ಫುಟ್ಬಾಲ್ ದಂತಕತೆ ಪೀಲೆ ಇನ್ನಿಲ್ಲ
Team Udayavani, Dec 30, 2022, 7:39 AM IST
ಬ್ರೆಸಿಲಿಯಾ: ವಿಶ್ವ ಫುಟ್‌ಬಾಲ್ ನ ಸಾರ್ವಕಾಲಿಕ ಆಟಗಾರ ಬ್ರೆಜಿಲ್‌ಗೆ 3 ವಿಶ್ವಕಪ್‌ಗಳನ್ನು ತಂದುಕೊಟ್ಟಿದ್ದ ಖ್ಯಾತ ಆಟಗಾರ ಪೀಲೆ (82) ಅನಾರೋಗ್ಯದಿಂದ ನಿಧನರಾದರು.
ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಪೀಲೆ ಅವರು 2021ರಿಂದ ಚಿಕಿತ್ಸೆ ಪಡೆಯುತ್ತಿದ್ದರು. ಹಲವು ಕಾಯಿಲೆಗಳ ಕಾರಣದಿಂದಾಗಿ ಅವರನ್ನು ನ.29ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ತನ್ನ 16ನೇ ವಯಸ್ಸಿನಲ್ಲಿ ಬ್ರೆಝಿಲ್ ರಾಷ್ಟ್ರೀಯ ತಂಡದ ಪರ ಆಡಲು ಆರಂಭಿಸಿದ ಪೀಲೆ 1958, 1962 ಹಾಗೂ 1970ರಲ್ಲಿ ಬ್ರೆಝಿಲ್ ಫಿಫಾ ವಿಶ್ವಕಪ್ ಗೆಲ್ಲಲು ಪ್ರಮುಖ ಪಾತ್ರವಹಿಸಿದ್ದರು. ಈ ಸಾಧನೆ ಮಾಡಿದ ಏಕೈಕ ಆಟಗಾರನಾಗಿದ್ದಾರೆ.
ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಪೀಲೆ 77 ಗೋಲುಗಳನ್ನು ಗಳಿಸಿದ್ದಾರೆ. ಎಲ್ಲಾ ಕ್ಲಬ್‌ಗಳು ಸೇರಿದಂತೆ ಒಟ್ಟು 840 ಪಂದ್ಯಗಳನ್ನು ಆಡಿರುವ ಪೀಲೆ 775 ಗೋಲು ಬಾರಿಸಿದ್ದಾರೆ. ಅಲ್ಲದೇ 100ಕ್ಕೂ ಹೆಚ್ಚು ಬಾರಿ ಹ್ಯಾಟ್ರಿಕ್ ಗೋಲುಗಳನ್ನು ಗಳಿಸಿರುವ ಆಟಗಾರ ಎನಿಸಿಕೊಂಡಿದ್ದಾರೆ. ಪೀಲೆ ನಿಧನಕ್ಕೆ ಜಗತ್ತಿನ ಗಣ್ಯರು ಕಂಬನಿ ಮಿಡಿದಿದ್ದಾರೆ.
ನವೆಂಬರ್‌ನಲ್ಲಿ ಆಸ್ಪತ್ರೆಗೆ ದಾಖಲಾದ ಅವರು ಆರಂಭದಲ್ಲಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದರಾದರೂ ದಿನ ಕಳೆದಂತೆ ಆರೋಗ್ಯ ಕ್ಷೀಣಿಸುತ್ತಲೇ ಇತ್ತು. ಹಾಗಾಗಿ, ವೈದ್ಯರು ಅವರಿಗೆ ಕೀಮೊಥೆರಪಿಯನ್ನೂ ನಿಲ್ಲಿಸಿದ್ದರು. ಚಿಕಿತ್ಸೆಯ ಮಧ್ಯೆಯೇ, ಕೋಟ್ಯಂತರ ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದ ಪೀಲೆ, “ನಾನು ಗೆದ್ದು ಬರುವೆ” ಎಂದಿದರು.
ಮೂರು ಬಾರಿ ವಿವಾಹವಾಗಿದ್ದ ಪೀಲೆ ಅವರಿಗೆ ಒಟ್ಟು 7 ಮಕ್ಕಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ
Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ
IPL; ಪಂಜಾಬ್ ಕಿಂಗ್ಸ್-ಮುಂಬೈ ಇಂಡಿಯನ್ಸ್ : ಒಂದೇ ದೋಣಿಯ ಪಯಣಿಗರು
Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ
ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು