ನಾಲ್ಕು ದಿನಗಳ ಟೆಸ್ಟ್ ಕ್ರಿಕೆಟ್: ಸಚಿನ್ ವಿರೋಧ
Team Udayavani, Jan 5, 2020, 11:32 PM IST
ಮುಂಬಯಿ: ಟೆಸ್ಟ್ ಕ್ರಿಕೆಟನ್ನು 4 ದಿನಕ್ಕೆ ಇಳಿಸುವ ಐಸಿಸಿ ಪ್ರಸ್ತಾವಕ್ಕೆ ಭಾರತೀಯ ಕ್ರಿಕೆಟಿಗರ ವಿರೋಧ ಮುಂದುವರಿದಿದೆ. ಎಲ್ಲರೂ ಇದನ್ನು ತಿರಸ್ಕರಿಸಿದ್ದಾರೆ. ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡುಲ್ಕರ್ ಕೂಡ ಈ ವಿರೋಧಕ್ಕೆ ತಮ್ಮ ದನಿ ಸೇರಿಸಿದ್ದಾರೆ.
“ಕ್ರಿಕೆಟ್ನ ಅತೀ ಶುದ್ಧ ರೂಪ ವೆಂದರೆ ಟೆಸ್ಟ್ ಪಂದ್ಯ. ಇದನ್ನು ಹದಗೆಡಿ ಸಬಾರದು. ನೀವು ಟಿ20ಯನ್ನು ಜಾರಿ ಮಾಡಿದಿರಿ, ಏಕದಿನ ತಂದಿರಿ, ಟಿ10 ಬಂತು. 100 ಎಸೆತಗಳ ಕ್ರಿಕೆಟ್ ಕೂಡ ಬಂತು. ಆದರೆ ಟೆಸ್ಟ್ ಕ್ರಿಕೆಟನ್ನು ಮಾತ್ರ ಬದಲಾಯಿಸಲು ಹೋಗಬೇಡಿ’ ಎಂದು ಸಚಿನ್ ಹೇಳಿದ್ದಾರೆ. ನಾಯಕ ಕೊಹ್ಲಿ, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಕೂಡ 4 ದಿನಗಳ ಟೆಸ್ಟ್ ಬೇಡ ಎಂಬ ಧಾಟಿಯಲ್ಲಿ ಮಾತಾಡಿದ್ದಾರೆ.