ನಾರ್ವೆಯನ್ನು ಮಣಿಸಿದ ಫ್ರಾನ್ಸ್
Team Udayavani, Jun 14, 2019, 6:00 AM IST
ನೈಸ್ (ಫ್ರಾನ್ಸ್): ಆತಿಥೇಯ ಫ್ರಾನ್ಸ್ ವನಿತಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಅಜೇಯ ಓಟ ಬೆಳೆಸಿದೆ. ಬುಧವಾರ ರಾತ್ರಿಯ “ಎ’ ವಿಭಾಗದ ಪಂದ್ಯದಲ್ಲಿ ನಾರ್ವೆಯನ್ನು 2-1 ಗೋಲುಗಳಿಂದ ಮಣಿಸಿದೆ. ಇದಕ್ಕೂ ಮುನ್ನ ಫ್ರಾನ್ಸ್ 4-0 ಅಂತರದಿಂದ ದಕ್ಷಿಣ ಕೊರಿಯಾಕ್ಕೆ ಸೋಲುಣಿಸಿತ್ತು.”ಎ’ ವಿಭಾಗದ ಇನ್ನೊಂದು ಪಂದ್ಯದಲ್ಲಿ ನೈಜೀರಿಯಾ 2-0 ಅಂತರದಿಂದ ದಕ್ಷಿಣ ಕೊರಿಯಾವನ್ನು ಕೆಡವಿತು.