
ಕ್ಯಾಮೆರೂನ್-ಸೆರ್ಬಿಯಾ ನಡುವಿನ ಪಂದ್ಯದಲ್ಲಿ 6 ಗೋಲುಗಳು ದಾಖಲು!
ಬಿರುಸಿನ ಕಾದಾಟ ಡ್ರಾದಲ್ಲಿ ಮುಕ್ತಾಯ
Team Udayavani, Nov 28, 2022, 10:57 PM IST

ದೋಹಾ: ಸೋಮವಾರ ಭರ್ಜರಿಯಾಗಿ ಸಾಗಿದ ಕ್ಯಾಮೆರೂನ್-ಸೆರ್ಬಿಯಾ ನಡುವಿನ ವಿಶ್ವಕಪ್ ಫುಟ್‌ಬಾಲ್ ಪಂದ್ಯದಲ್ಲಿ ಗೋಲುಗಳ ಸುರಿಮಳೆಯಾಗಿದೆ. ಆದರೆ ಎರಡೂ ತಂಡಗಳು 3-3 ಗೋಲು ಬಾರಿಸಿದ್ದರಿಂದ ಯಾರಿಗೂ ಗೆಲುವು ಸಾಧಿಸಲಾಗಲಿಲ್ಲ. ಇತ್ತಂಡಗಳಿಗೆ ಅಂಕದ ಖಾತೆ ತೆರೆಯಲು ಈ ಫಲಿತಾಂಶ ನೆರವಾಯಿತು,
ಅಷ್ಟೇ. ಈ ಪಂದ್ಯದಲ್ಲಿ ಯಾವುದಾದರೂ ಒಂದು ತಂಡ ಗೆಲುವು ಸಾಧಿಸಿದ್ದರೆ ಅಂಕಪಟ್ಟಿಯಲ್ಲಿ ಜಿಗಿತ ಸಾಧಿಸುತ್ತಿದ್ದವು. ಆದರೆ ಹಾಗಾಗಲಿಲ್ಲ.
“ಜಿ’ ವಿಭಾಗದ ತಂಡಗಳಾದ ಕ್ಯಾಮೆರೂನ್ ಮತ್ತು ಸೆರ್ಬಿಯ ತಮ್ಮ ಮೊದಲ ಪಂದ್ಯದಲ್ಲಿ ಸೋಲನುಭವಿಸಿದ್ದವು. ಇಲ್ಲಿ ಒಂದೊಂದು ಅಂಕ ಗಳಿಸಿದ್ದರಿಂದ ನಾಕೌಟ್ ರೇಸ್‌ನಲ್ಲಿ ಉಳಿದುಕೊಂಡಿವೆ. ಇದೇ ವಿಭಾಗದ ಬಲಿಷ್ಠ ತಂಡಗಳಾದ ಬ್ರೆಝಿಲ್ ಮತ್ತು ಸ್ವಿಜರ್ಲೆಂಡ್ ಆಡಿದ ಮೊದಲ ಪಂದ್ಯವನ್ನು ಗೆದ್ದು ತಲಾ 3 ಅಂಕ ಸಂಪಾದಿಸಿವೆ. ಈ ಎರಡು ತಂಡಗಳನ್ನು ದಾಟಿ ಕ್ಯಾಮೆರೂನ್, ಸೆರ್ಬಿಯಗಳು ಮುನ್ನಡೆ ಸಾಧಿಸಲು ಸಾಧ್ಯವೇ ಎಂಬುದೊಂದು ಕೌತುಕ.
ತಿರುಗಿ ಬಿದ್ದ ಕ್ಯಾಮೆರೂನ್: ಆಫ್ರಿಕಾದ ಪ್ರಬಲ ತಂಡವೆಂದೇ ಗುರುತಿಸಲ್ಪಡುವ ಕ್ಯಾಮೆರೂನ್ ವಿರಾಮದ ವೇಳೆ 1-2 ಅಂತರದ ಹಿನ್ನಡೆಯಲ್ಲಿತ್ತು. ಆದರೆ 55ನೇ ನಿಮಿಷದಲ್ಲಿ ಬದಲಿ ಆಟಗಾರನಾಗಿ ಕಣಕ್ಕೆ ಇಳಿದ ವಿನ್ಸೆಂಟ್ ಅಬೂಬಕರ್ ಪಂದ್ಯಕ್ಕೆ ತಿರುವು ಒದಗಿಸಲು ಯಶಸ್ವಿಯಾದರು. ಪಂದ್ಯದ 63ನೇ ನಿಮಿಷದಲ್ಲಿ ಕ್ಯಾಮೆರೂನ್ ಪರ 2ನೇ ಗೋಲು ಸಿಡಿಸಿ ಆಟಗಾರರನ್ನು ಹುರಿದುಂಬಿಸಿದರು. ಮೂರೇ ನಿಮಿಷದಲ್ಲಿ ಎರಿಕ್ ಮ್ಯಾಕ್ಸಿಮ್ ಚೌಪೊ ಮೋಟಿಂಗ್ ಇನ್ನೊಂದು ಗೋಲು ಬಾರಿಸಿ ಪಂದ್ಯವನ್ನು ಸಮಬಲಕ್ಕೆ ತಂದು ನಿಲ್ಲಿಸಿದರು. ಇದೇ ಅಂತಿಮ ಫಲಿತಾಂಶವಾಯಿತು.
ಈ ಮುಖಾಮುಖಿಯಲ್ಲಿ ಗೋಲಿನ ಖಾತೆ ತೆರೆದದ್ದೇ ಕ್ಯಾಮೆರೂನ್. 29ನೇ ನಿಮಿಷದಲ್ಲಿ ಜೀನ್ ಚಾರ್ಲ್ಸ್ ಕ್ಯಾಸ್ಟಲೆಟೊ ಈ ಗೋಲು ದಾಖಲಿಸಿದರು. ಆದರೆ ವಿರಾಮದ ಹೊತ್ತಿಗೆ ಸರಿಯಾಗಿ ಸೆರ್ಬಿಯದ ಸ್ಟ್ರಾಹಿಂಜ ಪಾವ್ಲೋವಿಕ್ ಮತ್ತು ಸಗೇìಯಿ ಮಿಲಿನ್ಕೋವಿಕ್ ಸಾವಿಕ್ ಎರಡೇ ನಿಮಿಷಗಳ ಅಂತರದಲ್ಲಿ 2 ಗೋಲು ಬಾರಿಸಿ ಭರ್ಜರಿ ಮುನ್ನಡೆ ತಂದಿತ್ತರು. ವಿರಾಮ ಕಳೆದು ಎಂಟೇ ನಿಮಿಷದಲ್ಲಿ ಸೆರ್ಬಿಯ ಕಡೆಯಿಂದ 3ನೇ ಗೋಲು ದಾಖಲಾಯಿತು. ಕ್ಯಾಮೆರೂನ್‌ಗೆ 53ನೇ ನಿಮಿಷದಲ್ಲಿ ಈ ಆಘಾತ ಕೊಟ್ಟವರು ಅಲೆಕ್ಸಾಂಡ್ರ ಮಿಟ್ರೋವಿಕ್. ಎರಡೂ ತಂಡಗಳು ಸಮಬಲದ ಹೋರಾಟ ನಡೆಸಿವೆ. ಇತ್ತಂಡಗಳಿಗೂ ತಾಲ ಒಂದು ಪಂದ್ಯ ಬಾಕಿಯಿದೆ. ಇಲ್ಲಿನ ಫಲಿತಾಂಶವೇ ನಿರ್ಣಾಯಕವಾಗಬಹುದು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿರಾಟ್, ಸಚಿನ್, ಗಾವಸ್ಕರ್ ರಂತಹ ಆಟಗಾರರನ್ನು ಮತ್ತೆ ತಯಾರಿಸಲು ಸಾಧ್ಯವಿಲ್ಲ: ಕೋಚ್ ಗುರುಚರಣ್ ಸಿಂಗ್

ಇವನಂತಹ ಆಟಗಾರನನ್ನು ನೋಡಿಲ್ಲ..: ಭಾರತೀಯನನ್ನು ಹಾಡಿ ಹೊಗಳಿದ ರಿಕಿ ಪಾಂಟಿಂಗ್

ಐಸಿಸಿ ವನಿತಾ ಟಿ20 ವಿಶ್ವಕಪ್: ಮತ್ತೊಂದು ಎತ್ತರಕ್ಕೆ ತಲುಪಿದ ವನಿತಾ ಕ್ರಿಕೆಟ್

ಆಸ್ಟ್ರೇಲಿಯನ್ ಓಪನ್: ನೊವಾಕ್ ಜೊಕೋವಿಕ್-ಸಿಸಿಪಸ್ ಪ್ರಶಸ್ತಿ ರೇಸ್

ಇಂಡೋನೇಷ್ಯಾ ಮಾಸ್ಟರ್: ಲಕ್ಷ್ಯ ಸೇನ್ ಪರಾಭವ
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan

ಯಾರು ಬೇಕಾದರೂ ಸುಲಭವಾಗಿ ನಂದಿ ಬಟ್ಟಲು ಹೂವಿನಿಂದ ಸುಂದರ ಹಾರ ತಯಾಸಬಹುದು
ಹೊಸ ಸೇರ್ಪಡೆ

ಕ್ಯಾಮೇನಹಳ್ಳಿ ಶ್ರೀಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವಕ್ಕೆ 25 ಸಾವಿರಕ್ಕೂ ಅಧಿಕ ಭಕ್ತರ ದಂಡು

ಸಮಾಜದಲ್ಲಿ ತುಳಿತಕ್ಕೆ ಒಳಗಾದ ಪ್ರತಿ ವರ್ಗದ ಅಭಿವೃದ್ಧಿಗೆ ಬದ್ಧ: ಮೋದಿ

ಬಸ್ ಚಾಲಕನ ವೇಗಕ್ಕೆ ಕಳಚಿ ಹೋದ ಚಕ್ರ: ಅಪಾಯದಿಂದ ಪಾರಾದ ಪ್ರಯಾಣಿಕರು

ಕುಂದಾಪುರ: ತಾಯಿ ಜೊತೆ ಆಸ್ಪತ್ರೆಗೆ ಬಂದಿದ್ದ ವ್ಯಕ್ತಿ ನದಿಗೆ ಹಾರಿ ಆತ್ಮಹತ್ಯೆ

ಅಂಬೇಡ್ಕರ್ ಪ್ರತಿಮೆ ಭಗ್ನ: ಪೊಲೀಸರಿಂದ ವ್ಯಕ್ತಿ ಬಂಧನ