Bangladesh ಎದುರು ಮೊದಲ ಟೆಸ್ಟ್: ಅಭ್ಯಾಸ ಆರಂಭಿಸಿದ ಟೀಮ್ ಇಂಡಿಯಾ
Team Udayavani, Sep 13, 2024, 10:37 PM IST
ಚೆನ್ನೈ: ಪ್ರವಾಸಿ ಬಾಂಗ್ಲಾದೇಶ ಎದುರಿನ ಮೊದಲ ಟೆಸ್ಟ್ ಪಂದ್ಯಕ್ಕಾಗಿ ಭಾರತದ ಕ್ರಿಕೆಟಿಗರು ಶುಕ್ರವಾರ ಚೆನ್ನೈಯಲ್ಲಿ ಮೊದಲ ಸುತ್ತಿನ ಅಭ್ಯಾಸ ನಡೆಸಿದರು. ಈ ಮುಖಾಮುಖಿ ಸೆ. 19ರಂದು ಆರಂಭವಾಗಲಿದೆ.
ನಾಯಕ ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಸೇರಿದಂತೆ, ಬಹುತೇಕ ಎಲ್ಲ ಆಟಗಾರರೂ ಇಲ್ಲಿನ “ಎಂ.ಎ. ಚಿದಂಬರಂ ಸ್ಟೇಡಿಯಂ’ನಲ್ಲಿ ಬೆವರು ಸುರಿಸಿದರು.
ಗಂಭೀರ್ ಮಾರ್ಗದರ್ಶನ
ಇದು ನೂತನ ಕೋಚ್ ಗೌತಮ್ ಗಂಭೀರ್ ಅವರ ಮೊದಲ ತವರು ಪಂದ್ಯವಾಗಿದೆ. ಗಂಭೀರ್ ಸೇರಿದಂತೆ ನೂತನ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್, ಸಹಾಯಕ ಕೋಚ್ ಅಭಿಷೇಕ್ ನಾಯರ್ ಕೂಡ ಅಭ್ಯಾಸದ ವೇಳೆ ಹಾಜರಿದ್ದು ಮಾರ್ಗದರ್ಶನವಿತ್ತರು. ಇದಕ್ಕೆ ಸಂಬಂಧಿಸಿದ ಚಿತ್ರ ಹಾಗೂ ವೀಡಿಯೊಗಳನ್ನು ಬಿಸಿಸಿಐ ಬಿಡುಗಡೆ ಮಾಡಿದೆ.
ವಿರಾಟ್ ಕೊಹ್ಲಿ 45 ನಿಮಿಷಗಳ ಕಾಲ ಬ್ಯಾಟಿಂಗ್ ಅಭ್ಯಾಸ ನಡೆಸಿದರು. ಹಾಗೆಯೇ ಜಸ್‌ಪ್ರೀತ್ ಬುಮ್ರಾ ಪೂರ್ತಿ ಫಿಟ್‌ನೆಸ್‌ನೊಂದಿಗೆ ಬೌಲಿಂಗ್ ನಡೆಸಿ ಗಮನ ಸೆಳೆದರು.
ನಾಯಕ ರೋಹಿತ್ ಶರ್ಮ ಗುರುವಾರ ರಾತ್ರಿ ಚೆನ್ನೈಗೆ ಆಗಮಿಸಿದರೆ, ಕೊಹ್ಲಿ ನೇರವಾಗಿ ಲಂಡನ್‌ನಿಂದ ಬಂದರು. ಕೆ.ಎಲ್. ರಾಹುಲ್, ರಿಷಭ್ ಪಂತ್ ಕೂಡ ಗುರುವಾರ ಚೆನ್ನೈ ತಲುಪಿದರು. ಸರ್ಫರಾಜ್ ಖಾನ್ ಅನಂತಪುರದಲ್ಲಿ ದುಲೀಪ್ ಟ್ರೋಫಿ ಪಂದ್ಯ ಆಡುತ್ತಿರುವ ಕಾರಣ, ಇದು ಮುಗಿದ ಬಳಿಕ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಬಾಂಗ್ಲಾದೇಶ ಕಳೆದ ಪಾಕಿಸ್ಥಾನ ವಿರುದ್ಧದ ಸರಣಿಯಲ್ಲಿ, ಅವರದೇ ನೆಲದಲ್ಲಿ 2-0 ಅಂತರದ ಕ್ಲೀನ್‌ಸ್ವೀಪ್ ಫಲಿತಾಂಶ ದಾಖಲಿಸಿದ ಉತ್ಸಾಹದಲ್ಲಿದೆ. ಈ ಜಯದಿಂದ ಅದು ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ನೆಗೆದಿದೆ. ಭಾರತ ಅಗ್ರಸ್ಥಾನ ಕಾಯ್ದುಕೊಂಡಿದೆ. ಬಾಂಗ್ಲಾ ತಂಡ ಶೀಘ್ರವೇ ಚೆನ್ನೈ ತಲುಪಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Virat Kohli ಅವರನ್ನು ಭಾರತ ಹೊರಗಿಟ್ಟಿತ್ತೇ?:ಬಾಬರ್ ಕೈಬಿಟ್ಟಿದ್ದಕ್ಕೆ ಫಖರ್ ಜಮಾನ್ ಆಕ್ರೋಶ
Pakistan Cricket: ಟೆಸ್ಟ್ನಿಂದ ಬಾಬರ್ಗೆ ಗೇಟ್ ಪಾಸ್; ಪಾಕ್ ತಂಡದಲ್ಲಿ ಏನಾಗುತ್ತಿದೆ?
INDvsBAN: ವಿಶೇಷ ದಾಖಲೆ ಕ್ಲಬ್ ಸೇರಿದ ಭಾರತದ ಯುವ ವೇಗಿ ಮಯಾಂಕ್ ಯಾದವ್
Women’s T20 World Cup: ಭಾರತಕ್ಕಿಂದು ಆಸೀಸ್ವಿರುದ್ಧ ನಿರ್ಣಾಯಕ ಪಂದ್ಯ
Bodybuilding competition; ದಿನೇಶ್ ಆಚಾರ್ಯ ಮಿಸ್ಟರ್ ಉಚ್ಚಿಲ ದಸರಾ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.