ಫೆಡರರ್-ಜೊಕೋವಿಕ್ ಫೈನಲ್ ಕಾದಾಟ
Team Udayavani, Jul 14, 2019, 5:37 AM IST
ಲಂಡನ್: ವಿಂಬಲ್ಡನ್ ಪುರುಷರ ವಿಭಾಗದ ಸಿಂಗಲ್ಸ್ ಫೈನಲ್ ಪಂದ್ಯ ರವಿವಾರ ನಡೆಯಲಿದೆ. ಪ್ರಶಸ್ತಿಗಾಗಿ ಮೂರನೇ ಶ್ರೇಯಾಂಕದ ಸ್ವಿಟ್ಜರ್ಲೆಂಡ್ನ ರೋಜರ್ ಫೆಡರರ್ ಹಾಗೂ ಹಾಲಿ ಚಾಂಪಿಯನ್ ಮತ್ತು ವಿಶ್ವದ ನಂಬರ್ ವನ್ ಖ್ಯಾತಿಯ ಸರ್ಬಿಯಾದ ಜೊಕೋವಿಕ್ ನಡುವೆ ಜಿದ್ದಾಜಿದ್ದಿನ ಹಣಾಹಣಿ ನಡೆಯಲಿದೆ.
ಜೊಕೋವಿಕ್ ಪ್ರಾಬಲ್ಯ
ಫೆಡರರ್ ಹಾಗೂ ಜೊಕೊವಿಕ್ ಇದುವರೆಗೆ ಒಟ್ಟು 47 ಸಲ ಪ್ರಮುಖ ಕೂಟಗಳಲ್ಲಿ ಮುಖಾಮುಖೀಯಾಗಿ ದ್ದಾರೆ. ಇದರಲ್ಲಿ ಜೊಕೊವಿಚ್ 25 ಪಂದ್ಯದಲ್ಲಿ ಗೆಲುವು ಗಳಿಸಿದ್ದರೆ ಫೆಡರರ್ 22 ಪಂದ್ಯದಲ್ಲಿ ಜಯ ಸಾಧಿಸಿದ್ದಾರೆ. ಕಳೆದ 20 ಮುಖಾ ಮುಖೀಯಲ್ಲಿ ಜೊಕೋವಿಕ್ 14ರಲ್ಲಿ ಜಯಭೇರಿ ಬಾರಿಸಿದ್ದಾರೆ. ಜೊಕೊ ಒಟ್ಟಾರೆ 4 ಸಲ ವಿಂಬಲ್ಡನ್ ಸಿಂಗಲ್ಸ್ ಚಾಂಪಿಯನ್ ಆಗಿದ್ದಾರೆ¬. ಒಟ್ಟಾಯಾಗಿ ಇದುವರೆಗೆ 15 ಸಿಂಗಲ್ಸ್ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆದ್ದಿದ್ದಾರೆ.
ಫೆಡರರ್ ಶನಿವಾರ ನಡೆದ ಸೆಮಿ ಫೈನಲ್ನಲ್ಲಿ ಸ್ಪೇನ್ನ ನಡಾಲ್ ಅವರನ್ನು 7-6 (7-3), 1-6, 6-3, 6-4 ಸೆಟ್ಗಳಿಂದ ಉರುಳಿಸಿದ್ದರೆ ಜೊಕೋವಿಕ್ ಕೂಡ ಸ್ಪೇನ್ನ ಬಾಟಿಸ್ಟ ಆಗುಟ್ ಅವರನ್ನು 6-2, 4-6, 6-3, 6-2 ಸೆಟ್ಗಳಿಂದ ಮಣಿಸಿದ್ದರು.
ಫೆಡರರ್ಗೆ ಅನುಭವದ ಬಲ
8 ಸಲ ವಿಂಬಲ್ಡನ್ ಸಿಂಗಲ್ಸ್ ಚಾಂಪಿಯನ್ ಆಗಿರುವ ಫೆಡರರ್ ತಮ್ಮೆಲ್ಲ ಅನುಭವವನ್ನು ಪಣಕ್ಕಿಟ್ಟು ಪಂದ್ಯ ಗೆಲ್ಲಲು ನಿರ್ಧರಿಸಿದ್ದಾರೆ. ಒಟ್ಟಾರೆ 21ನೇ ಸಿಂಗಲ್ಸ್ ಗ್ರ್ಯಾನ್ ಸ್ಲಾಮ್ಗೆ ಪ್ರಶಸ್ತಿ ಮೇಲೆ ಫೆಡರರ್ ಕಣ್ಣಿಟ್ಟಿದ್ದಾರೆ. ಗೆದ್ದರೆ ಪ್ರಶಸ್ತಿ ಗೆದ್ದ ಅತೀ ಹಿರಿಯ ಗ್ರ್ಯಾನ್ ಸ್ಲಾಮ್ ವಿಜೇತರೆಂಬ ಖ್ಯಾತಿ ಪಡೆಯಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ
MUST WATCH
ಹೊಸ ಸೇರ್ಪಡೆ
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್
CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ
Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು
Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್
ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ