ಮುಂಬೈ ಕ್ರಿಕೆಟ್ ತಂಡದ ನಾಲ್ವರಿಗೆ ಕೋವಿಡ್
Team Udayavani, Oct 27, 2021, 8:53 PM IST
ಮುಂಬೈ: ಮುಂಬೈ ಕ್ರಿಕೆಟ್ ತಂಡ ಕೋವಿಡ್-19 ಸುಳಿಗೆ ಸಿಲುಕಿದೆ. ನಾಲ್ವರು ಆಟಗಾರರ ಫಲಿತಾಂಶ ಪಾಸಿಟಿವ್ ಬಂದಿದೆ. ಅಜಿಂಕ್ಯ ರಹಾನೆ ನೇತೃತ್ವದ ಮುಂಬೈ ತಂಡ ಸೈಯದ್ ಮುಷ್ತಾಖ್ ಅಲಿ ಟ್ರೋಫಿ ಟಿ20 ಸರಣಿಗಾಗಿ ಗುವಾಹಟಿಗೆ ತೆರಳಲು ಅಣಿಯಾಗಿತ್ತು.
ಆಗ ಮುಂಬೈ ವಿಮಾನ ನಿಲ್ದಾಣದಲ್ಲಿ ನಡೆಸಲಾದ ಕೋವಿಡ್ ಪರೀಕ್ಷೆಯಲ್ಲಿ ನಾಲ್ವರ ಫಲಿತಾಂಶ ಪಾಸಿಟಿವ್ ಬಂದಿದೆ. ಇವರನ್ನು ಅಲ್ಲಿಂದಲೇ ಮನೆಗೆ ಕಳುಹಿಸಲಾಯಿತು.
ಋಣಾತ್ಮಕ ಫಲಿತಾಂಶ ಪಡೆದವರು ಗುವಾಹಟಿಗೆ ಪ್ರಯಾಣ ಬೆಳೆಸಿದರು. ಆಲ್ರೌಂಡರ್ ಶಮ್ಸ್ ಮುಲಾನಿ, ಮಧ್ಯಮ ಕ್ರಮಾಂಕದ ಬ್ಯಾಟರ್ ಸರ್ಫರಾಜ್ ಖಾನ್, ಲೆಗ್ಸ್ಪಿನ್ನರ್ ಪ್ರಶಾಂತ್ ಸೋಲಂಕಿ ಮತ್ತು ಆಲ್ರೌಂಡರ್ ಸಾಯಿರಾಜ್ ಪಾಟೀಲ್ ಅವರದು ಪಾಸಿಟಿವ್ ಫಲಿತಾಂಶವಾಗಿತ್ತು. ನೆಗೆಟಿವ್ ಫಲಿತಾಂಶ ಬಂದೊಡನೆ ಇವರೆಲ್ಲ ತಂಡವನ್ನು ಸೇರಿಕೊಳ್ಳಬಹುದಾಗಿದೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯಾವಳಿ ನ.4ರಿಂದ ನ.22ರವರೆಗೆ ನಡೆಯಲಿದೆ.
ಇದನ್ನೂ ಓದಿ:ಹಿಂದೂಗಳ ನಡುವೆ ನಮಾಜ್ : ಹೇಳಿಕೆಗಾಗಿ ಕ್ಷಮೆಯಾಚಿಸಿದ ವಕಾರ್ ಯೂನಿಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 WC; ‘ಎಲ್ಲವೂ ಸುಳ್ಳು…’: ತಂಡದ ಆಯ್ಕೆ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ರೋಹಿತ್ ಶರ್ಮಾ
CSK; ಐಪಿಎಲ್ ನಿಂದ ಹೊರಬಿದ್ದ ಕಾನ್ವೆ; ಚೆನ್ನೈ ಪಾಳಯಕ್ಕೆ ಇಂಗ್ಲೆಂಡ್ ವೇಗಿ ಸೇರ್ಪಡೆ
IPL 2024; ಧೋನಿ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸುರೇಶ್ ರೈನಾ
T20 World Cup; ರೋಹಿತ್, ವಿರಾಟ್ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?
IPL; ಪಂಜಾಬ್ ಕಿಂಗ್ಸ್-ಮುಂಬೈ ಇಂಡಿಯನ್ಸ್ : ಒಂದೇ ದೋಣಿಯ ಪಯಣಿಗರು