ಇಂದಿನಿಂದ ಎಫ್ಐಎಚ್‌ ಪ್ರೊ ಲೀಗ್‌ ಹಾಕಿ ಆರಂಭ

ಮೊದಲ ಸುತ್ತಿನಲ್ಲಿ ಆತಿಥೇಯ ಭಾರತಕ್ಕೆ ನೆದರ್ಲೆಂಡ್‌ ಎದುರಾಳಿ; ಒಲಿಂಪಿಕ್ಸ್‌ ಹಿನ್ನೆಲೆ: ಶಕ್ತಿ ಸಾಮರ್ಥ್ಯ ಪ್ರದರ್ಶನಕ್ಕೆ ಒಳ್ಳೆಯ ಅವಕಾಶ

Team Udayavani, Jan 18, 2020, 5:47 AM IST

ಭುವನೇಶ್ವರ: ಎಫ್ಐಎಚ್‌ ಪ್ರೊ ಲೀಗ್‌ ಹಾಕಿ ಕೂಟಕ್ಕೆ ಶನಿವಾರ ಒಡಿಶಾದ ಭುವನೇಶ್ವರದಲ್ಲಿ ಚಾಲನೆ ಸಿಗಲಿದೆ. ಒಲಿಂಪಿಕ್ಸ್‌ಗೆ ಅಭ್ಯಾಸವಾಗಿ ತಯಾರಿ ನಡೆಸುತ್ತಿರುವ ಆತಿಥೇಯ ಭಾರತಕ್ಕೆ “ಕಳಿಂಗಾ ಕ್ರೀಡಾಂಗಣ’ದಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ವಿಶ್ವದ 3ನೇ ಶ್ರೇಯಾಂಕಿತ ನೆದರ್ಲೆಂಡ್‌ ಸವಾಲು ಎದುರಾಗಲಿದೆ.

ಇದು 2ನೇ ಆವೃತ್ತಿಯ ಎಫ್ಐಎಚ್‌ ಕೂಟ. ಇದು ಜನವರಿಯಿಂದ ಜೂನ್‌ ವರೆಗೆ ಸುದೀರ್ಘ‌ವಾಗಿ ನಡೆಯಲಿರುವುದು ವಿಶೇಷ. ಭಾರತ ಸ್ವದೇಶ ಹಾಗೂ ವಿದೇಶಿ ನೆಲದಲ್ಲಿ ಆಡುವ ಮೂಲಕ ಕೂಟದಲ್ಲಿ ತನ್ನ ಸಾಮರ್ಥ್ಯವನ್ನು ಪಣಕ್ಕಿಡಲಿದೆ.

9 ತಂಡ, ವಿವಿಧ ಕ್ರೀಡಾಂಗಣ
ಭಾರತ, ಆರ್ಜೆಂಟೀನಾ, ಆಸ್ಟ್ರೇಲಿಯ, ಬೆಲ್ಜಿಯಂ, ಜರ್ಮನಿ, ಬ್ರಿಟನ್‌, ನೆದರ್ಲೆಂಡ್‌, ನ್ಯೂಜಿಲ್ಯಾಂಡ್‌ ಹಾಗೂ ಸ್ಪೇನ್‌ ತಂಡಗಳು ಈ ಕೂಟದಲ್ಲಿ ಸೆಣಸಲಿವೆ. ಸುದೀರ್ಘ‌ ಸರಣಿಗೆ ಭಾರತದ ನೆಲದಲ್ಲಿ ಚಾಲನೆ ಸಿಗುತ್ತಿರುವುದು ವಿಶೇಷ. ನೆದರ್ಲೆಂಡ್‌ ವಿರುದ್ಧದ ಪಂದ್ಯದ ಬಳಿಕ ಫೆ. 8 ಮತ್ತು 9 ರಂದು ಭಾರತ ತಂಡ ಬೆಲ್ಜಿಯಂ ವಿರುದ್ಧ ಭುವನೇಶ್ವರದಲ್ಲೇ ಆಡಲಿದೆ. ಫೆ. 21 ಹಾಗೂ 22ರಂದು ಭಾರತೀಯರು ಮತ್ತೆ ತವರಿನಲ್ಲಿ ಪಂದ್ಯದಲ್ಲಿ ಆಸೀಸ್‌ ತಂಡವನ್ನು ಎದುರಿಸಲಿದ್ದಾರೆ.

ಅನಂತರ ಮನ್‌ಪ್ರೀತ್‌ ಸಿಂಗ್‌ ಪಡೆ ವಿದೇಶಕ್ಕೆ ತೆರಳಿ ಅಲ್ಲೂ ಕೆಲವು ಪಂದ್ಯವನ್ನು ಆಡಲಿಕ್ಕಿದೆ. ಎ. 25, 26ರಂದು ಬರ್ಲಿನ್‌ನಲ್ಲಿ ಆತಿಥೇಯ ಜರ್ಮನಿ ತಂಡವನ್ನು ಎದುರಿಸಲಿದೆ. ಬಳಿಕ ಬ್ರಿಟನ್‌ ವಿರುದ್ಧ ಮೇ 2 ಮತ್ತು 3 ರಂದು ಆಡಲಿದೆ. ಈ ಪಂದ್ಯಗಳ ಬಳಿಕ ತವರಿಗೆ ಆಗಮಿಸಲಿರುವ ಭಾರತ ಮೇ 23, 24ರಂದು ನ್ಯೂಜಿಲ್ಯಾಂಡ್‌ ವಿರುದ್ಧ 2 ಪಂದ್ಯಗಳಲ್ಲಿ ಎದುರಿಸಲಿದೆ. ಜೂ. 5 ಮತ್ತು 6ರಂದು ಆರ್ಜೆಂಟೀನಾ ವಿರುದ್ಧ ಅವರದೇ ನೆಲದಲ್ಲಿ ಆಡಲಿದೆ.

ಒಲಿಂಪಿಕ್ಸ್‌ಗೆ ಉತ್ತಮ ತಯಾರಿ
ಭಾರತ ಹಾಕಿ ತಂಡಕ್ಕೆ ಟೋಕಿಯೊ ಒಲಿಂಪಿಕ್ಸ್‌ ಗಾಗಿ ತಯಾರಿ ನಡೆಸಲು ಈ ಕೂಟ ಹೆಚ್ಚಿನ ರೀತಿಯಲ್ಲಿ ನೆರವಾಗಲಿದೆ. ನೆದರ್ಲೆಂಡ್‌, ಆರ್ಜೆಂಟೀನಾ, ಬೆಲ್ಜಿಯಂ, ಜರ್ಮನಿ, ಬ್ರಿಟನ್‌ನಂತಹ ಬಲಿಷ್ಠ ತಂಡಗಳ ವಿರುದ್ಧದ ಸೆಣಸಲಿರುವುದು ಭಾರತೀಯರ ಸಾಮರ್ಥ್ಯ ಪರೀಕ್ಷೆಗೊಂದು ವೇದಿಕೆಯಾಗಿದೆ.

ಮನ್‌ಪ್ರೀತ್‌ ಸಿಂಗ್‌ ನೇತೃತ್ವದ ಆತಿಥೇಯರು ಎದುರಾಳಿಗೆ ಸೆಡ್ಡು ಹೊಡೆ ಯಲು ಸರ್ವ ರೀತಿಯಲ್ಲೂ ಸನ್ನದ್ಧ ರಾಗಿದ್ದಾರೆ. ಮಿಡ್‌ಫಿàಲ್ಡರ್‌ ಚಿಂಗ್ಲೆಸನಾ ಸಿಂಗ್‌ ಹಾಗೂ ಸುಮಿತ್‌ ತಂಡಕ್ಕೆ ವಾಪಸ್‌ ಮರಳಿರುವುದರಿಂದ ತಂಡ ಮತ್ತಷ್ಟು ಬಲಿಷ್ಠಗೊಂಡಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ