ಫಿಫಾ ರ್‍ಯಾಂಕಿಂಗ್‌: 101ನೇ ಸ್ಥಾನ ಕಾಯ್ದುಕೊಂಡ ಭಾರತ

Team Udayavani, Jun 16, 2019, 6:09 AM IST

ಹೊಸದಿಲ್ಲಿ: ಭಾರತೀಯ ಫ‌ುಟ್‌ಬಾಲ್‌ ತಂಡ ನೂತನ ಫಿಫಾ ರ್‍ಯಾಂಕಿಂಗ್‌ನಲ್ಲಿ 101ನೇ ಸ್ಥಾನದಲ್ಲಿಯೇ ಉಳಿದುಕೊಂಡಿದೆ.

ಥಾಯ್ಲೆಂಡ್‌ನ‌ಲ್ಲಿ ನಡೆದ ಕಿಂಗ್ಸ್‌ ಕಪ್‌ನಲ್ಲಿ ಆತಿಥೇಯ ತಂಡವನ್ನು 1-0 ಗೋಲಿನಿಂದ ಸೋಲಿಸಿದ ಭಾರತ ತಂಡ 3ನೇ ಸ್ಥಾನ ಪಡೆದಿತ್ತು. ಈ ಮೊದಲು ನಡೆದ ಪಂದ್ಯದಲ್ಲಿ ಭಾರತ ಸೋತಿತ್ತು. ಆದರೆ ಈ ಫ‌ಲಿತಾಂಶದಿಂದ ಭಾರತದ ರ್‍ಯಾಂಕಿಂಗ್‌ನಲ್ಲಿ ಯಾವುದೇ ರಿ ಬದಲಾವಣೆ ಆಗಿಲ್ಲ.ಏಶ್ಯನ್‌ ದೇಶಗಳ ಪೈಕಿ ಭಾರತ 18ನೇ ಸ್ಥಾನದಲ್ಲಿದೆ. ಇರಾನ್‌ (20ನೇ), ಜಪಾನ್‌ (28), ಕೊರಿಯ (37), ಆಸ್ಟ್ರೇಲಿಯ (43), ಕತಾರ್‌ (55) ಏಶ್ಯದ 6 ಅಗ್ರ ರ್‍ಯಾಂಕಿಂಗ್‌ ಹೊಂದಿವೆ.

ಅಗ್ರಸ್ಥಾನದಲ್ಲಿ ಬೆಲ್ಜಿಯಂ
ಯುರೋ 2020ರ ಅರ್ಹತಾ ಕೂಟದಲ್ಲಿ ಕಜಾಕ್‌ಸ್ಥಾನ ಮತ್ತು ಸ್ಕಾಟ್ಲೆಂಡ್‌ ವಿರುದ್ಧ ಗೆಲುವು ಸಾಧಿಸಿದ ಬೆಲ್ಜಿಯಂ ಫಿಫಾ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿದೆ. ವಿಶ್ವ ಚಾಂಪಿಯನ್‌ ಫ್ರಾನ್ಸ್‌ ದ್ವಿತೀಯ ಸ್ಥಾನದಲ್ಲಿದೆ. ಉದ್ಘಾಟನಾ “ನೇಶನ್ಸ್‌ ಲೀಗ್‌’ ಪ್ರಶಸ್ತಿ ಗೆದ್ದಿರುವ ಪೋರ್ಚುಗಲ್‌ ರ್‍ಯಾಂಕಿಂಗ್‌ನಲ್ಲಿ ಎರಡು ಸ್ಥಾನ ಮೇಲಕ್ಕೇರಿ ಐದನೇ ಸ್ಥಾನ ಪಡೆದಿದೆ.

ಫಿಫಾ ರ್‍ಯಾಂಕಿಂಗ್‌
1. ಬೆಲ್ಜಿಯಂ
2. ಫ್ರಾನ್ಸ್‌
3. ಬ್ರಝಿಲ್‌
4. ಇಂಗ್ಲೆಂಡ್‌
5. ಪೋರ್ಚುಗಲ್‌

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ