ಇಂದಾದರೂ ಸಿಗುತ್ತಾ ಜಯ? ಕೈ ಹಿಡಿಯುತ್ತಾ ಕೇಪ್ ಟೌನ್: ಟೀಂ ಇಂಡಿಯಾದಲ್ಲಿ ನಾಲ್ಕು ಬದಲಾವಣೆ


Team Udayavani, Jan 23, 2022, 1:32 PM IST

Final ODI match between India and South Africa

ಕೇಪ್ ಟೌನ್: ಏಕದಿನ ಸರಣಿಯಲ್ಲಿ ಈಗಾಗಲೇ ಆಡಿರುವ ಎರಡು ಪಂದ್ಯಗಳನ್ನು ಸೋತಿರುವ ಟೀಂ ಇಂಡಿಯಾ ಇಂದಿನ ಅಂತಿಮ ಪಂದ್ಯದಲ್ಲಾದರೂ ಸಮಾಧಾನಕರ ಗೆಲುವು ಪಡೆಯಲು ಸಿದ್ದತೆ ನಡೆಸಿದೆ. ಪಾರ್ಲ್ ಮೈದಾನದಲ್ಲಿ ಕೈಕೊಟ್ಟ ಅದೃಷ್ಟ ಕೇಪ್ ಟೌನ್ ನಲ್ಲಿ ಕೈಹಿಡಿಯುತ್ತಾ ಎಂದು ಕಾದು ನೋಡಬೇಕಾಗಿದೆ.

ಇಲ್ಲಿನ ನ್ಯೂಲ್ಯಾಂಡ್ಸ್ ನಲ್ಲಿ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದ ಕೆ.ಎಲ್ ರಾಹುಲ್  ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿದ್ದಾರೆ.

ಭಾರತ ತಂಡ ಇಂದಿನ ಪಂದ್ಯಕ್ಕೆ ನಾಲ್ಕು ಬದಲಾವಣೆ ಮಾಡಿಕೊಂಡಿದೆ. ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಶಾರ್ದೂಲ್ ಠಾಕೂರ್ ಮತ್ತು ವೆಂಕಟೇಶ್ ಅಯ್ಯರ್ ಬದಲಿಗೆ  ಸೂರ್ಯ ಕುಮಾರ್, ಜಯಂತ್ ಯಾದವ್, ಪ್ರಸಿದ್ ಕೃಷ್ಣ ಮತ್ತು ದೀಪಕ್ ಚಾಹರ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

ಈ ಸರಣಿಯಲ್ಲಿ ಕೆ.ಎಲ್ ರಾಹುಲ್‌ ನಾಯಕತ್ವ ವಹಿಸಿದ ಮೂರೂ ಪಂದ್ಯಗಳಲ್ಲಿ ಭಾರತ ಪರಾಭವಗೊಂಡಿದೆ. ಹೀಗಾಗಿ ಯಶಸ್ಸಿಗಾಗಿ ಇರುವುದು ಒಂದೇ ಅವಕಾಶ. ಇದರಲ್ಲಿ ಗೆದ್ದರೆ ರಾಹುಲ್‌ ಜತೆಗೆ ಭಾರತ ತಂಡದ ಪ್ರತಿಷ್ಠೆಯೂ ಒಂದು ಮಟ್ಟದಲ್ಲಿ ಉಳಿದಂತಾಗುತ್ತದೆ.

ಆದರೆ ದಕ್ಷಿಣ ಆಫ್ರಿಕಾ ಎಂದಿನಂತೆ ನಿಶ್ಚಿಂತೆಯಲ್ಲಿದೆ. ಸೆಂಚುರಿಯನ್‌ ಟೆಸ್ಟ್‌ ಪಂದ್ಯ ಸೋತ ಬಳಿಕ ಎಚ್ಚೆತ್ತುಕೊಂಡು ಹೋರಾಟ ಸಂಘಟಿಸಿದ ಆತಿಥೇಯರ ಆಟ ನಿಜಕ್ಕೂ ನಮ್ಮವರಿಗೊಂದು ಪಾಠವಾಗಬೇಕಿತ್ತು. ಆದರೆ ಹಾಗಾಗಲಿಲ್ಲ.

ತಂಡಗಳು

ಭಾರತ: ಕೆ.ಎಲ್‌. ರಾಹುಲ್‌ (ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ರಿಷಬ್ ಪಂತ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಜಯಂತ್ ಯಾದವ್, ಪ್ರಸಿದ್ಧ್ ಕೃಷ್ಣ, ದೀಪಕ್ ಚಹಾರ್, ಜಸ್ಪ್ರೀತ್ ಬುಮ್ರಾ, ಯುಜ್ವೇಂದ್ರ ಚಹಾಲ್

ದಕ್ಷಿಣ ಆಫ್ರಿಕಾ: ಕ್ವಿಂಟನ್‌ ಡಿ ಕಾಕ್‌, ಜಾನೆಮನ್‌ ಮಲಾನ್‌, ಟೆಂಬ ಬವುಮ (ನಾಯಕ), ಐಡನ್‌ ಮಾರ್ಕ್‌ರಮ್‌, ರಸ್ಸಿ ವಾನ್‌ ಡರ್‌ ಡುಸೆನ್‌, ಡೇವಿಡ್‌ ಮಿಲ್ಲರ್‌, ಆ್ಯಂಡಿಲ್‌ ಫೆಲುಕ್ವಾಯೊ, ಕೇಶವ್‌ ಮಹಾರಾಜ್‌, ಡ್ವೇನ್‌ ಪ್ರಿಟೋರಿಯಸ್‌, ಮಾರ್ಕೊ ಜಾನ್ಸೆನ್‌, ಸಿಸಾಂಡ ಮಗಾಲ.

ಟಾಪ್ ನ್ಯೂಸ್

rain

ಉಡುಪಿ, ಮಂಗಳೂರಿನಲ್ಲಿ ಭಾರಿ ಮಳೆ ಎಚ್ಚರಿಕೆ ; ರೆಡ್ ಅಲರ್ಟ್

thumb 8

‘ವಾಟ್ಸಾಪ್’ ಮೂಲಕ ಪ್ರಕರಣ ಇತ್ಯರ್ಥ ಗೊಳಿಸಿದ ಮದ್ರಾಸ್ ಹೈಕೋರ್ಟ್‌ ನ್ಯಾಯಾಧೀಶ

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ಗೆ ಭದ್ರತೆ ಹೆಚ್ಚಳ: ಪಾಕ್‌ ಸರ್ಕಾರ

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ಗೆ ಭದ್ರತೆ ಹೆಚ್ಚಳ: ಪಾಕ್‌ ಸರ್ಕಾರ

ಸುಳ್ಯ: ಲೈಂಗಿಕ ದೌರ್ಜನ್ಯ;  ಯುವಕನ ಬಂಧನ

ಸುಳ್ಯ: ಲೈಂಗಿಕ ದೌರ್ಜನ್ಯ; ಯುವಕನ ಬಂಧನ

1-asdsad

ನಿರುದ್ಯೋಗದಿಂದ ಆತ್ಮಹತ್ಯೆ; ಆತ್ಮಾವಲೋಕನ ಮಾಡಿಕೊಳ್ಳಬೇಕು: ಡಿ.ಕೆ ಶಿವಕುಮಾರ್

ಹಿಜಾಬ್ ಹಲಾಲ್ ಗೆ ಸರ್ಕಾರದ ಕುಮ್ಮಕ್ಕಿಲ್ಲ : ನಳಿನ್ ಕುಮಾರ್ ಕಟೀಲ್

ಹಿಜಾಬ್, ಹಲಾಲ್ ಗೆ ಸರ್ಕಾರದ ಕುಮ್ಮಕ್ಕಿಲ್ಲ : ನಳಿನ್ ಕುಮಾರ್ ಕಟೀಲ್

ಸೊರಬದಲ್ಲಿ ಸಂಭ್ರಮದಿಂದ ಜರುಗಿದ ಶ್ರೀ ರಂಗನಾಥ ಸ್ವಾಮಿ ಬ್ರಹ್ಮ ರಥೋತ್ಸವ

ಸೊರಬದಲ್ಲಿ ಸಂಭ್ರಮದಿಂದ ಜರುಗಿದ ಶ್ರೀ ರಂಗನಾಥ ಸ್ವಾಮಿ ಬ್ರಹ್ಮ ರಥೋತ್ಸವಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಐಪಿಎಲ್‌ ಟೈ ಮ್ಯಾಚ್‌-07: ಗುಜರಾತ್‌ ಲಯನ್ಸ್‌ ವಿರುದ್ಧ ಮುಂಬೈ ಇಂಡಿಯನ್ಸ್‌ ಮೇಲುಗೈ

ಐಪಿಎಲ್‌ ಟೈ ಮ್ಯಾಚ್‌-07: ಗುಜರಾತ್‌ ಲಯನ್ಸ್‌ ವಿರುದ್ಧ ಮುಂಬೈ ಇಂಡಿಯನ್ಸ್‌ ಮೇಲುಗೈ

Mithali Raj and Jhulan Goswami rested from Women’s T20 Challenge

ಮಹಿಳಾ ಟಿ20 ಚಾಲೆಂಜ್: ಮಿಥಾಲಿ ರಾಜ್-ಜೂಲನ್ ಗೋಸ್ವಾಮಿಗೆ ಇಲ್ಲ ಜಾಗ

ಐಪಿಎಲ್‌ 2022: ಡೆಲ್ಲಿ ಕ್ಯಾಪಿಟಲ್ಸ್‌-ಪಂಜಾಬ್‌ ಕಿಂಗ್ಸ್‌: ಮಸ್ಟ್‌ ವಿನ್‌ ಗೇಮ್‌

ಐಪಿಎಲ್‌ 2022: ಡೆಲ್ಲಿ ಕ್ಯಾಪಿಟಲ್ಸ್‌-ಪಂಜಾಬ್‌ ಕಿಂಗ್ಸ್‌: ಮಸ್ಟ್‌ ವಿನ್‌ ಗೇಮ್‌

ಐಪಿಎಲ್‌ 2022: ರಾಜಸ್ಥಾನ್‌ ರಾಯಲ್ಸ್‌ ಗೆ 24 ರನ್‌ ಗೆಲುವು

ಲಕ್ನೋ ಸೂಪರ್‌ಜೈಂಟ್ಸ್‌ ವಿರುದ್ಧ ರಾಜಸ್ಥಾನ್‌ ರಾಯಲ್ಸ್‌ ಗೆ 24 ರನ್‌ ಗೆಲುವು

ಪ್ರಧಾನಿ ಮೋದಿ ನಿವಾಸಕ್ಕೆ ಆಟಗಾರರಿಗೆ ಆಹ್ವಾನ

ಪ್ರಧಾನಿ ಮೋದಿ ನಿವಾಸಕ್ಕೆ ಆಟಗಾರರಿಗೆ ಆಹ್ವಾನ

MUST WATCH

udayavani youtube

ಫಲಜ್ಯೋತಿಷ್ಯದಲ್ಲಿ ದೀರ್ಘಕಾಲೀನ ಫಲಾದೇಶ ಮಾಡುವುದು ಹೇಗೆ ?

udayavani youtube

ಥಾಮಸ್ ಕಪ್ ಗೆದ್ದು ಇತಿಹಾಸ ನಿರ್ಮಿಸಿದ ಭಾರತದ ಬಾಡ್ಮಿಂಟನ್ ತಾರೆಯರು

udayavani youtube

ಅಮೃತಕಾಲದಲ್ಲಿ ದೇಶ ವಿಶ್ವಗುರು – ನಿರ್ಮಲಾ ಸೀತಾರಾಮನ್‌

udayavani youtube

ದೇಶದಲ್ಲಿ ಭ್ರಷ್ಟಾಚಾರ ಬಿತ್ತಿದ್ದು, ಬೆಳೆಸಿದ್ದು ಕಾಂಗ್ರೆಸ್ ಪಕ್ಷ : ಸಿ.ಟಿ.ರವಿ

udayavani youtube

ಪಿಲಿ ಬತ್ತ್ಂಡ್‌ ಪಿಲಿ… ಬಲಿಪುಲೇ… ಕಾಪುವಿನಲ್ಲಿ ದ್ವೈ ವಾರ್ಷಿಕ ಪಿಲಿಕೋಲ…

ಹೊಸ ಸೇರ್ಪಡೆ

rain

ಉಡುಪಿ, ಮಂಗಳೂರಿನಲ್ಲಿ ಭಾರಿ ಮಳೆ ಎಚ್ಚರಿಕೆ ; ರೆಡ್ ಅಲರ್ಟ್

1-asdadas

ರಾಹುಲ್ ಭಟ್ ಹತ್ಯೆ ಖಂಡಿಸಿ ಮುಂದುವರೆದ ಕಾಶ್ಮೀರಿ ಪಂಡಿತರ ಪ್ರತಿಭಟನೆ

thumb 8

‘ವಾಟ್ಸಾಪ್’ ಮೂಲಕ ಪ್ರಕರಣ ಇತ್ಯರ್ಥ ಗೊಳಿಸಿದ ಮದ್ರಾಸ್ ಹೈಕೋರ್ಟ್‌ ನ್ಯಾಯಾಧೀಶ

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ಗೆ ಭದ್ರತೆ ಹೆಚ್ಚಳ: ಪಾಕ್‌ ಸರ್ಕಾರ

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ಗೆ ಭದ್ರತೆ ಹೆಚ್ಚಳ: ಪಾಕ್‌ ಸರ್ಕಾರ

ಕಾಡಾನೆ ಸಮಸ್ಯೆ ಬಗೆಹರಿಸುವಂತೆ ಪ್ರತಿಭಟನೆ

ಕಾಡಾನೆ ಸಮಸ್ಯೆ ಬಗೆಹರಿಸುವಂತೆ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.