
ನವಜಾತ ಮಗನನ್ನು ಕಳೆದುಕೊಂಡ ಕ್ರಿಸ್ಟಿಯಾನೋ ರೊನಾಲ್ಡೊ; ಪುತ್ರ ಶೋಕದಲ್ಲಿ ಫುಟ್ ಬಾಲ್ ತಾರೆ
Team Udayavani, Apr 19, 2022, 9:14 AM IST

ಲಿಸ್ಬನ್: ಪೋರ್ಚುಗಲ್ ನ ಲೆಜೆಂಡರಿ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ತಮ್ಮ ಗಂಡು ಮಗುವನ್ನು ಕಳೆದುಕೊಂಡಿದ್ದಾರೆ. ನವಜಾತ ಮಗನ ಸಾವಿನ ದುಃಖವನ್ನು ರೊನಾಲ್ಡೊ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಕುಟುಂಬವು ಗಂಡು ಮಗುವಿನ ಸಾವಿನಿಂದ ಬೇಸರದಲ್ಲಿದ್ದು, ಖಾಸಗಿತನದ ಅಗತ್ಯವಿದೆ ಎಂದು ಹೇಳಿಕೊಂಡಿದ್ದಾರೆ.
ರೊನಾಲ್ಡೊ ಮತ್ತು ಬಹುಕಾಲದ ಗೆಳತಿ ಜಾರ್ಜಿನಾ ಅವಳಿ ಶಿಶುಗಳಿಗೆ ಪೋಷಕರಾಗಲಿದ್ದಾರೆ ಎಂದು ಈ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ಖಚಿತಪಡಿಸಿದ್ದರು. ಆದರೆ ಸೋಮವಾರ ಪೋಸ್ಟ್ ಮಾಡಿರುವ ರೊನಾಲ್ಡೊ ಹೆಣ್ಣು ಮಗುವಿನ ಜನನವು ಮಗನನ್ನು ಕಳೆದುಕೊಂಡ ನೋವನ್ನು ನಿಭಾಯಿಸುವ ಶಕ್ತಿಯನ್ನು ನೀಡಿದೆ ಎಂದು ಹೇಳಿದ್ದಾರೆ.
ರೊನಾಲ್ಡೊ- ಜಾರ್ಜಿನಾ ದಂಪತಿಗೆ ಕ್ರಿಸ್ಟಿಯಾನೋ ಜೂನಿಯರ್, ಮಾಟಿಯೊ, ಇವಾ ಮತ್ತು ಅಲಾನಾ ಎಂಬ ನಾಲ್ವರು ಮಕ್ಕಳಿದ್ದಾರೆ.
ಇದನ್ನೂ ಓದಿ:RCB ತಂಡದ ಆನೆಬಲ, ಸ್ಫೋಟಕ ಆಟಗಾರ ದಿನೇಶ್ ಕಾರ್ತಿಕ್ ಫೋಟೋ ಝಲಕ್
“ಆಳವಾದ ದುಃಖದಿಂದ ನಮ್ಮ ಗಂಡು ಮಗು ತೀರಿಕೊಂಡಿದೆ ಎಂದು ಘೋಷಿಸಬೇಕಾಗಿದೆ. ಇದು ಯಾವುದೇ ಪೋಷಕರು ಅನುಭವಿಸಬಹುದಾದ ದೊಡ್ಡ ನೋವು. ನಮ್ಮ ಹೆಣ್ಣು ಮಗುವಿನ ಜನನವು ಈ ಕ್ಷಣವನ್ನು ಸ್ವಲ್ಪ ಭರವಸೆ ಮತ್ತು ಸಂತೋಷದಿಂದ ಬದುಕಲು ನಮಗೆ ಶಕ್ತಿಯನ್ನು ನೀಡುತ್ತದೆ” ಎಂದು ರೊನಾಲ್ಡೊ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.
View this post on Instagram
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
