55 ವರ್ಷಗಳಲ್ಲಿ ಮೊದಲ ಸಲ ಭಾರತ ಟೆನಿಸ್‌ ತಂಡ ಪಾಕಿಸ್ಥಾನಕ್ಕೆ

Team Udayavani, Jul 28, 2019, 5:36 AM IST

ಹೊಸದಿಲ್ಲಿ: ಕಳೆದ 55 ವರ್ಷಗಳ ಭಾರತ ಟೆನಿಸ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ತಂಡವೊಂದು ಪಾಕಿಸ್ಥಾನಕ್ಕೆ ತೆರಳಿ ಟೆನಿಸ್‌ ಆಡಲು ಸಜ್ಜಾಗಿದೆ. ಡೇವಿಸ್‌ ಕಪ್‌ ಏಶ್ಯ-ಓಸಿಯಾನಿಯ ಗುಂಪು-1ರ ಸ್ಪರ್ಧೆಯ ಅಂಗವಾಗಿ ಭಾರತ ತಂಡ ಪಾಕಿಸ್ಥಾನಕ್ಕೆ ತೆರಳಲಿದೆ. ಸೆ. 14-15ರಂದು ಇಸ್ಲಮಾಬಾದ್‌ನಲ್ಲಿ ಪಾಕ್‌ ತಂಡವನ್ನು ಎದುರಿಸಲಿದೆ.

ಡೇವಿಸ್‌ ಕಪ್‌ ವಿಶ್ವ ಮಟ್ಟದ ಕೂಟವಾಗಿರುವುದರಿಂದ ಯಾವುದೇ ತಂಡಕ್ಕೆ ಇದರಿಂದ ಹಿಂದೆ ಸರಿಯಲು ಸಾಧ್ಯವಿಲ್ಲ. ಹಾಗೆ ಮಾಡಿದರೆ ಆ ತಂಡ ನಿಷೇಧಕ್ಕೊಳಗಾಗುವ ಸಾಧ್ಯತೆಯಿದೆ. ಇದೇ ಕಾರಣದಿಂದ ಪಾಕಿಸ್ಥಾನದಲ್ಲಿ ಡೇವಿಸ್‌ ಕಪ್‌ ಆಡಲು ಭಾರತ ಮುಂದಾಗಿದೆ.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ