ಫೈವ್‌ಸ್ಟಾರ್‌ ವ್ಯಾಗ್ನರ್‌; ಕಿವೀಸ್‌ ಇನ್ನಿಂಗ್ಸ್‌ ವಿಜಯ

Team Udayavani, Nov 26, 2019, 5:00 AM IST

NEW-ZEALAND

ಮೌಂಟ್‌ ಮೌಂಗನುಯಿ: ಆತಿಥೇಯ ನ್ಯೂಜಿಲ್ಯಾಂಡ್‌ ಎದುರಿನ ಪ್ರಥಮ ಟೆಸ್ಟ್‌ ಪಂದ್ಯವನ್ನು ಉಳಿಸಿಕೊಳ್ಳು ವಲ್ಲಿ ಇಂಗ್ಲೆಂಡ್‌ ವಿಫ‌ಲವಾಗಿದೆ. ನೀಲ್‌ ವ್ಯಾಗ್ನರ್‌ ಬೌಲಿಂಗ್‌ ಆಕ್ರಮಣಕ್ಕೆ ತತ್ತರಿಸಿದ ಜೋ ರೂಟ್‌ ಪಡೆ ಇನ್ನಿಂಗ್ಸ್‌ ಹಾಗೂ 65 ರನ್‌ ಸೋಲಿನ ಆಘಾತಕ್ಕೆ ಸಿಲುಕಿದೆ.

262 ರನ್ನುಗಳ ಭಾರೀ ಹಿನ್ನಡೆಗೆ ಒಳಗಾದ ಬಳಿಕ ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿದ ಜೋ ರೂಟ್‌ ಪಡೆ, 4ನೇ ದಿನದಾಟದ ಅಂತ್ಯಕ್ಕೆ 3 ವಿಕೆಟಿಗೆ 55 ರನ್‌ ಗಳಿಸಿ ಚಿಂತಾಜನಕ ಸ್ಥಿತಿಯಲ್ಲಿತ್ತು. ಅಂತಿಮ ದಿನವಾದ ಸೋಮವಾರ 197ಕ್ಕೆ ಕುಸಿದು ಶರಣಾಗತಿ ಸಾರಿತು. ಇದರೊಂದಿಗೆ ಏಕಕಾಲದಲ್ಲಿ ಆರಂಭಗೊಂಡ ಮೂರೂ ಟೆಸ್ಟ್‌ ಪಂದ್ಯಗಳಲ್ಲಿ ಆತಿಥೇಯ ತಂಡಗಳು ಇನ್ನಿಂಗ್ಸ್‌ ಗೆಲುವು ಕಂಡಂತಾಯಿತು. ರವಿವಾರ ಭಾರತ ಬಾಂಗ್ಲಾದೇಶವನ್ನು ಹಾಗೂ ಆಸ್ಟ್ರೇಲಿಯ ಪಾಕಿಸ್ಥಾನವನ್ನು ಇನ್ನಿಂಗ್ಸ್‌ ಸೋಲಿಗೆ ಗುರಿಪಡಿಸಿತ್ತು.

ಬ್ಯಾಟಿಂಗ್‌ ಸ್ಟಾರ್‌ಗಳ ವೈಫ‌ಲ್ಯ
ಪಿಚ್‌ ಬ್ಯಾಟಿಂಗಿಗೆ ಸಹಕರಿಸುತ್ತಿದ್ದು ದರಿಂದ ಹಾಗೂ ರೂಟ್‌, ಸ್ಟೋಕ್ಸ್‌, ಬಟ್ಲರ್‌ ಮೊದಲಾದವರು ಕ್ರೀಸ್‌ ಇಳಿಯ ಬೇಕಾದ್ದರಿಂದ ಇಂಗ್ಲೆಂಡ್‌ ಹೋರಾಟ ವೊಂದನ್ನು ಸಂಘಟಿಸಿ ಪಂದ್ಯವನ್ನು ಡ್ರಾ ಮಾಡಿಕೊಂಡೀತು ಎಂಬ ನೀರಿಕ್ಷೆ ಇತ್ತು. ಆದರೆ ಎಡಗೈ ಮಧ್ಯಮ ವೇಗಿ ನೀಲ್‌ ವ್ಯಾಗ್ನರ್‌ ಇದಕ್ಕೆ ಅವಕಾಶ ಕೊಡಲಿಲ್ಲ. ಅವರು 5 ವಿಕೆಟ್‌ ಉಡಾಯಿಸಿ ನ್ಯೂಜಿ ಲ್ಯಾಂಡ್‌ ಜಯಭೇರಿಯನ್ನು ಸಾರಿದರು.

ರಕ್ಷಣಾತ್ಮಕ ಆಟಕ್ಕಿಳಿದು ಪಂದ್ಯವನ್ನು ಡ್ರಾ ಮಾಡಿಕೊಳ್ಳುವುದೇ ಇಂಗ್ಲೆಂಡ್‌ ಯೋಜನೆಯಾಗಿತ್ತು. ಆದರೆ ಆಗ ರನ್ನೂ ಬರಲಿಲ್ಲ, ವಿಕೆಟ್‌ ಕೂಡ ಉಳಿಯಲಿಲ್ಲ. 17 ರನ್‌ ಅಂತರದಲ್ಲಿ 4 ವಿಕೆಟ್‌ ಉರುಳಿಸಿಕೊಂಡ ಇಂಗ್ಲೆಂಡಿಗೆ ಉಳಿವಿನ ಮಾರ್ಗವೆಲ್ಲ ಮುಚ್ಚಿತು.

ನಾಯಕ ರೂಟ್‌ 11 ರನ್ನಿಗಾಗಿ 51 ಎಸೆತ ಎದುರಿಸಿದರು. ಸ್ಟೋಕ್ಸ್‌ 84 ಎಸೆತ ನಿಭಾಯಿಸಿ 28 ರನ್‌ ಮಾಡಿದರು. ಪೋಪ್‌ ಗಳಿಕೆ ಆರೇ ರನ್‌. ಬಟ್ಲರ್‌ 18 ಎಸೆತ ಎದುರಿಸಿದರೂ ಖಾತೆಯನ್ನೇ ತೆರೆಯಲಿಲ್ಲ.

9ನೇ ವಿಕೆಟಿಗೆ ಸ್ಯಾಮ್‌ ಕರನ್‌ (ಅಜೇಯ 29) ಮತ್ತು ಜೋಫ‌Å ಆರ್ಚರ್‌ (30) 59 ರನ್‌ ಒಟ್ಟುಗೂಡಿಸಿದ್ದೇ ಇಂಗ್ಲೆಂಡ್‌ ಸರದಿಯ ದೊಡ್ಡ ಜತೆಯಾಟವೆನಿಸಿತು.
ಈ ಜಯದೊಂದಿಗೆ ತವರಿನ ಸತತ 7 ಟೆಸ್ಟ್‌ ಸರಣಿಗಳಲ್ಲಿ ನ್ಯೂಜಿಲ್ಯಾಂಡ್‌ ಅಜೇಯವಾಗಿ ಉಳಿದಂತಾಯಿತು. ಸರಣಿಯ 2ನೇ ಹಾಗೂ ಅಂತಿಮ ಪಂದ್ಯ ಶುಕ್ರವಾರದಿಂದ ಹ್ಯಾಮಿಲ್ಟನ್‌ನಲ್ಲಿ ಆರಂಭವಾಗಲಿದೆ.

ಸಂಕ್ಷಿಪ್ತ ಸ್ಕೋರ್‌
ಇಂಗ್ಲೆಂಡ್‌-353 ಮತ್ತು 197 (ಡೆನ್ಲಿ 35, ಬರ್ನ್ಸ್ 31, ಆರ್ಚರ್‌ 30, ಕರನ್‌ ಔಟಾಗದೆ 29, ಸ್ಟೋಕ್ಸ್‌ 28, ವ್ಯಾಗ್ನರ್‌ 44ಕ್ಕೆ 5, ಸ್ಯಾಂಟ್ನರ್‌ 53ಕ್ಕೆ 3). ಪಂದ್ಯಶ್ರೇಷ್ಠ: ಬ್ರಾಡ್ಲಿ ವಾಟಿÉಂಗ್‌.

ಆರ್ಚರ್‌ಗೆ ಜನಾಂಗೀಯ ನಿಂದನೆ
ಇಂಗ್ಲೆಂಡ್‌ ವೇಗಿ ಜೋಫ‌Å ಆರ್ಚರ್‌ ವೀಕ್ಷಕನೊಬ್ಬನಿಂದ ಜನಾಂಗೀಯ ನಿಂದನೆಗೆ ಒಳಗಾಗಿದ್ದಾರೆ. ಈ ಕಹಿ ಅನುಭವವನ್ನು ಆರ್ಚರ್‌ ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ. ನ್ಯೂಜಿಲ್ಯಾಂಡ್‌-ಇಂಗ್ಲೆಂಡ್‌ ನಡುವಿನ ಮೊದಲ ಟೆಸ್ಟ್‌ ಪಂದ್ಯದ ಕೊನೆಯ ದಿನದಾಟದ ವೇಳೆ ಈ ಘಟನೆ ನಡೆದಿದೆ. ಇದಕ್ಕೆ ನ್ಯೂಜಿಲ್ಯಾಂಡ್‌ ಕ್ರಿಕೆಟ್‌ ಮಂಡಳಿ ವಿಷಾದ ವ್ಯಕ್ತಪಡಿಸಿದೆ.

ಬ್ಯಾಟಿಂಗ್‌ ಮಾಡುತ್ತಿದ್ದಾಗ ವೀಕ್ಷಕರ ಗುಂಪಿನಿಂದ ಒಬ್ಬ ವ್ಯಕ್ತಿ ಜನಾಂಗೀಯ ನಿಂದನೆ ಮಾಡಿದ್ದಾನೆ ಎಂದು ಆರ್ಚರ್‌ ತಿಳಿಸಿದ್ದಾರೆ.

“ಘಟನೆಯಿಂದ ನಮಗೆ ಆಘಾತವಾಗಿದೆ. ತಪ್ಪಿತಸ್ಥ ಯಾರೇ ಆಗಿದ್ದರೂ ಆತನನ್ನು ಬಂಧಿಸಿ ಕಠಿನ ಶಿಕ್ಷೆ ನೀಡುತ್ತೇವೆ. ನಿಮಗಾಗಿರುವ ಅವಮಾನಕ್ಕೆ ಕ್ಷಮೆಯಾಚಿಸುತ್ತೇವೆ’ ಎಂದು ನ್ಯೂಜಿಲ್ಯಾಂಡ್‌ ಕ್ರಿಕೆಟ್‌ ಮಂಡಳಿ ತಿಳಿಸಿದೆ.

ಟಾಪ್ ನ್ಯೂಸ್

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

Bus Falls From Bridge In Odisha’s Jajpur

Jajpur; ಸೇತುವೆಯಿಂದ ಬಿದ್ದ ಬಸ್; ಐವರು ಸಾವು, ಹಲವರಿಗೆ ಗಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

‘Please sell the RCB team to someone else’; Tennis star appeal

IPL 2024; ‘ದಯವಿಟ್ಟು ಆರ್ ಸಿಬಿ ತಂಡವನ್ನು ಬೇರೆಯವರಿಗೆ ಮಾರಿ ಬಿಡಿ’; ಟೆನ್ನಿಸ್ ತಾರೆ ಮನವಿ

1-eweqw

RR vs KKR : ನಂ. 1, 2 ತಂಡಗಳ ನಡುವೆ ಬಿಗ್‌ ಫೈಟ್‌

MUST WATCH

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

udayavani youtube

ಶ್ರೀ ವೈಷ್ಣವಿ ದುರ್ಗಾ ದೇವಾಲಯ

udayavani youtube

ಟೈಟನ್ ಕಂಪೆನಿಯ Xylys ವಾಚ್ ವಿಶೇಷತೆಗಳೇನು ?

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

ಹೊಸ ಸೇರ್ಪಡೆ

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

ನಾಮಪತ್ರ ಸಲ್ಲಿಸಿದ ದಾವಣಗೆರೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ

ನಾಮಪತ್ರ ಸಲ್ಲಿಸಿದ ದಾವಣಗೆರೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.