ಸೆಮಿಫೈನಲ್ ತಲುಪಿದ ಭಾರತ

ಎಫ್ಐಎಚ್ ಹಾಕಿ ಸೀರಿಸ್‌ ಫೈನಲ್ಸ್

Team Udayavani, Jun 12, 2019, 6:00 AM IST

ಭುವನೇಶ್ವರ: ಆಕಾಶ್‌ದೀಪ್‌ ಸಿಂಗ್‌ ಅವರ ಹ್ಯಾಟ್ರಿಕ್‌ ಸಾಹಸದಿಂದ ‘ಎಫ್ಐಎಚ್ ಹಾಕಿ ಸೀರಿಸ್‌ ಫೈನಲ್ಸ್’ನಲ್ಲಿ ಪ್ರಚಂಡ ಪ್ರದರ್ಶನ ನೀಡಿದ ಭಾರತ 10-0 ಗೋಲುಗಳ ಅಂತರದಿಂದ ಉಜ್ಬೆಕಿಸ್ಥಾನ ತಂಡವನ್ನು ಸೋಲಿಸಿ ಸೆಮಿಫೈನಲ್ ಹಂತ ಪ್ರವೇಶಿ ಸಿದೆ. ‘ಎ’ ವಿಭಾಗದಲ್ಲಿರುವ ಭಾರತ ಮೂರೂ ಪಂದ್ಯಗಳನ್ನು ಜಯಿಸಿ 9 ಅಂಕಗಳೊಂದಿಗೆ ಗುಂಪಿನ ಅಗ್ರಸ್ಥಾನಿ ಎನಿಸಿದೆ.

ಸೋಮವಾರ ರಾತ್ರಿಯ ಪಂದ್ಯದಲ್ಲಿ ಭಾರತ ಆರಂಭದಿಂದಲೂ ಅಬ್ಬರದ ಆಟಕ್ಕಿಳಿಯಿತು. ಎದುರಾಳಿಯ ಮೇಲೆ ಮನಬಂದಂತೆ ದಾಳಿ ನಡೆಸಿ ಎಲ್ಲ ವಿಭಾಗಗಳಲ್ಲೂ ಮೇಲುಗೈ ಸಾಧಿಸಿತು. ವರುಣ್‌ 4ನೇ ನಿಮಿಷದಲ್ಲಿ ಭಾರತದ ಖಾತೆ ತೆರೆದರು. ಬಳಿಕ ಆಕಾಶ್‌ದೀಪ್‌ 11ನೇ ನಿಮಿಷದಲ್ಲಿ ಗೋಲು ಸಿಡಿಸಿ ಅಂತರವನ್ನು ಹೆಚ್ಚಿಸಿದರು.

15ನೇ ನಿಮಿಷದಲ್ಲಿ ಅಮಿತ್‌, 22ನೇ ನಿಮಿಷದಲ್ಲಿ ವರುಣ್‌, 26ನೇ ನಿಮಿಷದಲ್ಲಿ ಆಕಾಶ್‌ದೀಪ್‌, 27ನೇ ನಿಮಿಷದಲ್ಲಿ ನೀಲಕಂಠ, 30ನೇ ನಿಮಿಷದಲ್ಲಿ ಮನ್‌ದೀಪ್‌, 45ನೇ ನಿಮಿಷದಲ್ಲಿ ಗುರುಸಾಹಿಬ್‌ಜಿತ್‌, 53ನೇ ನಿಮಿಷದಲ್ಲಿ ಆಕಾಶ್‌ದೀಪ್‌ ಹಾಗೂ 60ನೇ ನಿಮಿಷದಲ್ಲಿ ಮನ್‌ದೀಪ್‌ ಗೋಲು ಸಿಡಿಸಿದರು. ಭಾರತ ಮೊದಲ ಪಂದ್ಯದಲ್ಲಿ ರಶ್ಯ ವಿರುದ್ಧ 10-0, ಪೋಲೆಂಡ್‌ ವಿರುದ್ಧ 3-1 ಅಂತರದಿಂದ ಗೆಲುವು ಸಾಧಿಸಿತ್ತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ