ಏಕಕಾಲಕ್ಕೆ 2 ಮದುವೆ: ಸುಳ್ ಸುದ್ದಿ ಎಂದ ರೊನಾಲ್ಡಿನೊ
Team Udayavani, May 26, 2018, 6:35 AM IST
ರಿಯೋ ಡಿ ಜನೈರೋ: ಆಗಸ್ಟ್ನಲ್ಲಿ ಏಕಕಾಲಕ್ಕೆ ಇಬ್ಬರು ಯುವತಿಯರನ್ನು ಮದುವೆಯಾಗಲಿದ್ದಾರೆ ಎನ್ನುವ ಸುದ್ದಿಯನ್ನು ಬ್ರೆಜಿಲ್ ಫುಟ್ಬಾಲ್ ದಂತಕಥೆ ರೊನಾಲ್ಡಿನೊ ತಳ್ಳಿ ಹಾಕಿದ್ದಾರೆ.
ಈ ಹಿಂದೆ ರೊನಾಲ್ಡಿನೊ ಪ್ರತ್ಯೇಕವಾಗಿ ಎರಡು ಮದುವೆ ಆಗಿದ್ದರು. ಆದರೆ ಇದೀಗ ಏಕಕಾಲಕ್ಕೆ ಇನ್ನಿಬ್ಬರನ್ನು ವರಿಸಲಿದ್ದಾರೆ ಎಂದು ಬ್ರೆಜಿಲ್ನ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಇದನ್ನು ರೊನಾಲ್ಡಿನೊ ತಳ್ಳಿ ಹಾಕಿದ್ದು, ವಿಶ್ವದ ಪ್ರತಿಯೊಬ್ಬರು ನನಗೆ ಈಗ ಕರೆ ಮಾಡುತ್ತಿದ್ದಾರೆ. ನಾನು ಮದುವೆಯಾಗುತ್ತಿಲ್ಲ. ಇದೊಂದು ದೊಡ್ಡ ಸುಳ್ ಸುದ್ದಿ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.