ಬುಮ್ರಾ ತರ ಬೌಲಿಂಗ್‌ ಮಾಡ್ತೀನಿ ಎಂದ ಅಭಿಮಾನಿಗೆ ಐಸಿಸಿ ಅಣಕ

Team Udayavani, Jan 20, 2020, 11:15 AM IST

ಬೆಂಗಳೂರು: ರವಿವಾರ ಚಿನ್ನಸ್ವಾಮಿ ಅಂಗಳದಲ್ಲಿ ನಡೆದ ಆಸೀಸ್ ವಿರುದ್ಧದ ಪಂದ್ಯದ ವೇಳೆ ತಮಾಷೆಯ ಘಟನೆಯೊಂದು ನಡೆದಿದೆ. ಪ್ರೇಕ್ಷಕರೊಬ್ಬರು ತಾನು ಬುಮ್ರಾ ರೀತಿ ಬೌಲಿಂಗ್‌ ಮಾಡಬಲ್ಲೆ ಎಂಬ ಭಿತ್ತಿಚಿತ್ರ ಹಿಡಿದುಕೊಂಡಿದ್ದರು. ಅದನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿಯ ಟ್ವೀಟರ್‌ ಖಾತೆಯಲ್ಲಿ ಹಾಸ್ಯ ಮಾಡಲಾಗಿದೆ.

ಅಭಿಮಾನಿಯ ಫೋಟೊವನ್ನು ಪೋಸ್ಟ್ ಮಾಡಿದ ಐಸಿಸಿ, ಸುಮ್ಮನೆ ಹೇಳಿದರಾಗದು, ಅದಕ್ಕೆ ಸಾಕ್ಷ್ಯ ತೋರಿಸಿ ಎಂದು ಕೇಳಿದೆ. ಅದಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿದೆ.

ಅಭಿಮಾನಿಯೊಬ್ಬರು, ಮೊದಲು ನಮ್ಮ ಹೊಟ್ಟೆ, ಆಮೇಲೆ ಬುಮ್ರಾ ಹೊಟ್ಟೆಯನ್ನೊಮ್ಮೆ ನೋಡಿ ಕೊಳ್ಳೋಣ ಎಂದು ಅಣಕಿಸಿದ್ದಾರೆ.ಇನ್ನೊಬ್ಬರು ನಾನು ಟಾಮ್‌ ಕ್ರೂಸ್‌ ರೀತಿ ಅಭಿನಯಿಸಬಲ್ಲೆ ಎಂದಿದ್ದಾರೆ.

ಆಸೀಸ್ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ಭರ್ಜರಿಯಾಗಿ ಜಯಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಸರಣಿಯನ್ನು ಭಾರತ 2-1 ಅಂತರದಿಂದ ಜಯಿಸಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ