ಮಾರ್ಗನ್‌ ಸೆಂಚುರಿ; ಇಂಗ್ಲೆಂಡ್‌ ಜಯಭೇರಿ

Team Udayavani, May 26, 2017, 10:45 AM IST

AP5_24_EN.jpg

ಇಂಗ್ಲೆಂಡ್‌-ದಕ್ಷಿಣ ಆಫ್ರಿಕಾ ಏಕದಿನ ಸರಣಿ
ಲೀಡ್ಸ್‌:
ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಪಂದ್ಯಾವಳಿಗೆ ಪೂರ್ವಭಾವಿಯಾಗಿ ನಡೆಯುತ್ತಿರುವ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಮುಖಾ ಮುಖೀಯಲ್ಲಿ ಆತಿಥೇಯ ಇಂಗ್ಲೆಂಡ್‌ 72 ರನ್ನುಗಳ ಅಂತರದಿಂದ ದಕ್ಷಿಣ ಆಫ್ರಿಕಾವನ್ನು ಮಣಿಸಿದೆ.

ಹೇಡಿಂಗ್ಲೆ ಅಂಗಳದಲ್ಲಿ ಟಾಸ್‌ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಇಂಗ್ಲೆಂಡ್‌, ನಾಯಕ ಎವೋನ್‌ ಮಾರ್ಗನ್‌ ಅವರ ಆಕ್ರಮಣಕಾರಿ ಶತಕದ ನೆರವಿನಿಂದ 6 ವಿಕೆಟಿಗೆ 339 ರನ್‌ ಪೇರಿಸಿದರೆ, ದಕ್ಷಿಣ ಆಫ್ರಿಕಾ 45 ಓವರ್‌ಗಳಲ್ಲಿ 267 ರನ್ನುಗಳಿಗೆ ಆಲೌಟ್‌ ಆಯಿತು. 

ಇಂಗ್ಲೆಂಡಿನ ಆರಂಭ ಅಷ್ಟೇನೂ ಬಿರುಸಿನಿಂದ ಕೂಡಿರಲಿಲ್ಲ. ಆದರೆ 35ನೇ ಓವರ್‌ ಬಳಿಕ ಒಮ್ಮೆಲೇ ರನ್‌ ಪ್ರವಾಹ ಹರಿದು ಬರತೊಡಗಿತು. ಮಾರ್ಗನ್‌ ಆಕ್ರಮಣಕಾರಿ ಬ್ಯಾಟಿಂಗ್‌ ಮೂಲಕ ಹರಿಣಗಳ ದಾಳಿಯನ್ನು ಪುಡಿಗುಟ್ಟತೊಡಗಿದರು. ಇವರಿಗೆ ಮೊಯಿನ್‌ ಅಲಿ ಅವರಿಂದ ಪ್ರಚಂಡ ಬೆಂಬಲ ಸಿಕ್ಕಿತು. 13.3 ಓವರ್‌ಗಳಿಂದ 6ನೇ ವಿಕೆಟಿಗೆ 117 ರನ್‌ ಹರಿದು ಬಂತು. ಮಾರ್ಗನ್‌ 93 ಎಸೆತಗಳಿಂದ 107 ರನ್‌ ಸಿಡಿಸಿದರು. ಅವರ ಈ 11ನೇ ಏಕದಿನ ಶತಕದಲ್ಲಿ 7 ಬೌಂಡರಿ, 5 ಸಿಕ್ಸರ್‌ ಒಳಗೊಂಡಿತ್ತು. ಅಲಿ 51 ಎಸೆತಗಳಿಂದ ಅಜೇಯ 77 ರನ್‌ ಬಾರಿಸಿ ದರು. 5 ಬೌಂಡರಿ, 5 ಸಿಕ್ಸರ್‌ ಎತ್ತಿ ತವರಿನ ಕ್ರಿಕೆಟ್‌ ಪ್ರಿಯರನ್ನು ಭರಪೂರ ರಂಜಿಸಿದರು.

67 ರನ್‌ ಮಾಡಿದ ಆರಂಭಕಾರ ಅಲೆಕ್ಸ್‌ ಹೇಲ್ಸ್‌ ಇಂಗ್ಲೆಂಡ್‌ ಸರದಿಯ ಮತ್ತೂಬ್ಬ ಪ್ರಮುಖ ಸ್ಕೋರರ್‌. ರೂಟ್‌ 37 ರನ್‌ ಹೊಡೆದರು. 

ದೊಡ್ಡ ಮೊತ್ತವನ್ನು ಬೆನ್ನಟ್ಟಲಿಳಿದ ದಕ್ಷಿಣ ಆಫ್ರಿಕಾ ಡಿ ಕಾಕ್‌ (5) ಅವರನ್ನು ಬೇಗನೇ ಕಳೆದುಕೊಂಡಿತು. ಆಮ್ಲ (73)-ಡು ಪ್ಲೆಸಿಸ್‌ (67) ದ್ವಿತೀಯ ವಿಕೆಟಿಗೆ 112 ರನ್‌ ಪೇರಿಸಿ ಹೋರಾಟವನ್ನು ಜಾರಿಯಲ್ಲಿರಿಸಿದರು. ಆದರೆ ಇವರಿಬ್ಬರು ನಾಲ್ಕೇ ರನ್‌ ಅಂತರದಲ್ಲಿ ಪೆವಿಲಿಯನ್‌ ಸೇರಿಕೊಂಡ ಬಳಿಕ ಇಂಗ್ಲೆಂಡ್‌ ಬೌಲರ್‌ಗಳಿಗೆ ಬಲ ಬಂತು. ಅನಂತರ ಸ್ವಲ್ಪ ಮಟ್ಟಿನ ಬ್ಯಾಟಿಂಗ್‌ ಹೋರಾಟ ಸಂಘಟಿಸಿದ್ದು ನಾಯಕ ಎಬಿ ಡಿ ವಿಲಿಯರ್ (45) ಮಾತ್ರ.

ಇಂಗ್ಲೆಂಡ್‌ ಪರ ವೋಕ್ಸ್‌ 4, ರಶೀದ್‌ ಮತ್ತು ಅಲಿ ತಲಾ 2 ವಿಕೆಟ್‌ ಹಾರಿಸಿದರು. ಬಿರುಸಿನ ಬ್ಯಾಟಿಂಗ್‌ ಜತೆಗೆ 2 ಪ್ರಮುಖ ವಿಕೆಟ್‌ ಕಿತ್ತ ಮೊಯಿನ್‌ ಅಲಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌-6 ವಿಕೆಟಿಗೆ 339 (ಮಾರ್ಗನ್‌ 107, ಅಲಿ ಅಜೇಯ 77, ಹೇಲ್ಸ್‌ 61, ಫೆಲುಕ್ವಾಯೊ 59ಕ್ಕೆ 2, ಮಾರಿಸ್‌ 61ಕ್ಕೆ 2). ದಕ್ಷಿಣ ಆಫ್ರಿಕಾ-45 ಓವರ್‌ಗಳಲ್ಲಿ 267 (ಆಮ್ಲ 73, ಡು ಪ್ಲೆಸಿಸ್‌ 67, ಡಿ ವಿಲಿಯರ್ 45, ವೋಕ್ಸ್‌ 38ಕ್ಕೆ 4, ಅಲಿ 50ಕ್ಕೆ 2, ರಶೀದ್‌ 69ಕ್ಕೆ 2). ಪಂದ್ಯಶ್ರೇಷ್ಠ: ಮೊಯಿನ್‌ ಅಲಿ.

ಸರಣಿಯ ದ್ವಿತೀಯ ಪಂದ್ಯ ಮೇ 27ರಂದು ಸೌತಾಂಪ್ಟನ್‌ನಲ್ಲಿ ನಡೆಯಲಿದೆ.

ಟಾಪ್ ನ್ಯೂಸ್

ಇಂದು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಕಾಸರಗೋಡಿಗೆ

ಇಂದು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಕಾಸರಗೋಡಿಗೆ

Election Campaign 25 ವರ್ಷಗಳ ಹಿಂದೆ; ಆಗ ದುಡ್ಡಿನ ಆಸೆ ಇರಲಿಲ್ಲ…! 

Election Campaign 25 ವರ್ಷಗಳ ಹಿಂದೆ; ಆಗ ದುಡ್ಡಿನ ಆಸೆ ಇರಲಿಲ್ಲ…! 

Madikeri; ಅಯ್ಯಂಗೇರಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳ ಸೆರೆ

Madikeri; ಅಯ್ಯಂಗೇರಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳ ಸೆರೆ

Udupi; ಚೆಕ್‌ ಅಮಾನ್ಯ ಪ್ರಕರಣ: ಆರೋಪಿಗೆ ಶಿಕ್ಷೆ

Udupi; ಚೆಕ್‌ ಅಮಾನ್ಯ ಪ್ರಕರಣ: ಆರೋಪಿಗೆ ಶಿಕ್ಷೆ

Belthangady ಶಾಲಾ ಬಸ್‌ ಚಾಲಕ ಹೃದಯಾಘಾತದಿಂದ ಸಾವು

Belthangady ಶಾಲಾ ಬಸ್‌ ಚಾಲಕ ಹೃದಯಾಘಾತದಿಂದ ಸಾವು

Mangaluru ವೈದ್ಯಕೀಯ ಪದವೀಧರೆ ಪಿಜಿಯಲ್ಲಿ ಸಾವು

Mangaluru ವೈದ್ಯಕೀಯ ಪದವೀಧರೆ ಪಿಜಿಯಲ್ಲಿ ಸಾವು

Eshwarappa ವಿರುದ್ಧ ಕ್ರಮದ ಬಗ್ಗೆ ಪಕ್ಷದಿಂದಲೇ ನಿರ್ಧಾರ: ಯಡಿಯೂರಪ್ಪ

Eshwarappa ವಿರುದ್ಧ ಕ್ರಮದ ಬಗ್ಗೆ ಪಕ್ಷದಿಂದಲೇ ನಿರ್ಧಾರ: ಯಡಿಯೂರಪ್ಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

‘Please sell the RCB team to someone else’; Tennis star appeal

IPL 2024; ‘ದಯವಿಟ್ಟು ಆರ್ ಸಿಬಿ ತಂಡವನ್ನು ಬೇರೆಯವರಿಗೆ ಮಾರಿ ಬಿಡಿ’; ಟೆನ್ನಿಸ್ ತಾರೆ ಮನವಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಇಂದು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಕಾಸರಗೋಡಿಗೆ

ಇಂದು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಕಾಸರಗೋಡಿಗೆ

Election Campaign 25 ವರ್ಷಗಳ ಹಿಂದೆ; ಆಗ ದುಡ್ಡಿನ ಆಸೆ ಇರಲಿಲ್ಲ…! 

Election Campaign 25 ವರ್ಷಗಳ ಹಿಂದೆ; ಆಗ ದುಡ್ಡಿನ ಆಸೆ ಇರಲಿಲ್ಲ…! 

ವಿಟ್ಲ:ಅಡ್ಯನಡ್ಕ ಸಮೀಪ ಗುಡ್ಡಕ್ಕೆ ಬೆಂಕಿ

ವಿಟ್ಲ:ಅಡ್ಯನಡ್ಕ ಸಮೀಪ ಗುಡ್ಡಕ್ಕೆ ಬೆಂಕಿ

Madikeri; ಅಯ್ಯಂಗೇರಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳ ಸೆರೆ

Madikeri; ಅಯ್ಯಂಗೇರಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳ ಸೆರೆ

Udupi; ಚೆಕ್‌ ಅಮಾನ್ಯ ಪ್ರಕರಣ: ಆರೋಪಿಗೆ ಶಿಕ್ಷೆ

Udupi; ಚೆಕ್‌ ಅಮಾನ್ಯ ಪ್ರಕರಣ: ಆರೋಪಿಗೆ ಶಿಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.