ರಾಷ್ಟ್ರೀಯ ತಂಡದ ಬದಲು ಐಪಿಎಲ್ ಆಯ್ಕೆ ಮಾಡಿದ ದ.ಆಫ್ರಿಕಾದ 5 ಆಟಗಾರರು; ಟೆಸ್ಟ್ ತಂಡದಿಂದ ಔಟ್

Team Udayavani, Mar 18, 2022, 4:28 PM IST

Five South Africa players choose IPL over national side

ಜೋಹಾನ್ಸ್ ಬರ್ಗ್: ಬಂಗ್ಲಾದೇಶ ವಿರುದ್ಧ ಮಾರ್ಚ್ 31ರಿಂದ ಆರಂಭವಾಗಲಿರುವ ಟೆಸ್ಟ್ ಸರಣಿಗೆ ದಕ್ಷಿಣ ಆಫ್ರಿಕಾ ತಂಡ ಪ್ರಕಟವಾಗಿದೆ. 15 ಮಂದಿಯ ತಂಡವನ್ನು ಪ್ರಕಟ ಮಾಡಲಾಗಿದ್ದು, ಅದೇ ಸಮಯದಲ್ಲಿ ಐಪಿಎಲ್ ನಲ್ಲಿ ಆಡಲಿರುವ ಆಟಗಾರರನ್ನು ಕೈಬಿಡಲಾಗಿದೆ.

ಹರಿಣಗಳ ತಂಡದ ಪ್ರಮುಖ ವೇಗದ ಬೌಲರ್ ಗಳಾದ ಕಗಿಸೋ ರಬಾಡ, ಲುಂಗಿ ಎನ್ ಗಿಡಿ ಮತ್ತು ಮಾಕ್ರೋ ಜೆನ್ಸನ್ ಗೆ ಟೆಸ್ಟ್ ತಂಡದಲ್ಲಿ ಜಾಗ ನೀಡಲಾಗಿಲ್ಲ. ಐಪಿಎಲ್ ನಲ್ಲಿ ಆಡುವ ಏಡನ್ ಮಾಕ್ರಮ್ ಮತ್ತು ರಸ್ಸಿ ವ್ಯಾನ್ ಡರ್ ಡ್ಯುಸನ್ ಕೂಡಾ ಬಾಂಗ್ಲಾ ಸರಣಿಗೆ ಆಯ್ಕೆಯಾಗಿಲ್ಲ.

ಐಪಿಎಲ್‌ ನಲ್ಲಿ ಆಡಬೇಕೆ ಅಥವಾ ದೇಶದ ಸರಣಿಯಲ್ಲಿ ಆಡಬೇಕೆ ಎಂಬ ನಿರ್ಧಾರವನ್ನು ಆಟಗಾರರಿಗೆ ಬಿಡಲಾಗಿತ್ತು ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಹೇಳಿದೆ. ಈ ನಿರ್ಧಾರವನ್ನು ಟೆಸ್ಟ್ ನಾಯಕ ಡೀನ್ ಎಲ್ಗರ್ “ನಿಷ್ಠೆಯ ಪರೀಕ್ಷೆ” ಎಂದು ಕರೆದಿದ್ದಾರೆ.

ಮಧ್ಯಮ ಕ್ರಮಾಂಕದ ಬ್ಯಾಟರ್ ಖಾಯಾ ಝೊಂಡೋ ಅವರ ಚೊಚ್ಚಲ ಟೆಸ್ಟ್ ಕರೆಯನ್ನು ಪಡೆದಿದ್ದಾರೆ. ಅನ್‌ಕ್ಯಾಪ್ಡ್ ಬೌಲರ್ ಡೇರಿನ್ ಡುಪಾವಿಲ್ಲನ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ:ಜೆರ್ಸಿ ಸಂಖ್ಯೆ 7ರ ಹಿಂದಿನ ರಹಸ್ಯ ಬಿಚ್ಚಿಟ್ಟ ಮಹೇಂದ್ರ ಸಿಂಗ್ ಧೋನಿ

ಇದೇ ವೇಳೆ ವೇಗದ ಬೌಲರ್ ಆನ್ರಿಚ್ ನೋರ್ಜೆ ಅವರನ್ನು ಆಯ್ಕೆ ಮಾಡಲಾಗಿಲ್ಲ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ನೋರ್ಜೆ ಐಪಿಎಲ್ ನಲ್ಲಿ ಆಡುವುದು ಅನುಮಾನವಾಗಿದೆ.

ದಕ್ಷಿಣ ಆಫ್ರಿಕಾದ ಕ್ರಿಕೆಟಿಗರ ಅಸೋಸಿಯೇಷನ್ ನೊಂದಿಗೆ ಕ್ರಿಕೆಟ್ ದಕ್ಷಿಣ ಆಫ್ರಿಕಾದ ಪ್ರಸ್ತುತ ಒಪ್ಪಂದದ ಪ್ರಕಾರ, ಐಪಿಎಲ್ ನಲ್ಲಿ ಭಾಗವಹಿಸುವ ಅವಕಾಶವನ್ನು ಮಂಡಳಿಯು ನಿರಾಕರಿಸುವಂತಿಲ್ಲ. ಯಾಕೆಂದರೆ ಎರಡೂ ಸಂಸ್ಥೆಗಳು ಆಟಗಾರರ ಜೀವನೋಪಾಯ ಮತ್ತು ಅವಕಾಶಗಳನ್ನು ಮತ್ತು ರಾಷ್ಟ್ರೀಯ ತಂಡಕ್ಕೆ ಅವರ ಕರ್ತವ್ಯಗಳನ್ನು ಸಮತೋಲನಗೊಳಿಸುವ ಕೆಲಸ ಮಾಡುತ್ತವೆ.

ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಮಾರ್ಚ್ 31ರಿಂದ ಡರ್ಬನ್ ನಲ್ಲಿ ನಡೆಯಲಿದೆ. ಎರಡನೇ ಟೆಸ್ಟ್ ಪಂದ್ಯವು ಎಪ್ರಿಲ್ 7ರಂದು ಪೋರ್ಟ್ ಎಲಿಜಬೆತ್ ನಲ್ಲಿ ಆರಂಭವಾಗಲಿದೆ. ಐಪಿಎಲ್ ಕೂಟವು ಮಾರ್ಚ್ 26ರಿಂದ ಆರಂಭವಾಗಲಿದೆ.

ದ.ಆಫ್ರಿಕಾ ತಂಡ: ಡೀನ್ ಎಲ್ಗರ್ (ನಾಯಕ), ಟೆಂಬಾ ಬವುಮಾ (ಉಪನಾಯಕ), ಡೇರಿನ್ ಡುಪಾವಿಲ್ಲನ್, ಸರೆಲ್ ಎರ್ವೀ, ಸೈಮನ್ ಹಾರ್ಮರ್, ಕೇಶವ್ ಮಹಾರಾಜ್, ವಿಯಾನ್ ಮುಲ್ಡರ್, ಡುವಾನ್ ಒಲಿವಿಯರ್, ಕೀಗನ್ ಪೀಟರ್ಸನ್, ರಿಯಾನ್ ರಿಕೆಲ್ಟನ್, ಲುಥೋ ಸಿಪಾಮ್ಲಾ, ಗ್ಲೆಂಟನ್ ಸ್ಟೌರ್ಮನ್, ಕೈಲ್ ವೆರೆನ್ (ವಿ.ಕೀಪರ್), ಲಿಜಾದ್ ವಿಲಿಯಮ್ಸ್, ಖಯಾ ಝೊಂಡೋ.

ಟಾಪ್ ನ್ಯೂಸ್

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

Ipl: ಡೆಲ್ಲಿ ಗೆಲುವಿಗೆ ಪಂತ್‌, ಪಟೇಲ್‌ ನೆರವು

Ipl: ಡೆಲ್ಲಿ ಗೆಲುವಿಗೆ ಪಂತ್‌, ಪಟೇಲ್‌ ನೆರವು

IPL: ಮತ್ತೂಂದು ದೊಡ್ಡ ಮೊತ್ತಕ್ಕೆ ಎಸ್‌ಆರ್‌ಎಚ್‌ ಸ್ಕೆಚ್‌

IPL: ಮತ್ತೂಂದು ದೊಡ್ಡ ಮೊತ್ತಕ್ಕೆ ಎಸ್‌ಆರ್‌ಎಚ್‌ ಸ್ಕೆಚ್‌

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

12–uv-fusion

Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.