ಸ್ಪೇನ್ ಫೈನಲಿಗೆ
Team Udayavani, Oct 26, 2017, 10:14 AM IST
ನವಿ ಮುಂಬಯಿ: ಯುರೋಪಿಯನ್ ಚಾಂಪಿಯನ್ ಸ್ಪೇನ್ ತಂಡವು ಮಾಲಿ ತಂಡವನ್ನು 3-1 ಗೋಲುಗಳಿಂದ ಸೋಲಿಸಿ ಫಿಫಾ ಅಂಡರ್ 17 ವಿಶ್ವಕಪ್ ಫುಟ್ಬಾಲ್ ಕೂಟದ ಫೈನಲ್ ಹಂತಕ್ಕೇರಿತು.
ಮೊದಲ ಅವಧಿಯ ಆಟದಲ್ಲಿ ಸ್ಪೇನ್ ಎರಡು ಗೋಲು ಹೊಡೆದು ಮುನ್ನಡೆ ಸಾಧಿಸಿತು. ಎರಡು ಗೋಲನ್ನು ಅಬೆಲ್ ರುಯಿಜ್ ಹೊಡೆದಿದ್ದರು. ಫೆರಾನ್ ಟೊರೆಸ್ ಇನ್ನೊಂದು ಗೋಲು ಹೊಡೆದು ಮುನ್ನಡೆಯನ್ನು 3-0ಕ್ಕೇರಿಸಿದ್ದರು. ಪಂದ್ಯದ 74ನೇ ನಿಮಿಷದಲ್ಲಿ ಮಾಲಿ ತನ್ನ ಏಕೈಕ ಗೋಲನ್ನು ಲಸ್ಸಾನ ನಿಡಿಯೆ ಮೂಲಕ ಹೊಡೆಯಿತು. ಈ ಗೆಲುವಿನ ಮೂಲಕ ಸ್ಪೇನ್ ನಾಲ್ಕನೇ ಬಾರಿ ಫೈನಲಿಗೇರಿದ ಸಾಧನೆ ಮಾಡಿತು. 2007ರ ಬಳಿಕ ಮೊದಲ ಬಾರಿ ಸ್ಪೇನ್ ಫೈನಲಿಗೇರಿದೆ.
ಫೈನಲ್ನಲ್ಲಿ ಸ್ಪೇನ್ ಇಂಗ್ಲೆಂಡ್ ತಂಡದ ಸವಾಲನ್ನು ಎದುರಿಸಲಿದೆ. ಈ ಪಂದ್ಯ ಅ. 28ರಂದು ಕೋಲ್ಕತಾದಲ್ಲಿ ನಡೆಯಲಿದೆ.