Udayavni Special

ಅಂಕಿತಾ ರೈನಾಗೆ ಮೊದಲ ಡಬ್ಲ್ಯುಟಿಎ ಪ್ರಶಸ್ತಿ


Team Udayavani, Feb 20, 2021, 6:50 AM IST

ಅಂಕಿತಾ ರೈನಾಗೆ ಮೊದಲ ಡಬ್ಲ್ಯುಟಿಎ ಪ್ರಶಸ್ತಿ

ಮೆಲ್ಬರ್ನ್: ಭಾರತದ ಉದಯೋನ್ಮುಖ ಟೆನಿಸ್‌ ಆಟಗಾರ್ತಿ ಅಂಕಿತಾ ರೈನಾ ಮೊದಲ ಡಬ್ಲ್ಯುಟಿಎ ಪ್ರಶಸ್ತಿ ಗೆದ್ದು ಸಂಭ್ರಮಿಸಿದ್ದಾರೆ. ಇಲ್ಲಿ ನಡೆದ “ಫಿಲಿಪ್‌ ಐಸ್‌ಲ್ಯಾಂಡ್‌ ಟ್ರೋಫಿ’ ಡಬಲ್ಸ್‌ ಪ್ರಶಸ್ತಿಯನ್ನು ರಶ್ಯದ ಕಮಿಲ್ಲಾ ರಖೀಮೋವಾ ಜತೆಗೂಡಿ ಜಯಿಸಿದರು.

ಶುಕ್ರವಾರದ ತೀವ್ರ ಪೈಪೋಟಿಯ ಫೈನಲ್‌ ಹಣಾಹಣಿಯಲ್ಲಿ ಅಂಕಿತಾ- ಕಮಿಲ್ಲಾ ಸೇರಿಕೊಂಡು ರಶ್ಯದ ಅನ್ನಾ ಬ್ಲಿಂಕೋವಾ -ಅನಾಸ್ತಾಸಿಯಾ ಪೊಟೊಪೋವಾ ವಿರುದ್ಧ 2-6, 6-4, 10-7 ಅಂತರದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾದರು.

ಈ ಜಯದೊಂದಿಗೆ ಅಂಕಿತಾ ರೈನಾ ಡಬ್ಲ್ಯುಟಿಎ ಡಬಲ್ಸ್‌ ರ್‍ಯಾಂಕಿಂಗ್‌ನಲ್ಲಿ ನೂರರೊಳಗಿನ ಯಾದಿಯನ್ನು ಪ್ರವೇಶಿಸಿದ ಭಾರತದ 2ನೇ ಸಾಧಕಿ ಎನಿಸಿದರು. ಸಾನಿಯಾ ಮಿರ್ಜಾ ಮೊದಲ ಆಟಗಾರ್ತಿ.

ಇದಕ್ಕೂ ಮೊದಲು ಅಂಕಿತಾ ರೈನಾ ಐಟಿಎಫ್ ಡಬಲ್ಸ್‌ ಮತ್ತು ಡಬ್ಲ್ಯುಟಿಎ 125ಕೆ ಸೀರಿಸ್‌ ಪ್ರಶಸ್ತಿಗಳನ್ನು ಜಯಿಸಿದ್ದರು.

ವನಿತಾ ಡಬಲ್ಸ್‌ :  ಸಬಲೆಂಕಾ-ಮಾರ್ಟೆನ್ಸ್‌  ಚಾಂಪಿಯನ್ಸ್‌  :

ವಿಶ್ವದ ನಂ.2 ಜೋಡಿಯಾದ ಅರಿನಾ ಸಬಲೆಂಕಾ (ಬೆಲರೂಸ್‌)-ಎಲೈಸ್‌ ಮಾರ್ಟೆನ್ಸ್‌ (ಬೆಲ್ಜಿಯಂ) ಆಸ್ಟ್ರೇಲಿಯನ್‌ ಓಪನ್‌ ವನಿತಾ ಡಬಲ್ಸ್‌ ಪ್ರಶಸ್ತಿಯನ್ನೆತ್ತಿದ್ದಾರೆ. ಶುಕ್ರವಾರದ ಫೈನಲ್‌ನಲ್ಲಿ ಇವರು ಜೆಕ್‌ ಆಟಗಾರ್ತಿಯರಾದ ಬಾಬೊìರಾ ಕ್ರೆಸಿಕೋವಾ-ಕ್ಯಾಥರಿನಾ ಸಿನಿಯಕೋವಾ ಅವರನ್ನು 6-2, 6-3 ಅಂತರದಿಂದ ಪರಾಭವಗೊಳಿಸಿದರು.

ಇದು ಸಬಲೆಂಕಾ-ಮಾರ್ಟೆನ್ಸ್‌ ಜೋಡಿಗೆ ಒಲಿದ ಮೊದಲ ಆಸ್ಟ್ರೇಲಿಯನ್‌ ಓಪನ್‌ ಡಬಲ್ಸ್‌ ಪ್ರಶಸ್ತಿ ಹಾಗೂ 2ನೇ ಗ್ರ್ಯಾನ್‌ಸ್ಲಾಮ್‌ ಕಿರೀಟ. ಇದಕ್ಕೂ ಮೊದಲು ಇವರು 2019ರ ಯುಎಸ್‌ ಓಪನ್‌ ಚಾಂಪಿಯನ್‌ ಆಗಿದ್ದರು. ಒಟ್ಟಾರೆಯಾಗಿ ಇವರಿಬ್ಬರು ಜತೆಯಾಗಿ ಗೆದ್ದ 6ನೇ ಟೆನಿಸ್‌ ಪ್ರಶಸ್ತಿ ಇದಾಗಿದೆ.

ಮೆಡ್ವೆಡೇವ್‌ ಎದುರು ಮುಗ್ಗರಿಸಿದ ಸಿಸಿಪಸ್‌ :

ಮೆಲ್ಬರ್ನ್: ಕ್ವಾರ್ಟರ್‌ ಫೈನಲ್‌ನಲ್ಲಿ ರಫೆಲ್‌ ನಡಾಲ್‌ ಅವರನ್ನು ಮಣಿಸಿ “ದೈತ್ಯ ಸಂಹಾರಿ’ ಎನಿಸಿದ್ದ ಗ್ರೀಕ್‌ ಹೀರೋ ಸ್ಟೆಫ‌ನೋಸ್‌ ಸಿಸಿಪಸ್‌ ಸೆಮಿಫೈನಲ್‌ನಲ್ಲಿ ಸೋತು ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ನಿಂದ ಹೊರಬಿದ್ದರು. ಶುಕ್ರವಾರ 7 ಸಾವಿರದಷ್ಟು ವೀಕ್ಷಕರ ಸಮ್ಮುಖದಲ್ಲಿ ನಡೆದ ಸೆಣಸಾಟದಲ್ಲಿ ಸಿಸಿಪಸ್‌ ಅವರನ್ನು ರಶ್ಯದ ಡ್ಯಾನಿಲ್‌ ಮೆಡ್ವೆಡೇವ್‌ 6-4, 6-2, 7-5 ನೇರ ಸೆಟ್‌ಗಳಿಂದ ಮಣಿಸಿದರು.

ರವಿವಾರ ನೊವಾಕ್‌ ಜೊಕೋವಿಕ್‌-ಡ್ಯಾನಿಲ್‌ ಮೆಡ್ವೆಡೇವ್‌ ಮುಖಾಮುಖೀಯಾಗಲಿದ್ದಾರೆ. ಚೊಚ್ಚಲ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯ ಕನಸು ಕಾಣುತ್ತಿರುವ ಮಡ್ವೆಡೇವ್‌ ಪಾಲಿಗೆ ಇದು ಮೊದಲ ಆಸ್ಟ್ರೇಲಿಯನ್‌ ಓಪನ್‌ ಫೈನಲ್‌ ಆಗಿದೆ. ಅವರು ಮೆಲ್ಬರ್ನ್ ಪಾರ್ಕ್‌ ಫೈನಲ್‌ಗೆ ಲಗ್ಗೆ ಹಾಕಿದ ರಶ್ಯದ ಕೇವಲ 3ನೇ ಟೆನಿಸಿಗ. ಯೆವ್ಗೇನಿ ಕಫೆಲ್ನೀಕೋವ್‌ ಮತ್ತು ಮರಾತ್‌ ಸಫಿನ್‌ ಉಳಿದಿಬ್ಬರು.

ಮೆಡ್ವೆಡೇವ್‌ ಕಾಣುತ್ತಿರುವ ಕೇವಲ ಎರಡನೇ ಗ್ರ್ಯಾನ್‌ಸ್ಲಾಮ್‌ ಫೈನಲ್‌ ಇದಾಗಿದೆ. 2019ರ ಯುಎಸ್‌ ಓಪನ್‌ ಪ್ರಶಸ್ತಿ ಸುತ್ತಿಗೇರಿದ ಅವರು ರಫೆಲ್‌ ನಡಾಲ್‌ಗೆ ಶರಣಾಗಿದ್ದರು.

ಇಂದು ವನಿತಾ ಫೈನಲ್‌ :

ಶನಿವಾರ ವನಿತಾ ಸಿಂಗಲ್ಸ್‌ ಫೈನಲ್‌ ನಡೆಯಲಿದ್ದು, 2019ರ ಚಾಂಪಿಯನ್‌ ಜಪಾನಿನ ನವೋಮಿ ಒಸಾಕಾ ಮತ್ತು ಇದೇ ಮೊದಲ ಗ್ರ್ಯಾನ್‌ಸ್ಲಾಮ್‌ ಫೈನಲ್‌ ಕಾಣುತ್ತಿರುವ ಅಮೆರಿಕದ ಜೆನ್ನಿಫ‌ರ್‌ ಬ್ರಾಡಿ ಮುಖಾಮುಖೀ ಆಗಲಿದ್ದಾರೆ.

ಟಾಪ್ ನ್ಯೂಸ್

ಯುವರಾಜ್ ಸಿಂಗ್ ಬಂಧನಕ್ಕೆ ಕಾರಣವಾಯ್ತು ಯುಜಿ ಚಾಹಲ್ ಟಿಕ್ ಟಾಕ್ ವಿಡಿಯೋ!

ಯುವರಾಜ್ ಸಿಂಗ್ ಬಂಧನಕ್ಕೆ ಕಾರಣವಾಯ್ತು ಯುಜಿ ಚಾಹಲ್ ಟಿಕ್ ಟಾಕ್ ವಿಡಿಯೋ!

hgfhjhjgfdsa

ನಟ ಯಶ್ ಅವರನ್ನು ಹಿಂದಿಕ್ಕಿ ಮುಂದೆ ಸಾಗಿದ ರಶ್ಮಿಕಾ ಮಂದಣ್ಣ

bhajarangi-2

ಅ.20 ಬಿಡುಗಡೆಯಾಗಲಿದೆ ‘ಭಜರಂಗಿ-2’ ಟ್ರೇಲರ್‌

Untitled-1

ಪುತ್ತೂರು: ಕೃಷಿಕ ದಂಪತಿ ನೇಣು ಬಿಗಿದು ಆತ್ಮಹತ್ಯೆ

1-2-a

ಬೆಂಗಳೂರು ನಗರದ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಸಿಎಂ

ನಿಖೀಲ್‌ ಕುಮಾರ್ ‘ರೈಡರ್‌’ ರಿಲೀಸ್‌ ದಿನಾಂಕ ಫಿಕ್ಸ್

ನಿಖೀಲ್‌ ಕುಮಾರ್ ‘ರೈಡರ್‌’ ರಿಲೀಸ್‌ ದಿನಾಂಕ ಫಿಕ್ಸ್

ಬರಲಿದೆ ಸ್ಮಾರ್ಟ್‌ ಸ್ಪೀಡ್‌ ವಾರ್ನಿಂಗ್‌ ಸಿಸ್ಟಂ

ಬರಲಿದೆ ಸ್ಮಾರ್ಟ್‌ ಸ್ಪೀಡ್‌ ವಾರ್ನಿಂಗ್‌ ಸಿಸ್ಟಂ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಯುವರಾಜ್ ಸಿಂಗ್ ಬಂಧನಕ್ಕೆ ಕಾರಣವಾಯ್ತು ಯುಜಿ ಚಾಹಲ್ ಟಿಕ್ ಟಾಕ್ ವಿಡಿಯೋ!

ಯುವರಾಜ್ ಸಿಂಗ್ ಬಂಧನಕ್ಕೆ ಕಾರಣವಾಯ್ತು ಯುಜಿ ಚಾಹಲ್ ಟಿಕ್ ಟಾಕ್ ವಿಡಿಯೋ!

ಟಿ20 ವಿಶ್ವಕಪ್: ಬಾಂಗ್ಲಾದೇಶಕ್ಕೆ ಸೋಲಿನ ರುಚಿ ತೋರಿಸಿದ ಸ್ಕಾಟ್ಲೆಂಡ್

ಟಿ20 ವಿಶ್ವಕಪ್: ಬಾಂಗ್ಲಾದೇಶಕ್ಕೆ ಸೋಲಿನ ರುಚಿ ತೋರಿಸಿದ ಸ್ಕಾಟ್ಲೆಂಡ್

yuvraj singh

ಹರ್ಯಾಣ ಪೊಲೀಸರಿಂದ ಮಾಜಿ ಆಟಗಾರ ಯುವರಾಜ್ ಸಿಂಗ್ ಬಂಧನ!

ಇಂದು ಭಾರತ-ಇಂಗ್ಲೆಂಡ್‌ ಅಭ್ಯಾಸ ಪಂದ್ಯ

ಇಂದು ಭಾರತ-ಇಂಗ್ಲೆಂಡ್‌ ಅಭ್ಯಾಸ ಪಂದ್ಯ

ಇಂಡಿಯನ್‌ ವೆಲ್ಸ್‌ ಟೆನಿಸ್‌ : ನೂರಿ-ಬಾಸಿಲಶ್ವಿ‌ಲಿ ಫೈನಲ್‌

ಇಂಡಿಯನ್‌ ವೆಲ್ಸ್‌ ಟೆನಿಸ್‌ : ನೂರಿ-ಬಾಸಿಲಶ್ವಿ‌ಲಿ ಫೈನಲ್‌

MUST WATCH

udayavani youtube

ಅರರೆ… ಬಾಳೆ ಕಾಯಿ ಶ್ಯಾವಿಗೆ.. ರುಚಿ ಬಾಯಿಗೆ, ಉತ್ತಮ ಆರೋಗ್ಯಕ್ಕೆ

udayavani youtube

ದಾಂಡೇಲಿ : ಜನಮನ ಸೂರೆಗೊಂಡ ದನಗರ ಗೌಳಿ ನೃತ್ಯ

udayavani youtube

ಭತ್ತದ ಕೃಷಿ ಭರಪೂರ ಲಾಭ ತಂದು ಕೊಡುತ್ತಾ ?

udayavani youtube

ಸಮಾಜ ಮೆಚ್ಚುವಂತೆ ಬಾಳುವೆ: ಆರ್ಯನ್‌ ಖಾನ್ |UDAYAVANI NEWS BULLETIN|17/10/2021

udayavani youtube

ಅರಕಲಗೂಡು: ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಪೊಲೀಸರ ದಾಳಿ

ಹೊಸ ಸೇರ್ಪಡೆ

12

ಗ್ರಾಮೀಣ ಕಲೆ ಜೀವನದ ಮೌಲ್ಯ: ಶ್ರೀ

ಆನೆಗಳು ಯಶಸಿಯಾಗಿ ಜವಾಬ್ದಾರಿ ನಿರ್ವಹಿಸಿವೆ

ಆನೆಗಳು ಯಶಸಿಯಾಗಿ ಜವಾಬ್ದಾರಿ ನಿರ್ವಹಿಸಿವೆ

ಚಿತ್ರೀಕರಣದಲ್ಲಿ ‘ಐಹೊಳೆ’ ಬಿಝಿ

ಚಿತ್ರೀಕರಣದಲ್ಲಿ ‘ಐಹೊಳೆ’ ಬಿಝಿ

11

ಗೊಂಡ ಸಂಘರ್ಷ ಸಮಿತಿಯಿಂದ ಪ್ರತಿಭಟನೆ

ಕಸ, ಗ್ರಾಮಸ್ಥರಿಂದ ತರಾಟೆ, udayavanipaper, kannadanews,

ಕಸ ಹಾಕಿದವರಿಗೆ ಗ್ರಾಮಸ್ಥರಿಂದ ತರಾಟೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.