
ಇನ್ನು ಮಂದೆ ಖಾಸಗಿ ಬ್ಯಾಂಕುಗಳಿಗೂ “ಸರ್ಕಾರಿ ವಹಿವಾಟು’ ಅವಕಾಶ
ಭಾರತ, ಚೀನಾಕ್ಕೆ ಅನುಕೂಲ ವಾತಾವರಣ : ಭೂಸೇನಾ ಮುಖ್ಯಸ್ಥ ನರವಣೆ ಅಭಿಮತ
ಕಾಶ್ಮೀರ ಸಮಸ್ಯೆ ನಿವಾರಣೆಗೆ ಭಾರತ ಸ್ಪಂದಿಸುತ್ತಿಲ್ಲ: ಇಮ್ರಾನ್ ಆರೋಪ
ಶಾಶ್ವತ ಆಯೋಗ ತೀರ್ಪಿನಲ್ಲಿ ಯಾವುದೇ ಮಾರ್ಪಾಟಿಲ್ಲ: ಸುಪ್ರೀಂ ಕೋರ್ಟ್ ಸ್ಪಷ್ಟನೆ
80 ಕೋಟಿ ರೂ. ಕರೆಂಟ್ ಬಿಲ್ ನೋಡಿ ಆಸ್ಪತ್ರೆ ಸೇರಿದ ವೃದ್ದ : ನಡೆದಿದ್ದು ಎಲ್ಲಿ ಗೊತ್ತಾ ?