ಈ ಭಾರತೀಯ ಕ್ರಿಕೆಟಿಗನ ಜೊತೆ ಕೆಲಸ ಮಾಡುವುದು ತುಂಬಾ ಸುಲಭ: ಗ್ಯಾರಿ ಕರ್ಸ್ಟನ್
Team Udayavani, May 29, 2020, 9:28 AM IST
ಹೊಸದಿಲ್ಲಿ: ದಕ್ಷಿಣ ಆಫ್ರಿಕಾ ತಂಡದ ಮಾಜಿ ಆಟಗಾರ ಗ್ಯಾರಿ ಕರ್ಸ್ಟನ್ ಟೀಂ ಇಂಡಿಯಾದಲ್ಲಿ ಕೋಚ್ ಆಗಿ ಸೇವೆ ಸಲ್ಲಿಸಿದವರು. 2008ರಿಂದ 2011ರವರೆಗೆ ಟೀಂ ಇಂಡಿಯಾವನ್ನು ಸಜ್ಜುಗೊಳಿಸಿದ ಗ್ಯಾರಿಯ ಕೋಚಿಂಗ್ ಅವಧಿಯಲ್ಲೇ ಟೀಂ ಇಂಡಿಯಾ ವಿಶ್ವಕಪ್ ಗೆದ್ದು ಬೀಗಿತ್ತು.
ತನ್ನ ಕೋಚಿಂಗ್ ದಿನಗಳ ಬಗ್ಗೆ ಮತನಾಡಿದ ಗ್ಯಾರಿ, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಜೊತೆಗೆ ಕೆಲಸ ಮಾಡುವುದು ತುಂಬಾ ಸುಲಭ. ಅವರ ವ್ಯಕ್ತಿತ್ವವೇ ಹಾಗೆ ಎಂದಿದ್ದಾರೆ.
ಟೀಂ ಇಂಡಿಯಾದಲ್ಲಿ ಕೋಚ್ ಆಗಿರುವುವುದಕ್ಕೆ ತುಂಬಾ ಖುಷಿ ಇದೆ. ಇದು ನನ್ನ ಜೀವನದ ಅದ್ಭುತ ಘಳಿಗೆಯಲ್ಲಿ ಒಂದು. ವಿಶ್ವಕಪ್ ಪ್ರಯಾಣದ ನೆನಪುಗಳು ಅಪೂರ್ವ. ವಿಶ್ವಕಪ್ ಗೆಲ್ಲಲು ತಂಡದ ಮೇಲೆ ತುಂಬಾ ಒತ್ತಡವಿತ್ತು, ಆದರೆ ತಂಡವನ್ನು ಅದನ್ನು ಉತ್ತಮವಾಗಿ ನಿಭಾಯಿಸಿತು ಎಂದಿದ್ದಾರೆ ಗ್ಯಾರಿ.
ವಿರಾಟ್ ಕೊಹ್ಲಿಯ ಬಗ್ಗೆ ಮಾತನಾಡಿದ ಅವರು, ನನ್ನ ಕೋಚಿಂಗ್ ಅವಧಿಯಲ್ಲೇ ವಿರಾಟ್ ತನ್ನ ಸಾಮರ್ಥ್ಯದ ಪರಿಚಯ ಮಾಡಿದ್ದ. ಈಗ ಶ್ರೇಷ್ಠ ಆಟಗಾರನಾಗಿ ಬೆಳೆದಿದ್ದಾನೆ ಎಂದರು.